ಬಾಳೆ ಬೆಳೆಗೆ ಸಿಗದ ಸೂಕ್ತ ಬೆಲೆ ; ಬೇಸತ್ತ ರೈತನಿಂದ ಬಾಳೆ ಗಿಡ ಕಡಿದು ಆಕ್ರೋಶ

ಸಾಲ ಮಾಡಿ ಬೆಳೆದ ಬಾಳೆ ಹಣ್ಣಿನ ಬೆಳೆ ಕೈಗೆ ಸಿಕ್ಕರೂ ಮಾರುಕಟ್ಟೆಗಳಲ್ಲಿ ಬೆಲೆ ಇಲ್ಲ. ಹೀಗಾಗಿ ಸರ್ಕಾರ ಬಾಳೆ ಹಣ್ಣು ಬೆಳೆದ ರೈತರಿಗೆ ಪರಿಹಾರದ ಜೊತೆಗೆ ಬಾಳೆ ಹಣ್ಣು‌ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಇಲ್ಲಿನ ಆಗ್ರಹಿಸಿದ್ದಾರೆ.

ಬಾಳೆ ಗಿಡ ಕಡಿಯುತ್ತಿರುವ ರೈತ

ಬಾಳೆ ಗಿಡ ಕಡಿಯುತ್ತಿರುವ ರೈತ

  • Share this:
ಚಿಕ್ಕೋಡಿ(ಅಕ್ಟೋಬರ್​. 10): ಸಾಲ ಸೋಲ ಮಾಡಿ ಬೆಳೆದ ಬಾಳೆ ಹಣ್ಣಿಗೆ ಬೆಲೆ ಇಲ್ಲದೇ ಬೇಸತ್ತ ರೈತ ಬಾಳೆ ಗಿಡಗಳನ್ನು ಕಡೆದು ಸರ್ಕಾರದ ವಿರುದ್ದ ಕಿಡಿ ಕಾರಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ. ಕೊರೋನಾ ಮಹಾಮಾರಿ ದೇಶಕ್ಕೆ ವಕ್ಕರಿಸಿದ್ದೆ ಅಂದಿನಿಂದ ಇಂದಿನವರೆಗೂ ದೇಶದ ಎಲ್ಲಾ ವಲಯಗಳು ನೆಲ ಕಚ್ಚಿವೆ ಎಲ್ಲಾ ರೀತಿಯ ಬಹುತೇಕ ಉದ್ಯಮಗಳು ಸ್ಥಬ್ದವಾಗಿವೆ. ಜನ ಕೆಲಸ ವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಕೂಡ ತೀರ ಕುಸಿದಿದೆ. ಇದೆಲ್ಲದರ ಮಧ್ಯೆ ದೇಶಕ್ಕೆ ಅಣ್ಣ ಹಾಕುವ ಅನ್ನದಾತನ ಬೆನ್ನೆಲುಬು ಕೂಡ ಮೂರಿದೆ. ಲಾಕ್ ಡೌನ್ ಸಮಯದಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ ನೆಲಕ್ಕೆ ಸುರಿದಿದ್ದನ್ನ ನಾವು ನೋಡಿದ್ದೇವೆ. ಆದರೆ, ಈಗ ಅನ್​​ಲಾಕ್‌ ಆದರು ಸಹ ರೈತರ ಸಮಸ್ಯೆ ಮಾತ್ರ ಬಗೆಹರಿಸಲು ಸಾಧ್ಯವಾಗಿಲ್ಲ.

ಸದ್ಯ ಈಗ ರೈತರನ್ನ ಕಾಡುತ್ತಿರುವುದು ಸೂಕ್ತ ಬೆಲೆ ರೈತ ತಾನು ಬೆಳೆಗೆ  ಸೂಕ್ತ ಬೆಲೆ ಸಿಗದ ಹಿನ್ನಲೆ ರೈತ ಮತ್ತೊಮ್ಮೆ ಕಷ್ಟದ ಸುಳಿಗೆ ಸಿಲುಕಿ ಕೊಂಡಿದ್ದಾನೆ. ತನಗೆ ಆದ ಕಷ್ಟವನ್ನ ಹೇಳಿಕೊಳ್ಳಲಾಗದೆ ತನ್ನ ಬೆಳೆಯನ್ನೆ ನಾಶ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ

ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಗಂಗಪ್ಪ ಹಳ್ಳೋಳ್ಳಿ ಎಂಬ ಯುವ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಹಣ್ಣಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ತಾನೂ ಬೆಳೆದ ಬಾಳೆ ಹಣ್ಣಿನ ಗಿಡಗಳನ್ನು ಕಡಿದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಒಂದು ಟನ್ ಬಾಳೆ ಹಣ್ಣಿಗೆ 12 ರಿಂದ 15 ಸಾವಿರದ ವರೆಗೆ ಬೆಲೆ ಇರುತ್ತಿತ್ತು. ಆದರೆ, ಈ ಬಾರಿ ಕೇವಲ ಮೂರು ಸಾವಿರದಿಂದ ನಾಲ್ಕು ಸಾವಿರದ ವರಗೆ ಒಂದು ಟನ್ ಬಾಳೆ ಹಣ್ಣಿಗೆ ಬೆಲೆ ಸಿಗುತ್ತಿದೆ. ಇಷ್ಟು ಹಣಕ್ಕೆ ಬಾಳೆ ಹಣ್ಣನ್ನು ಮಾರಾಟ ಮಾಡಲು ಸಾಗಾಟದ ಖರ್ಚಿಗೂ ಆಗಲ್ಲ ಅಷ್ಟರ ಮಟ್ಟಿಗೆ ಬೆಲೆ ಕುಸಿದಿದೆ.

ಇನ್ನು ಚಿಕ್ಕೋಡಿ ಭಾಗದಲ್ಲಿ ಸರಿಯಾದ ಮಾರುಕಟ್ಟೆಗಳಿಲ್ಲದೆ ನಾವೂ ಬೆಳಗಾವಿ ಮಾರುಕಟ್ಟೆಗೆ ಇಲ್ಲವೇ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಗೆ ಹೋಗಬೇಕು ಹತ್ತು ಟನ್ ಬಾಳೆ ಹಣ್ಣನ್ನು ಬೆಳಗಾವಿ ಮಾರುಕಟ್ಟೆಗೆ ಸಾಗಿಸಬೇಕಾದರೆ 8 ರಿಂದ 10 ಸಾವಿರ ಖರ್ಚಾಗುತ್ತದೆ ಅಷ್ಟು ಹಣ ಬಾಳೆ ಮಾರಿದರು ಸಿಗಲ್ಲ ಎಂದು ರೈತ ತನ್ನ ನೋವನ್ನು ತೋಡಿಕೊಂದಿದ್ದಾನೆ.

ಇದನ್ನೂ ಓದಿ : ಶಾಲೆಗಳನ್ನು ತೆರೆಯುವ ಧಾವಂತ ಸರ್ಕಾರಕ್ಕಾಗಲಿ, ಶಿಕ್ಷಣ ಇಲಾಖೆಗಾಗಲಿ ಇಲ್ಲ; ಸಚಿವ ಸುರೇಶ್ ಕುಮಾರ್

ರೈತ ದೇಶದ ಬೆನ್ನೆಲಬು ಎಂದು ಹೇಳುವ ಸರ್ಕಾರ ಮಾತ್ರ ರೈತರ ಕಡೆ ಗಮನ ಹರಿಸುತ್ತಿಲ್ಲ. ಕೇವಲ ಬಂಡವಾಳ ಶಾಹಿಗಳಿಗೆ ಹಣ ಹೂಡಿಕೆ ಮಾಡುಲು‌ ಮುಂದಾಗುತ್ತಿರುವ ಸರ್ಕಾರ. ರೈತರ ಕಡೆ ಗಮನ ಹರಿಸುತ್ತಿಲ್ಲ. ಸಾಲ ಮಾಡಿ ಬೆಳೆದ ಬಾಳೆ ಹಣ್ಣಿನ ಬೆಳೆ ಕೈಗೆ ಸಿಕ್ಕರೂ ಮಾರುಕಟ್ಟೆಗಳಲ್ಲಿ ಬೆಲೆ ಇಲ್ಲ. ಹೀಗಾಗಿ ಸರ್ಕಾರ ಬಾಳೆ ಹಣ್ಣು ಬೆಳೆದ ರೈತರಿಗೆ ಪರಿಹಾರದ ಜೊತೆಗೆ ಬಾಳೆ ಹಣ್ಣು‌ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಇಲ್ಲಿನ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸದಾ ಸಂಕಷ್ಟದಲ್ಲೆ ಜೀವನ ಸಾಗಿಸಿ ಜನರ ಹೊಟ್ಟೆ ತುಂಬಿಸುವ ರೈತನ ಹೊಟ್ಟೆ ಮಾತ್ರ ತುಂಬುತ್ತಿಲ್ಲಾ. ಇಂತಹ ಸಂಕಷ್ಟದಲ್ಲಿನ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುವ ಕೆಲಸಕ್ಕೆ ಮುಂದಾಗಬೇಕಿದೆ.
Published by:G Hareeshkumar
First published: