• Home
  • »
  • News
  • »
  • district
  • »
  • ಅಕ್ಕ ತಂಗಿಯನ್ನು ಒಂದೇ ಮುಹೂರ್ತದಲ್ಲಿ ವರಿಸಿದ ಮಾವ; ಕೋಲಾರದಲ್ಲಿ ನಡೆದಿದೆ ಅಪರೂಪದ ಮದುವೆ

ಅಕ್ಕ ತಂಗಿಯನ್ನು ಒಂದೇ ಮುಹೂರ್ತದಲ್ಲಿ ವರಿಸಿದ ಮಾವ; ಕೋಲಾರದಲ್ಲಿ ನಡೆದಿದೆ ಅಪರೂಪದ ಮದುವೆ

ಇಬ್ಬರನ್ನು ವರಿಸಿದ ವರ.

ಇಬ್ಬರನ್ನು ವರಿಸಿದ ವರ.

ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂಬ ಯೋಚನೆಯಲ್ಲಿ ಲಲಿತಾ ಸಹ ಇದ್ದಳು, ಹೀಗಾಗಿ  ತಂಗಿಯೊಂದಿಗೆ ಅಕ್ಕ ಸುಪ್ರಿಯಾಳನ್ನು ಮದುವೆಯಾಗು ಎನ್ನುವ ಮಾತನ್ನ ಪೋಷಕರು ಹೇಳಿದ್ದಾರೆ.

  • Share this:

ಕೋಲಾರ: ಸಾಮಾನ್ಯವಾಗಿ ಅಕ್ಕ ತಂಗಿಯರನ್ನು ಇಬ್ಬರನ್ನು ಒಂದೇ ಮುಹೂರ್ತದಲ್ಲಿ ವರನೊಬ್ಬ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬಹುಷಃ ನೋಡಲು ಸಿಗುವುದಿಲ್ಲ, ಏಕೆಂದರೆ ಒಂದೇ ಕುಟುಂಬದ ಅಕ್ಕ ತಂಗಿಯರು ಇಬ್ಬರು ಓರ್ವನನ್ನೆ ವರಿಸಲು ಈಗಿನ ಕಾಲದಲ್ಲೂ ಯಾರೂ ಸಹಜವಾಗಿ ಒಪ್ಪುವುದಿಲ್ಲ ಎನ್ನುವುದು ತಿಳಿದಿದೆ. ಆದರೆ, ಇಂತಹ ಘಟನೆ  ಸಿನಿಮಾದಲ್ಲಿ ನಡೆದಿರುವುದು ಅಲ್ಲ, ನೈಜ ಘಟನೆಯೊಂದು ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿನ ಸುಪ್ರಿಯಾ ಮತ್ತು ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎನ್ನುವವರ ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾನೆ.


ಕೋಲಾರದ ಪ್ರಸಿದ್ದ ಕುರುಡುಮಲೆ ದೇಗುಲದಲ್ಲಿ ಮದುವೆ ನಡೆದಿದ್ದು, ಮೇ ತಿಂಗಳ 7ರಂದು ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಆರತಕ್ಷತೆಯು ನೆರವೇರಿದೆ. ಇನ್ನು ಉಮಾಪತಿ ವರಿಸಿರುವ ಅಕ್ಕ ಸುಪ್ರಿಯಾ ಹುಟ್ಟು ಮೂಕಿಯಾಗಿದ್ದು, ಮಾತು ಬರುವುದಿಲ್ಲ. ಹೀಗಾಗಿ  ಸುಪ್ರಿಯಾ ತಂಗಿ ಲಲಿತಾಳನ್ನು ಮದುವೆಯಾಗಿದ್ದಾನೆ ವರ ಉಮಾಪತಿ. ಇನ್ನು ಮಾತು ಬಾರದ ಕಾರಣ ಸುಪ್ರಿಯಾಳನ್ನ ಯಾರು ಮದುವೆಯಾಗಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.


ಇನ್ನು ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂಬ ಯೋಚನೆಯಲ್ಲಿ ಲಲಿತಾ ಸಹ ಇದ್ದಳು, ಹೀಗಾಗಿ  ತಂಗಿಯೊಂದಿಗೆ ಅಕ್ಕ ಸುಪ್ರಿಯಾಳನ್ನು ಮದುವೆಯಾಗು ಎನ್ನುವ ಮಾತನ್ನ ಪೋಷಕರು ಹೇಳಿದ್ದಾರೆ. ಸ್ವಂತ ಅಕ್ಕ ರಾಣೇಮ್ಮ ಹೇಳಿದಂತೆ ಅಕ್ಕನ ಮಕ್ಕಳನ್ನೆ ಮದುವೆಯಾಗಿ ಈಗ ಮೂವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ಉಮಾಪತಿ ಕುಟುಂಬದಲ್ಲಿ ಇಬ್ಬರನ್ನು ವರಿಸಿದ ಘಟನೆ ಇದೇ ಮೊದಲಲ್ಲ;


ಇಬ್ಬರು ಯುವತಿಯರನ್ನ  ಮದುವೆಯಾದ ಫೋಟೋ ಹಾಗೂ ಮದುವೆ ಲಗ್ನಪತ್ರಿಕೆ ಪೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಾತು ಬಾರದ ಯುವತಿಗೆ ಬಾಳು ನೀಡಿದ್ದಕ್ಕೆ ಮೆಚ್ಚುಗೆಯು ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ಮಂದಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸುಪ್ರಿಯಾ,  ಲಲಿತಾ ಕುಟುಂಬದಲ್ಲಿ ಎರಡೆರಡು ಯುವತಿಯನ್ನ ವರಿಸಿರುವುದು ಇದೇ ಮೊದಲಲ್ಲ.


ಇದನ್ನೂ ಓದಿ: CoronaVirus: ಮೂರು ದಿನಗಳಲ್ಲಿ ನೂತನ ಆಮ್ಲಜನಕ ನೀತಿ,‌ 30 ಲಕ್ಷ ಸೋಂಕಿತರಿಗೆ ಮೆಡಿಕಲ್‌ ಕಿಟ್; ಅಶ್ವತ್ಥ್​ ನಾರಾಯಣ್


ಬದಲಾಗಿ ಇವರ ತಂದೆ ನಾಗರಾಜಪ್ಪ ಸಹ ಇಬ್ಬರು  ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ವಿಶೇಷವೆಂದರು, ರಾಣೇಮ್ಮ ಮತ್ತು ನಾಗರಾಜಪ್ಪ ದಂಪತಿಗು ಹುಟ್ಟಿದ ಮೂವರು ಮಕ್ಕಳಲ್ಲಿ ಒಂದು ಮಗುವಿಗೆ ಮಾತು ಬರುತ್ತಿರಲಿಲ್ಲ, ಇದೀಗ ಅಂತದ್ದೇ  ರೀತಿಯಲ್ಲಿ ಇಬ್ಬರನ್ನ ಉಮಾಪತಿ  ಮದುವೆ ಆಗಿದ್ದಾರೆ.


ಆರ್ಥಿಕವಾಗಿ ಸದೃಡತೆ ಇಲ್ಲದಿದ್ದರು, ಇಬ್ಬರನ್ನ ಸಮಾನವಾಗಿ ನೋಡಿಕೊಳ್ಳಿವುದಾಗಿ ಉಮಾಪತಿ ತಿಳಿಸಿದ್ದು, ಹಿರಿಯರ ಹಾಗು ಇಬ್ಬರು ಯುವತಿಯರ ಒಪ್ಪಿಗೆ ಮೇರೆಗೆ, ಮದುವೆಯಾಗಿರುವುದಾಗಿ ತಿಳಿಸಿದ್ದಾರೆ, ಆದರೆ ಮಾತು ಬಾರದ ಓರ್ವ ಹೆಣ್ಣು ಮಗು ಎರಡು ಬಾರಿ ಕುಟುಂಬದಲ್ಲಿ ಜನಿಸಿದ್ದು, ಈ ಘಟನೆಯ ಬಗ್ಗೆ ವೈದ್ಯಕೀಯ ಸಲಹೆಯನ್ನ ಪಡೆಯುವಂತೆ ನವ ಜೋಡಿಗೆ ಕುಟುಂಬದ ಹಿರಿಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ನೂತನ ಜೀವನಕ್ಕೆ ಕಾಲಿಟ್ಟಿರುವ ಇವರ ಜೀವನ ಸುಖಮಯವಾಗಿರಲಿ ಎಂಬುದು ನಮ್ಮ ಆಶಯವೂ ಆಗಿದೆ.

Published by:MAshok Kumar
First published: