ಪ್ರವಾಹ ಪೀಡಿತ ಪ್ರದೇಶದಲ್ಲಿ ಪಿಎಸ್ಐಗೆ ಚೆಲ್ಲಾಟ ; ಸಂತ್ರಸ್ತರಿಗೆ ಪ್ರಾಣ ಸಂಕಟ

ಪ್ರವಾಹದ ವೇಳೆ ಜೀವದ ಹಂಗು ತೊರೆದು ಎಷ್ಟೋ ಅಧಿಕಾರಿಗಳು ನೆರೆ ಸಂತ್ರಸ್ತರ ರಕ್ಷಣೆಗೆ ಶ್ರಮಿಸುದ್ದಾರೆ. ಆದರೆ ಈ ಸಿನಿಮಾ ಸ್ಟೈಲ್ ಸಿಂಗಂ ಮಾತ್ರ ನಾಯಕನ ರೀತಿ ತೋರಿಸಲು ನೆರೆಪೀಡಿತ ಪ್ರದೇಶದ ಜನರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಾರೆ

ಪಿಎಸ್ಐ ಎಂ.ಎಸ್.ಯಲಗೋಡ

ಪಿಎಸ್ಐ ಎಂ.ಎಸ್.ಯಲಗೋಡ

  • Share this:
ಕಲಬುರ್ಗಿ(ಅಕ್ಟೋಬರ್​. 22): ಭೀಮಾ ನದಿಯ ಪ್ರವಾಹಕ್ಕೆ ನದಿ ಪಾತ್ರದ ಜನರ ಬದುಕೇ ನಲುಗಿದೆ. ತೀವ್ರ ಸಂಕಷ್ಟಕ್ಕೆ ಗುರಿಯಾದ ಸಂತ್ರಸ್ತರನ್ನು ರಕ್ಷಿಸಬೇಕಿದ್ದ ಅಧಿಕಾರಿಯೊಬ್ಬರು ಪ್ರವಾಹ ಸಂತ್ರಸ್ತರ ಜೊತೆ ಹುಚ್ಚಾಟ ನಡಸಿದ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪ್ರವಾಹದ ಸಂಕಷ್ಟದ ಸಂದರ್ಭದಲ್ಲಿಯೂ ಪಿಎಸ್ಐ ಹುಚ್ಚಾಟ ನಡೆಸಿರುವ ಘಟನೆ ಜೇವರ್ಗಿಯ ಕೂಡಲಗಿ ಗ್ರಾಮದಲ್ಲಿ ನಡೆದಿದೆ. ಬಟ್ಟೆ ತೊಯ್ಯಬಾರದೆಂದು ಮೀನುಗಾರರ ತೆಪ್ಪದಲ್ಲಿ ಹೋಗುವ ಅಧಿಕಾರಿ, ಪ್ರವಾಹದ ನೀರಿನಲ್ಲಿಯೇ ಗ್ರಾಮಸ್ಥರ ಮೂಲಕ ತೆಪ್ಪ ತಳ್ಳಿಸಿಕೊಂಡು ಹೋಗಿದ್ದಾರೆ. ಮೀನು ಹಿಡಿಯಲು ಬಳಸುವ ಎರಡು ತೆಪ್ಪಗಳ ಮೇಲೆ ಎರಡು ಕಾಲಿಟ್ಟು ಸಿಂಗಂ ರೀತಿಯಲ್ಲಿ ಸ್ಟೈಲ್ ಮಾಡಿದ್ದಾರೆ. ಗ್ರಾಮದಿಂದ ವಾಪಸ್ ಬರುವಾಗ, ನೀರಿನಲ್ಲಿಳಿದು ಮೇಕೆ ಮರಿ ರಕ್ಷಿಸಿರುವುದಾಗಿ ಫೋಜು ಕೊಟ್ಟಿದ್ದಾನೆ. ಇಂತಹ ವಿಲಕ್ಷಣದಿಂದ ವರ್ತಿಸಿದಾತ ನೆಲೋಗಿ ಪೊಲೀಸ್ ಠಾಣೆಯ ಪಿಎಸ್ಐ ಎಂ.ಎಸ್.ಯಲಗೋಡ ನೆಲೋಗಿ ಮಾಜಿ ಸಿಎಂ ಧರ್ಮಸಿಂಗ್ ಹಾಗೂ ಹಾಲಿ ಶಾಸಕ ಅಜಯಸಿಂಗ್ ಹುಟ್ಟೂರು ಆಗಿದೆ.

ಇಂತಹ ಊರಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪಿಎಸ್ಐ. ಹುಚ್ಚಾಟಗಳನ್ನು ಮಾಡುತ್ತಿದ್ದು, ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಪ್ರವಾಹದಿಂದಾಗಿ ಕಲಬುರ್ಗಿ ಜಿಲ್ಲೆ ಸೇರಿ ಹಲವು ಜಿಲ್ಲೆಗಳು ಸಂಕಷ್ಟಕ್ಕೆ ಗುರಿಯಾಗಿವೆ. ಭಾರಿ ಪ್ರವಾಹದಿಂದ ಮುಳುಗಡೆಯಾಗಿದ್ದ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮವೂ ಮುಳುಗಡೆಯಾಗಿತ್ತು. ಈ ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದಿದೆ. ಭೀಮಾ ಪ್ರವಾದಿಂದಾಗಿ ಇಡೀ ಕೂಡಲಗಿ ಗ್ರಾಮವನ್ನು ನೀರು ಸುತ್ತುವರಿದಿತ್ತು. ಗ್ರಾಮಕ್ಕೆ ಭೇಟಿ ನೀಡಿದಾಗ ಬಟ್ಟೆ ತೊಯ್ಯಬಾರದೆಂದು ಮೀನುಗಾರರ ತೆಪ್ಪದ ಮೇಲೆ ನಿಂತು ಪಿಎಸ್ಐ ಯಲಗೋಡ ಗ್ರಾಮಕ್ಕೆ ಹೋಗುತ್ತಾರೆ.

ಪ್ರವಾಹದ ನೀರಿನಲ್ಲಿಯೇ ಗ್ರಾಮದ ಜನ ತೆಪ್ಪವನ್ನು ತಳ್ಳಿಕೊಂಡು ಹೋಗುತ್ತಾರೆ. ನಂತರ ಊರೊಳಗೆ ಹೋದ ಮೇಲೆ ಮೇಕೆ ಏನಾದರೂ ಸಿಕುತ್ತೇನೋ ನೋಡಿರಿ ಎಂದು ಪಿ.ಎಸ್.ಐ. ಗ್ರಾಮಸ್ಥರಿಗೆ ಹುಕುಂ ನೀಡುತ್ತಾರೆ. ಮೇಕೆ ಸಿಕ್ಕರೆ ಅದನ್ನು ರಕ್ಷಿಸಿರುವುದಾಗಿ ಹೇಳಬಹುದು ಎಂದೂ ಪಿಎಸ್ಐ. ಗ್ರಾಮಸ್ಥರಿಗೆ ಹೇಳುತ್ತಾರೆ. ಕೊನೆಗೆ ಗ್ರಾಮಸ್ಥರು ಮೇಕೆ ಮರಿಯನ್ನು ತಂದು ಕೊಡುತ್ತಾರೆ. ಮೇಕೆ ಮರಿ ಹಿಡಿದು ಪ್ರವಾಹ ನೀರಿಲ್ಲಿ ಪಿಎಸ್ಐ ಪೋಜು ಕೊಡುತ್ತಾನೆ. ಮೇಕೆ ಮರಿಯೊಂದಿಗೆ ನೀರಿನಲ್ಲಿ ನಿಂತು ಸ್ಲೋ ಮೋಷನ್ ನಲ್ಲಿ ವೀಡಿಯೋ ತೆಗೆಸಿಕೊಳ್ಳುತ್ತಾನೆ. ತೀವ್ರ ಪ್ರವಾಹದಿಂದಾಗಿ ಮನೆಯಲ್ಲಿ ಮೇಕೆ ಮರಿ ಸಿಕ್ಕಿಕೊಂಡಿತ್ತು. ಅದನ್ನು ರಕ್ಷಿಸಲು ನಮ್ಮ ಗ್ರಾಮಸ್ಥರಿಂದ ಆಗಿರಲಿಲ್ಲ. ಪಿಎಸ್ಐ ಯಲಗೋಡ ಬಂದು ಮೇಕೆ ಮರಿಯನ್ನು ರಕ್ಷಿಸಿದ್ದಾರೆಂದು ಗ್ರಾಮಸ್ಥರ ಮೂಲಕ ಹೇಳಿಸುತ್ತಾರೆ.

ಪಿಎಸ್ಐ ಹುಚ್ಚಾಟ ಅಷ್ಟಕ್ಕೆ ನಿಲ್ಲುವುದಿಲ್ಲ. ಗೋಡೆ ಮೇಲಿಂದ ಜಂಪ್ ಮಾಡಿ ಸಿಂಗಂ ಪೋಜು ಸಹ ಕೊಡುತ್ತಾರೆ. ಜನ ಪ್ರವಾಹದಿಂದ ಸಂಕಷ್ಟಕ್ಕೆ ಸಿಲಿಕಿರುವ ವೇಳೆಯಲ್ಲಿ ಪಿಎಸ್ಐ. ಬೇಜವಾಬ್ದಾರಿಯಿಂದ ವರ್ತಿಸಿರುವುದು ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.

ಇದನ್ನೂ ಓದಿ : ಬಾಳೆಪುಣೆ ಒಂಟಿ ಮಹಿಳೆ ಅತ್ಯಾಚಾರ-ಕೊಲೆ ಪ್ರಕರಣ; ಕಾಸರಗೋಡಿನ ವ್ಯಕ್ತಿ ಬಂಧನ

ಪ್ರವಾಹದ ವೇಳೆ ಜೀವದ ಹಂಗು ತೊರೆದು ಎಷ್ಟೋ ಅಧಿಕಾರಿಗಳು ನೆರೆ ಸಂತ್ರಸ್ತರ ರಕ್ಷಣೆಗೆ ಶ್ರಮಿಸುದ್ದಾರೆ. ಆದರೆ ಈ ಸಿನಿಮಾ ಸ್ಟೈಲ್ ಸಿಂಗಂ ಮಾತ್ರ ನಾಯಕನ ರೀತಿ ತೋರಿಸಲು ನೆರೆಪೀಡಿತ ಪ್ರದೇಶದ ಜನರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಾರೆ. ಈ ಹಿಂದೆಯೇ ಕೋವಿಡ್ ಲಾಕ್ ಡೌನ್ ವೇಳೆ ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಹುಟ್ಟು ಹಬ್ಬದ ವೇಳೆ ಕೊಡದಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಪಿಎಸ್ಐ ತೀವ್ರ ಟೀಕೆಗೆ ಗುರಿಯಾಗಿದ್ದರು. ಅದೇ ಕಾರಣದಿಂದ ಅಮಾನತ್ತು ಶಿಕ್ಷೆಗೂ ಗುರಿಯಾಗಿದ್ದರು.

ಪಿಎಸ್ಐ ಹುಚ್ಚಾಟಕ್ಕೆ ನೆಲೋಗಿ ಠಾಣೆ ವ್ಯಾಪ್ತಿಯ ಜನ ಪೆಚ್ಚಾಗಿದ್ದಾರೆ. ಈ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿರುವ ಪಿಎಸ್ಐ ಯಲಗೋಡ, ಪ್ರವಾಹದಲ್ಲಿ ಮೇಕೆ ಸಿಲುಕಿಕೊಂಡಿತ್ತು. ಅದನ್ನು ಹಿಡಿದು ತರಲು ಹೋಗಿದ್ದೆ. ಈ ವೇಳೆ ಯಾರೊ ವೀಡಿಯೋ ತೆಗೆದಿದ್ದಾರೆ. ಈ ಹಿಂದೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದವನಿದ್ದೇನೆ. ನನ್ನ ವರ್ತನೆಯಿಂದ ಸಂತ್ರಸ್ತರಿಗೆ ತೊಂದರೆಯಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ. ಅದೇನೇ ಇರಲಿ ಅಧಿಕಾತಿಯೊಬ್ಬರ ವರ್ತನೆ ಇಡೀ ಇಲಾಖೆಯ ಕಾರ್ಯವೈಖರಿ ಪ್ರಶ್ನಿಸುವಂತೆ ಮಾಡಿದೆ.
Published by:G Hareeshkumar
First published: