HOME » NEWS » District » A PUTTURU BROTHERS SUCCESS IN OWNED INDUSTRY BUSINESS RH

ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆಗೆ ಮಾದರಿಯಾದ ಸವಣೂರಿನ ಸಹೋದರರು

ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಮೂಲಕ ಹತ್ತು ಲಕ್ಷ ರೂಪಾಯಿಗಳ ಸಾಲ ಪಡೆದು ಈ ಸಹೋದರರು ಈ ಪುಟ್ಟ ಉದ್ಯಮವನ್ನು ಆರಂಭಿಸಿದ್ದಾರೆ. ಪ್ರತೀ ಮನೆಗೆ ಅತೀ ಅಗತ್ಯವಾಗಿ ಬೇಕಾದ ಸಾಮಾಗ್ರಿಗಳನ್ನು ಗ್ರಾಮ ಮಟ್ಟದಲ್ಲೇ ತಯಾರಿಸಿ ಮನೆ ಮನೆಗೆ ಇವರೆ ವಿತರಿಸುತ್ತಿದ್ದಾರೆ.

news18-kannada
Updated:July 25, 2020, 4:59 PM IST
ಸ್ವ ಉದ್ಯಮದ ಮೂಲಕ ಆತ್ಮನಿರ್ಭಾರ್ ಭಾರತ ಚಿಂತನೆಗೆ ಮಾದರಿಯಾದ ಸವಣೂರಿನ ಸಹೋದರರು
ಕೆಲಸದಲ್ಲಿ ನಿರತರಾಗಿರುವ ಸಹೋದರರು.
  • Share this:
ಪುತ್ತೂರು; ವಿಭಿನ್ನ ಆಲೋಚನೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಯಾವುದೇ ಕಾರ್ಯ ಯಶಸ್ಸಾಗುವುದು ನಿಶ್ಚಿತ. ಹೀಗೆ ವಿಭಿನ್ನವಾಗಿ ಯೋಚಿಸಿ ಹುಟ್ಟು ಹಾಕಿದ ಸ್ವ ಉದ್ಯೋಗದಲ್ಲಿ ಸಹೋದರರಿಬ್ಬರು ಯಶಸ್ಸಿನ ಹತ್ತಿರ ಬಂದು ನಿಂತಿದ್ದಾರೆ. ಹೌದು,  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸವಣೂರಿನ ಸಹೋದರರಿಬ್ಬರ ಯಶಸ್ಸಿನ ಕಥೆ ಇದು.

ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ. ಸ್ವ ಉದ್ಯೋಗದಲ್ಲೂ ಇನ್ನೊಬ್ಬರ ಅನುಕರಣೆಯೇ ಈ ನಷ್ಟಕ್ಕೆ ಕಾರಣ ಎನ್ನಬಹುದಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಗ್ರಾಮವೊಂದರ ಸಹೋದರರಿಬ್ಬರು ತಮ್ಮ ಸ್ವ ಉದ್ಯೋಗದ ಮೂಲಕ ಹೆಸರುವಾಸಿಯಾಗಿದ್ದಾರೆ. ಕೋಟಿಗಟ್ಟಲೆ ಬಂಡವಾಳ ಹಾಕಿ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಾಗುವಂತಹ ಪರಿಕರಗಳನ್ನು ತಮ್ಮ ಮನೆಯಲ್ಲೇ ತಯಾರಿಸುವಲ್ಲಿ ಈ ಯುವಕರು ಯಶಸ್ವಿಯಾಗಿದ್ದಾರೆ.

ಸವಣೂರಿನ ಸಹೋದರರಾದ ರೋಷನ್ ಮತ್ತು ಪ್ರಕಾಶ ಸ್ವ ಉದ್ಯೋಗದ ಮೂಲಕ ಯಶಸ್ವಿಯಾದ ಯುವಕರಾಗಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಮನೆಗಳಿಗೂ ಅತೀ ಅಗತ್ಯವಾಗಿ ಬೇಕಾಗಿರುವಂತಹ ತಾಮ್ರದ ತಟ್ಟೆ, ತಾಮ್ರದ ಹರಿವಾಣ, ತಾಮ್ರದ ಹಂಡೆಗಳನ್ನು ಈ ಯುವಕರು ಸಣ್ಣ ಬಂಡವಾಳ ಹಾಕಿ ಖರೀದಿಸಿದ ಕೈಯಿಂದಲೇ ತಯಾರಿಸುತ್ತಿದ್ದಾರೆ. ಅಲ್ಲದೆ ಕರಾವಳಿಯಲ್ಲಿ ಆಚರಿಸಲ್ಪಡುವ ದೈವಾರಾಧನೆಗೆ ಬೇಕಾದ ಸಲಕರಣೆಗಳನ್ನೂ ಈ ಯುವಕರು ತಮ್ಮ ಮನೆಯಲ್ಲೇ ತಯಾರಿಸುತ್ತಿದ್ದಾರೆ. ದೈವದ ಕತ್ತಿ, ದೈವಗಳ ಮುಖವಾಡ, ದೈವಗಳ ಕಾರ್ಯಕ್ಕೆ ಬೇಕಾದಂತಹ ಇತರ ಸಲಕರಣೆಗಳನ್ನು ಹೆಚ್ಚಾಗಿ ಕೈಯಿಂದಲೇ ತಯಾರಿಸಲಾಗುತ್ತಿದೆ.

ತಾವೇ ದುಡಿದು ಕಟ್ಟಿದ ಸ್ವ ಉದ್ಯೋಗದಲ್ಲಿ ಇದೀಗ ಐವರು ಕೆಲಸಗಾರರೂ ಸೇರಿಕೊಂಡಿದ್ದಾರೆ. ಪುತ್ತೂರು ಹಾಗೂ ಇತರ ಭಾಗಗಳಿಂದ ಇವರ ಪುಟ್ಟ ಅಂಗಡಿಯಲ್ಲಿ ತಯಾರಾದ ಪರಿಕರಗಳಿಗೆ ಹೆಚ್ಚಿನ ಬೇಡಿಕೆಯೂ ಬರುತ್ತಿದೆ. ತಮ್ಮ ಉದ್ಯಮಕ್ಕೆ ಬೇಕಾದ ಮೂಲ ವಸ್ತುಗಳನ್ನು ರಾಜ್ಯದ ವಿವಿಧ ಭಾಗಗಳಿಂದ ತರಿಸಿಕೊಂಡು, ಆ ವಸ್ತುಗಳಿಂದಲೂ ವಿವಿಧ ರೀತಿಯ ಪರಿಕರಗಳನ್ನು ತಯಾರು ಮಾಡಲಾಗುತ್ತದೆ. ಅಲ್ಲದೆ ಜನರಿಂದ ಆರ್ಡರ್ ಪಡೆದ ವಸ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿರುವುದರಿಂದ ಯುವಕರ ಬದ್ಧತೆಗೆ ಗ್ರಾಮಸ್ಥರೂ ಖುಷಿಯಾಗಿದ್ದಾರೆ.

ಸಹೋದರರು ತಯಾರಿಸಿರುವ ಪಾತ್ರೆಗಳು.


ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಮೂಲಕ ಹತ್ತು ಲಕ್ಷ ರೂಪಾಯಿಗಳ ಸಾಲ ಪಡೆದು ಈ ಸಹೋದರರು ಈ ಪುಟ್ಟ ಉದ್ಯಮವನ್ನು ಆರಂಭಿಸಿದ್ದಾರೆ. ಪ್ರತೀ ಮನೆಗೆ ಅತೀ ಅಗತ್ಯವಾಗಿ ಬೇಕಾದ ಸಾಮಾಗ್ರಿಗಳನ್ನು ಗ್ರಾಮ ಮಟ್ಟದಲ್ಲೇ ತಯಾರಿಸಿ ಮನೆ ಮನೆಗೆ ಇವರೆ ವಿತರಿಸುತ್ತಿದ್ದಾರೆ. ದೈವಾರಾಧನೆಯಿಂದ ಹಿಡಿದು, ಪ್ರತಿ ಮನೆಗೂ ಬೇಕಾದ ತಾಮ್ರದ ವಸ್ತುಗಳನ್ನು ತಯಾರಿಸುವ ಮೂಲಕ ಸವಣೂರಿನ ಈ ಸಹೋದರರು ಯಶಸ್ವಿ ಉದ್ಯಮಿಗಳಾಗಿಯೂ ಗುರುತಿಸಿಕೊಂಡಿದ್ದಾರೆ.

ಇದನ್ನು ಓದಿ: ಜೀವದ ಹಂಗು ತೊರೆದು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಐವರನ್ನು ರಕ್ಷಿಸಿದ ಗ್ರಾಮಸ್ಥರು

ಯುವಕರ ಈ ಉತ್ಸಾಹಕ್ಕೆ ಗ್ರಾಮದ ಜನತೆಯ ಪ್ರೋತ್ಸಾಹವೂ ದೊರೆತಿದ್ದು, ತಮಗೆ ಬೇಕಾದ ವಸ್ತುಗಳನ್ನು ಈ ಯುವಕರಿಂದಲೇ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸವಣೂರು ನಿವಾಸಿ ಕಿಟ್ಟಣ್ಣ. ಉದ್ಯಮದಲ್ಲೂ ಇನ್ನೊಬ್ಬರ ಅನುಕರಣೆ ಮಾಡುವುದರ ಬದಲು ತಮ್ಮದೇ ವಿಭಿನ್ನ ಆಲೋಚನೆಯ ಉದ್ಯಮವನ್ನು ಆರಂಭಿಸಿದ್ದಲ್ಲಿ ಯಶಸ್ಸು ಸಾಧ್ಯ ಎನ್ನುವುದನ್ನು ಈ ಯುವಕರು ತೋರಿಸಿಕೊಟ್ಟಿದ್ದಾರೆ.
Published by: HR Ramesh
First published: July 25, 2020, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading