ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ದಾಳಿ; 7 ಜನರ ಮೇಲೆ ಪ್ರಕರಣ ದಾಖಲು

ರಾಜ್ಯ ಸರ್ಕಾರ ಈ ಎಲ್ಲಾ ಕಿಡಿಗೇಡಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇವರೆಲ್ಲ ಬಿಜೆಪಿ ಕುಮ್ಮಕ್ಕಿನಿಂದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಸಚಿವ ಶಿವರಾಜ್‌ ತಂಗಡಗಿಕಿಡಿಕಾರಿದ್ದಾರೆ.

news18-kannada
Updated:August 9, 2020, 4:02 PM IST
ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ದಾಳಿ; 7 ಜನರ ಮೇಲೆ ಪ್ರಕರಣ ದಾಖಲು
ಕಾಂಗ್ರೆಸ್‌ ನಾಯಕರ ಪತ್ರಿಕಾಗೋಷ್ಠಿ.
  • Share this:
ಕೊಪ್ಪಳ: ರಾಜ್ಯ ಬಿಜೆಪಿ  ಸರ್ಕಾರದ ಕಳೆದ ಒಂದು ವರ್ಷದ ಸಾಧನೆಗಳೇನು? ಎಂಬ ನನ್ನ ಒಂದೇ ಒಂದು ಫೇಸ್ ಬುಕ್ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಶ್ಲೀಲ ಕಮೆಂಟ್‌ಗಳ ದಾಳಿ ಆರಂಭಿಸಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಗಂಗಾವತಿಯ ಕಾಂಗ್ರೆಸ್ ಕಾರ್ಯಕರ್ತೆ ಶೈಲಜಾ ಹಿರೇಮಠ ಆರೋಪಿಸಿದ್ದಾರೆ.

ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಜೊತೆ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, "ಕಳೆದ‌ ಜುಲೈ 31 ರಂದು ನಾನು ನನ್ನ ಪೇಜ್ ನಲ್ಲಿ 'ರಾಜ್ಯ ಬಿಜೆಪಿ ಒಂದು ವರ್ಷದ ಸಾಧನೆ ಏನು? ಒಬ್ಬರಿಗೆ ಒಂದೇ ಉತ್ತರದ ಅವಕಾಶ' ಎಂದು ಮಾಡಿದ ಪೋಸ್ಟ್ ಗೆ ಕಮೆಂಟ್ ಮಾಡಲಾಗಿದೆ.

ಮಹಿಳೆಯರು ಕಿವಿಯಿಂದ ಕೇಳಲು ಹಾಗೂ ಯಾರಿಗೂ ಹೇಳಲು ಆಗದ ಕೆಟ್ಟ ಪದಗಳನ್ನು ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ. ಇವರಿಗೆಲ್ಲ ಅಕ್ಕ- ತಂಗಿ,‌ ತಾಯಿ ಇದ್ದಾರೋ ಇಲ್ಲವೋ? ಎಂಬ ಅನುಮಾನ ಮೂಡುತ್ತಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಇಂಥ ಹತ್ತಾರು ಸಮಸ್ಯೆ ಎದುರಿಸಿಕೊಂಡು ಬೆಳೆದ ನಾನೇ ಸಾಕಷ್ಟು ನೋವು ಉಂಡಿದ್ದೇನೆ. ಈ ಕಮೆಂಟ್ ನೋಡಿ ನನಗೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವಾಗಿತ್ತು" ಎಂದು ಕಾಂಗ್ರೆಸ್‌ ಕಾರ್ಯಕರ್ತೆ ಶೈಲಜಾ ಹಿರೇಮಠ ಭಾವುಕರಾಗಿದ್ದಾರೆ.

"ಇವರ ಫೇಸ್ ಬುಕ್ ಪೇಜ್ ನೋಡಿದರೆ ಇವರೆಲ್ಲ ಬಿಜೆಪಿ ಮತ್ತು ಆರ್‌ಎಸ್ಎಸ್ ನವರು ಎಂಬುದು ಖಚಿತವಾಗುತ್ತದೆ. ತೀರಾ ಅಶ್ಲೀಲವಾಗಿ, ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ 7 ಜನ ಸೇರಿದಂತೆ ಇತರರ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಭೀಮನಗೌಡ ಬಿರಾದಾರ, ಜಯರಾಮ ಶ್ರೀನಿವಾಸ, ಯುವರಾಜ ರೆಡ್ಡಿ ಸೇರಿ 7 ಜನರ ವಿರುದ್ಧ ಎಪ್ಐಆರ್ ದಾಖಲು ಮಾಡಿದ್ದೇನೆ.

ರಾಜ್ಯ ಸರ್ಕಾರ ಈ ಎಲ್ಲಾ ಕಿಡಿಗೇಡಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇವರೆಲ್ಲ ಬಿಜೆಪಿ ಕುಮ್ಮಕ್ಕಿನಿಂದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ" ಎಂದು ಅವರು ಕಿಡಿಕಾರಿದ್ದಾರೆ.

"ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಸಭ್ಯ ಭಾಷೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುವ ಮಹಿಳೆಯರಿಗೆ ಬಿಜೆಪಿಯವರು ಅವಾಚ್ಯ‌ ಶಬ್ದ ಬಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಯಾರೂ ಪ್ರಶ್ನೆ ಮಾಡಬಾರದು ಎಂಬುದಕ್ಕೆ ದೇಶದಲ್ಲಿರೋದು ಸದ್ದಾಂ ಹುಸೇನ್, ಹಿಟ್ಲರ್ ಆಡಳಿತ ಅಲ್ಲ. ಬಿಜೆಪಿಯವರು ರಾಮಭಕ್ತರು, ಸಂಸ್ಕಾರವಂತರು ಎಂದು ಹೇಳುತ್ತಾರೆ.ಇದನ್ನೂಓದಿ : ಬ್ರಹ್ಮಗಿರಿ ದುರಂತ: ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.​​​ ​ಅಶೋಕ್​​ ಸೂಚನೆ

ಆದರೆ, ಸಾರ್ವಜನಿಕವಾಗಿ ಬಳಸದ ಪದಗಳಲ್ಲಿ ಕಮೆಂಟ್ ಮಾಡುತ್ತಾರೆ.‌ ಈಗಾಗಲೇ ಎಫ್ಐಆರ್ ದಾಖಲಾಗಿದೆ, ಒಂದು ವಾರ ಗಡುವು ನೀಡಿದ್ದೇವೆ. ಪೊಲೀಸರು ಅಷ್ಟರಲ್ಲಿ ಆರೋಪಿಗಳನ್ನು ಪತ್ತೆ ಮಾಡಬೇಕು.‌ ಇಲ್ಲವಾದರೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗುವುದು" ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

"ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ, ಬಿಜೆಪಿ ವಿರುದ್ಧ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಬರೆದರೆ, ಅಂಥವರನ್ನು ಹತ್ತು ನಿಮಿಷದಲ್ಲಿ‌ ಹಿಡಿದು ತರುವ ಪೊಲೀಸರಿಗೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ವಾರದ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಬಂಧಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಲ್ಲಿ ಬಿಜೆಪಿಯದ್ದು ತುಘಲಕ್ ದರ್ಬಾರ್. ಬೇಕಾದವರಿಗೆ ಒಂದು, ಬೇಡವಾದವರಿಗೆ ಮತ್ತೊಂದು" ಎಂದು ತಂಗಡಗಿ ಹರಿಹಾಯ್ದರು.
Published by: MAshok Kumar
First published: August 9, 2020, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading