HOME » NEWS » District » A PERSON FEEDING CATS HIS HUMANITY IS APPRECIABLE HK

ಅಪಶಕುನ ಎನ್ನುವ ಮಾರ್ಜಾಲ ಸಮೂಹವನ್ನು ಸಾಕುತ್ತಿರುವ ವ್ಯಕ್ತಿ ; ಬಡಪಾಯಿ ಬೆಕ್ಕುಗಳಿಗೆ ನಿತ್ಯ ಆಹಾರ ನೀಡಿ ಮಾನವೀಯತೆ

ಪ್ರತಿನಿತ್ಯ ಮೂರು ಹೊತ್ತು 2 ಲೀಟರ್ ಹಾಲು ಹಾಗೂ ಬಿಸ್ಕತ್, ಬ್ರೆಡ್, ಅನ್ನ ನೀಡುವ ಮೂಲಕ ನಿತ್ಯ 500 ರೂಪಾಯಿ ಹಣವನ್ನು ವಿನಿಯೋಗಿಸುತ್ತಾರೆ. ಆ ಮೂಲಕ ಮಾನವೀಯ ಸಾಕ್ಷಿಯಾಗಿದ್ದಾರೆ

news18-kannada
Updated:August 28, 2020, 7:22 AM IST
ಅಪಶಕುನ ಎನ್ನುವ ಮಾರ್ಜಾಲ ಸಮೂಹವನ್ನು ಸಾಕುತ್ತಿರುವ ವ್ಯಕ್ತಿ ; ಬಡಪಾಯಿ ಬೆಕ್ಕುಗಳಿಗೆ ನಿತ್ಯ ಆಹಾರ ನೀಡಿ ಮಾನವೀಯತೆ
ಬೆಕ್ಕುಗಳಿಗೆ ಹಾಲು ಹಾಕುತ್ತಿರುವ ಪುಟ್ಟಣ್ಣ
  • Share this:
ಗದಗ(ಆಗಸ್ಟ್​. 28): ಆ ಒಂದು ಪ್ರಾಣಿ ಅಡ್ಡ ಬಂದ್ರೆ ಸಾಕು ಸಮಯ‌ ಸರಿ ಇಲ್ಲಾ ಅಂತಾ‌ ವಾಪಾಸ್ ಹೋಗುತ್ತಾರೆ. ಅಪಶಕುನ ಅಂತಾ‌ ಮೂಡ ನಂಬಿಕೆಗೆ ಮರುಳಾಗುತ್ತಾರೆ. ಆದರೆ ಇಲ್ಲೊಬ್ಬ ಪ್ರಾಣಿಪ್ರೀಯ ಈ‌ ಅಪಶಕುನ‌ ಎನ್ನುವ ಮಾರ್ಜಾಲಗಳ ತಂಡವನ್ನೇ ತನ್ನತ್ತ ಬರಮಾಡಿಕೊಳ್ಳುತ್ತಾರೆ. ಮೊದಲೆಲ್ಲಾ ಪ್ರತಿ ಮನೆಯಲ್ಲೂ ಪ್ರೀತಿಯ ಸಾಕು ಪ್ರಾಣಿ ಆಗಿತ್ತು ಈ‌ ಮುದ್ದಾದ ಬೆಕ್ಕು. ಕುಟುಂಬಸ್ಥರ ಪ್ರೀತಿಯನ್ನ ಮುಗ್ಧವಾಗಿ ತನ್ನತ್ತ ಸೆಳೆದು, ಮಾತು ಬಾರದಿದ್ದರೂ ಭಾವನೆಗಳ ಕೊಂಡಿ ಬೆಸೆದುಕೊಂಡಿತ್ತು. ಆದರೆ, ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಕಾಣಸಿಗುವ ಈ ಮಾರ್ಜಾಲ, ನಗರ ಪ್ರದೇಶಗಳಲ್ಲಿ ಮನೆಗಳ ಕಿಟಕಿ ಮೂಲಕ ಕದ್ದು ಹಾಲು ಕುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಆದರೆ, ಇಲ್ಲೊಬ್ಬ ಮಾರ್ಜಾಲ ಪ್ರೀಯ ವ್ಯಕ್ತಿ ಇಂತಹ ಅದೆಷ್ಟೋ ಬಡಪಾಯಿ ಬೆಕ್ಕುಗಳಿಗೆ ಪ್ರತಿದಿನ ಆಹಾರ‌ ನೀಡುವ ಮೂಲಕ ದೊಡ್ಡ ಹವ್ಯಾಸ ರೂಢಿಸಿಕೊಂಡಿದ್ದಾನೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಪುಟ್ಟಣ್ಣ ರಂಗನಾಥ ಜೋಷಿ ಎನ್ನುವವರಿಗೆ ಬೆಕ್ಕು ಅಂದ್ರೆ ಪಂಚಪ್ರಾಣ. 45 ವರ್ಷದ ಪುಟ್ಟಣ್ಣ ಮನೆಯಲ್ಲಿ ತಾವೊಬ್ಬರೆ ವಾಸವಾಗಿದ್ದು, ಸುಮಾರು 20 ರಿಂದ 25 ಬೆಕ್ಕುಗಳನ್ನೇ ಮನೆಯ ಸದಸ್ಯರೆಂದು ತಿಳಿದು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದಾರೆ.

ಇನ್ನು ಪುಟ್ಟಣ್ಣ ಸಾಕಿರುವುದು ಒಂದೆರೆಡು ಬೆಕ್ಕುಗಳಲ್ಲ. ಬರೊಬ್ಬರಿ 20 ಕ್ಕೂ ಹೆಚ್ಚು ಬೆಕ್ಕುಗಳು. ಈ ಹಿಂದೆ ಮನೆ ಹಿತ್ತಲಿನ ಭಾಗದಲ್ಲಿ ಹಾವುಗಳ ಕಾಟ ಜಾಸ್ತಿ ಇತ್ತಂತೆ. ಹೀಗಾಗಿ ಹಾವುಗಳ ಕಾಟ ತಪ್ಪಿಸಲು ಒಂದು ಬೆಕ್ಕು ಸಾಕಿದ್ದಾರೆ. ಅಂದಿನಿಂದ ಹಾವುಗಳ ಕಾಟವೇನೋ ನಿಂತಿದೆ. ಆದರೆ, ಸಾಕಿದ ಒಂದೇ‌ ಒಂದು ಬೆಕ್ಕಿನಿಂದ ಸುಮಾರು 25 ಮರಿಗಳ ಹಿಂಡು ಬೆಳೆದಿದೆ.

ಇದನ್ನು ಓದಿ : ರಾಜ್ಯದಲ್ಲಿ ಪ್ರವಾಹದಿಂದ 2030 ಕೋಟಿ ರೂ ವೆಚ್ಚದ ರಸ್ತೆ, ಸೇತುವೆ ಹಾನಿ ; ಡಿಸಿಎಂ ಗೋವಿಂದ ಕಾರಜೋಳ

ಪ್ರತಿನಿತ್ಯ ಮೂರು ಹೊತ್ತು 2 ಲೀಟರ್ ಹಾಲು ಹಾಗೂ ಬಿಸ್ಕತ್, ಬ್ರೆಡ್, ಅನ್ನ ನೀಡುವ ಮೂಲಕ ನಿತ್ಯ 500 ರೂಪಾಯಿ ಹಣವನ್ನು ವಿನಿಯೋಗಿಸುತ್ತಾರೆ. ಆ ಮೂಲಕ ಮಾನವೀಯ ಸಾಕ್ಷಿಯಾಗಿದ್ದಾರೆ. ಈ ಪುಟ್ಟಣ್ಣ. ಬೆಳಿಗ್ಗೆ ಊಟ ಮುಗಿಸಿಕೊಂಡು ಹೊರಗಡೆ ಹೋಗುವ ಈ ಬೆಕ್ಕುಗಳ ಹಿಂಡು ಮತ್ತೆ ಮಧ್ಯಾಹ್ನದ ಊಟದ ಸಮಯಕ್ಕೆ ತಪ್ಪದೇ ಹಾಜರಾಗುತ್ತವೆ. ಪುಟ್ಟಣ್ಣನ ಮನೆ ಮುಂದೆ ಶಬರಿಯಂತೆ ಕಾಯುತ್ತಾ ಕೂರುತ್ತವೆ. ಹೀಗೆ ಪ್ರತಿದಿನ ಪುಟ್ಟಣ್ಣನ ಜೀವನ ಬೆಕ್ಕುಗಳೊಂದಿಗೆ ಜೀವನ ಸಾಗಿಸುತ್ತಿರುವುದು ಜನಸಾಮಾನ್ಯರಿಗೆ ಅಚ್ಚರಿ ಜೊತೆಗೆ ಮಾನವೀಯತೆಯ ಮಾದರಿ ಕೂಡ ಆಗಿದೆ.
Youtube Video

ಇಂದಿನ ಕಲಿಯುಗದಲ್ಲಿ ಅದೆಷ್ಟೋ ಜನ ಮನೆ ಹಿರಿಯರನ್ನೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಅಂತದ್ರಲ್ಲಿ ಪುಟ್ಟಣ್ಣ ಇಷ್ಟೊಂದು ಬೆಕ್ಕುಗಳ ಪಾಲನೆ ಪೋಷಣೆ ನಿಜಕ್ಕೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.
Published by: G Hareeshkumar
First published: August 28, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories