ಲಾಕ್ ಡೌನ್ ಎಫೆಕ್ಟ್ ಬೀದಿಗೆ ಬಿದ್ದ ಬಡ ಕುಟುಂಬ ; ನ್ಯೂಸ್ 18 ಕನ್ನಡ ವರದಿಗೆ ಸ್ಪಂಧಿಸಿದ ಅಧಿಕಾರಿಗಳು

ಕಮಲ್ ಮೀರಜಕರ್ ಕುಟುಂಬದ ಕಣ್ಣಿರಿನ ಕಥೆಯ ಬಗ್ಗೆ ಇಂದು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ತಕ್ಷಣ ಸ್ಪಂಧಿಸಿದ ಕನ್ನಡ ಕ್ರೀಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಚಂದರಗಿ ಸ್ಥಳಕ್ಕೆ ಕುಟುಂಬದ ನೋವಿಗೆ ಸ್ಪಂಧಿಸಿದರು

ಮೈದಾನದ ಪ್ರೇಕ್ಷಕರ ಗ್ಯಾಲರಿಗೆ ಕೆಳಗೆ ಜೀವನ ನಡೆಸುತ್ತಿರುವ  ಕಮಲ್ ಮೀರಜಕರ್ ಕುಟುಂಬ

ಮೈದಾನದ ಪ್ರೇಕ್ಷಕರ ಗ್ಯಾಲರಿಗೆ ಕೆಳಗೆ ಜೀವನ ನಡೆಸುತ್ತಿರುವ ಕಮಲ್ ಮೀರಜಕರ್ ಕುಟುಂಬ

  • Share this:
ಬೆಳಗಾವಿ(18): ದೇಶದಲ್ಲಿ ಕೊವಿಡ್ -19 ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈ ಲಾಕ್ ಡೌನ್ ಎಫೆಕ್ಟ್ ಬಡವರು ಮದ್ಯಮ ವರ್ಗಕ್ಕೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ನೀಡಿದೆ. ಲಾಕ್ ಡೌನ್ ಎಫೆಕ್ಟ್ ನಿಂದ ಕೆಲಸ ಸಿಗದೇ ಬಡ ಕುಟುಂಬವೊಂದು ಬೀದಿ ಪಾಲಾಗಿದೆ. ಮೈದಾನದ ಪ್ರೇಕ್ಷಕರ ಗ್ಯಾಲರಿಗೆ ಕೆಳಗೆ ಜೀವನ ನಡೆಸುವ ಮನಕಲಕುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಸಂಭಾಜೀ ಉದ್ಯಾನದ ಪ್ರೇಕ್ಷಕರ ಗ್ಯಾಲರಿ ಕೆಳಗೆ ಇರುವ ಜಾಗದಲ್ಲಿ ಬಡ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ವಾಸವಿದೆ. ಈ ಕುಟುಂಬದಲ್ಲಿ ಶಂಕರ್ ಹಾಗೂ ಕಮಲ್ ಎಂಬ ದಂಪತಿ ಇದ್ದು ಓರ್ವ ಪುತ್ರ ಇದ್ದಾನೆ. ಶಂಕರ್ ಪಾರ್ಶ್ವವಾಯು ನಿಂದ ಬಳಲುತ್ತಿದ್ದು ಪುತ್ರ ಮಾನಸಿಕ ಅಸ್ವಸ್ಥನಾಗಿದ್ದಾನೆ. ಕುಟುಂಬ ಸಾಕಬೇಕಿದ್ದ ಕಲಮ್ ಲಾಕ್ ಡೌನ್ ಎಫೆಕ್ಟ್ ನಿಂದ ಕೆಲಸ ಕಳೆದುಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಡಿಗೆ ಕಟ್ಟಿಲ್ಲ ಎಂದು ಮನೆ ಮಾಲೀಕರು ಮನೆಯನ್ನು ಖಾಲಿ ಮಾಡಿಸಿದ್ದಾರೆ.

ಮಧ್ವ ರಸ್ತೆಯಲ್ಲಿ ಇರುವ ಮನೆಯೊಂದರಲ್ಲಿ ಕಳೆದ 7 ವರ್ಷಗಳಿಂದ ಈ ಕಮಲ್ ಕುಟುಂಬ ವಾಸವಿತ್ತು. ಮನೆ ಬಾಡಿಗೆ ಬದಲಾಗಿ ಅವರ ಮನೆಯಲ್ಲಿ ಕಮಲ್ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ 1 ತಿಂಗಳಿಂದ ಕಮಲ್ ಕುಟುಂಬವನ್ನು ಮನೆ ಮಾಲೀಕರು ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಸ್ವಲ್ಪ ಸಮಯ ಕೇಳಿದರು ಇದಕ್ಕೆ ಮನೆ ಮಾಲೀಕರು ಅವಕಾಶ ಕೊಟ್ಟಿಲ್ಲ. ಮನೆಯ ವಸ್ತುಗಳನ್ನು 5 ದಿನಗಳ ಹಿಂದೆ ಹೊರಗೆ ಹಾಕಲಾಗಿತ್ತು.

ಬಾಡಿಗೆ ಕಟ್ಟಲು ಹಣವು ಇಲ್ಲ, ಕೆಲಸವು ಇಲ್ಲ ಹೀಗೆ ಕಮಲ್ ಕುಟುಂಬ ಸಂಷಕ್ಟಕ್ಕೆ ಸಿಲುಕಿತ್ತು. ಉದ್ಯಾನ ಪ್ರೇಕ್ಷಕರ ಗ್ಯಾಲರಿಯ ಕೆಳಗೆ ಇರುವ ಚಿಕ್ಕ ಜಾಗದಲ್ಲಿ ವಾಸ ಮಾಡಲು ಆರಂಭಿಸಿದ್ದರು. ಸ್ಥಳೀಯರು ಸ್ವಲ್ಪ ಆಹಾರ ಸೇರಿ ಇತರೇ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ :  ಒಂದೇ ಕಾಮಗಾರಿಗೆ ಎರಡು ಬಾರಿ ಭೂಮಿ ಪೂಜೆ - ಎರಡು ವರ್ಷಗಳಾದ್ರೂ ಆರಂಭಗೊಳ್ಳದ ಕಾಮಗಾರಿ

ಕಮಲ್ ಮೀರಜಕರ್ ಕುಟುಂಬದ ಕಣ್ಣಿರಿನ ಕಥೆಯ ಬಗ್ಗೆ ಇಂದು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ತಕ್ಷಣ ಸ್ಪಂಧಿಸಿದ ಕನ್ನಡ ಕ್ರೀಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಚಂದರಗಿ ಸ್ಥಳಕ್ಕೆ ಬಂದು ಮಹಿಳೆಯ ನೋವಿಗೆ ಸ್ಪಂಧಿಸಿದರು. ಕುಟುಂಬಕ್ಕೆ ಬೇಕಾದ ಆಹಾರ ಕಿಟ್ ವಿತರಣೆ ಮಾಡಿದರು. ಅಷ್ಟೇ ಅಲ್ಲ ಖರ್ಚಿಗೆ ಹಣವನ್ನು ನೀಡಿ ಮನೆಯ ಬಾಡಿಗೆ ಕೊಡುವ ಭರವಸೆ ನೀಡಿದರು.

ನಂತರ ಮಹಾನಗರ ಪಾಲಿಕೆ ಎಇಇ ಸೇರಿ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಲಮ್ ಜತೆಗೆ ಮಾತುಕತೆ ನಡೆಸಿದರು. ಜತೆಗೆ ಸಮಾಜ ಕಲ್ಯಾಣ ಇಲಾಖೆಯ ಸೆಲ್ಟರ್ ಗೆ ಬಡ ಕುಟುಂಬವನ್ನು ಪಾಲಿಕೆ ವಾಹನದಲ್ಲಿ ಶಿಫ್ಟ್ ಮಾಡಿದರು. ಶಂಕರ್ ಹಾಗೂ ಪುತ್ರನ ಚಿಕಿತ್ಸೆಯನ್ನು ನಾವೇ ನೋಡುತ್ತೇವೆ ಎಂದು ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
First published: