ಭೀಮೆಯಲ್ಲಿ ಪ್ರವಾಹ ; ಸೂರಿಗಾಗಿ ಮೇಲ್ಛಾವಣಿ ಏರಿ ಕುಳಿತ ಅಜ್ಜಿ ; ಮೂರು ದಿನಗಳಿಂದಲೂ ಉಪವಾಸ

80 ವರ್ಷದ ಕಲ್ಲಮ್ಮ ಕಳೆದ ಮೂರು ದಿನಗಳಿಂದ ಮನೆಯ ಮೇಲ್ಛಾವಣೆ ಮೇಲೆ ಕುಳಿತಿದ್ದಾಳೆ. ಊಟ ನೀರನ್ನು ಮುಟ್ಟದೆ, ಉಪವಾಸ ಸತ್ಯಾಗ್ರಹ ನಡೆಸಿದ್ದಾಳೆ. ಗ್ರಾಮಸ್ಥರು ಮನವೊಲಿಕೆ ಮಾಡಿದರೂ ತನಗೆ ಮನೆ ಕಟ್ಟಿಸಿಕೊಡುವ ಭರವಸೆ ಸಿಗುವವರೆಗೂ ಮನೆ ಮೇಲ್ಗಡೆಯಿಂದ ಇಳಿಯುವುದಿಲ್ಲ ಎಂದು ಅಜ್ಜಿ ಪಟ್ಟು ಹಿಡಿದು ಕುಳಿತಿದ್ದಾಳೆ

ಮೇಲ್ಛಾವಣಿ ಏರಿ ಕುಳಿತ ಅಜ್ಜಿ

ಮೇಲ್ಛಾವಣಿ ಏರಿ ಕುಳಿತ ಅಜ್ಜಿ

 • Share this:
  ಕಲಬುರ್ಗಿ(ಅಕ್ಟೋಬರ್​. 16): ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಇಳಿಮುಖವಾಗಿದ್ದರೂ, ಪ್ರವಾಹದ ಅಬ್ಬರ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಭೀಮಾ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಭೀಮಾ ನದಿ ಯುದ್ದಕ್ಕೂ ನೂರಾರು ಗ್ರಾಮಗಳಿಗೆ ನೀರು ಹೊಕ್ಕಿದೆ. ಕಲಬುರ್ಗಿ ತಾಲೂಕಿನ ಫಿರೋಜಾಬಾದ್ ಗ್ರಾಮದಲ್ಲಿಯೂ ಮನೆಗಳಿಗೆ ನೀರು ಹೊಕ್ಕಿವೆ. ಓರ್ವ ಅಜ್ಜಿಯ ಮನೆ ಸಂಪೂರ್ಣ ಜಲಾವೃತಗೊಂಡಿದ್ದು, ತನಗೆ ಎತ್ತರದ ಪ್ರದೇಶದಲ್ಲಿ ಸೂರು ಕಲ್ಪಿಸುವಂತೆ ಮೇಲ್ಛಾವಣೆ ಮೇಲೆ ಕುಳಿತು ಅಜ್ಜಿ ಉಪವಾಸ ಮಾಡಲಾರಂಭಿಸಿದ್ದಾಳೆ. ಕಳೆದ ಮೂರು ದಿನಗಳಿಂದಲೂ ಮನೆಗೆ ನೀರು ನುಗ್ಗಿದ್ದು, ಅಂದಿನಿಂದಲೂ ಅಜ್ಜಿ ಮನೆಯ ಮೇಲ್ಛಾವಣಿ ಮೇಲೆಯೂ ಕುಳಿತಿದ್ದಾಳೆ. ತಾನು ಮನೆ ಮೇಲ್ಛಾವಣೆ ಮೇಲೆ ಕುಳಿತಿದ್ದರೂ ಯಾರೂ ತನ್ನನ್ನು ಮಾತನಾಡಿಸಿಲ್ಲ. ತನಗೆ ಏನು ಅವಶ್ಯಕತೆ ಇದೆ ಎಂದು ಯಾರೂ ಕೇಳಿಲ್ಲ ಎಂದು ಅಜ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹೀಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಜ್ಜಿಯ ಹೆಸರನ್ನು ಕಲ್ಲಮ್ಮ ಎಂದು ಗುರುತಿಸಲಾಗಿದೆ.

  80 ವರ್ಷದ ಕಲ್ಲಮ್ಮ ಕಳೆದ ಮೂರು ದಿನಗಳಿಂದಲೂ ಮನೆಯ ಮೇಲ್ಛಾವಣೆ ಮೇಲೆ ಕುಳಿತಿದ್ದಾಳೆ. ಊಟ ನೀರನ್ನು ಮುಟ್ಟದೆ, ಉಪವಾಸ ಸತ್ಯಾಗ್ರಹ ನಡೆಸಿದ್ದಾಳೆ. ಗ್ರಾಮಸ್ಥರು ಮನವೊಲಿಕೆ ಮಾಡಿದರೂ ತನಗೆ ಮನೆ ಕಟ್ಟಿಸಿಕೊಡುವ ಭರವಸೆ ಸಿಗುವವರೆಗೂ ಮನೆ ಮೇಲ್ಗಡೆಯಿಂದ ಇಳಿಯುವುದಿಲ್ಲ ಎಂದು ಅಜ್ಜಿ ಪಟ್ಟು ಹಿಡಿದು ಕುಳಿತಿದ್ದಾಳೆ. ವಿಚಿತ್ರವೆಂದರೆ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಭೇಟಿ ನೀಡಿದ್ದರು.

  ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಈ ಅಜ್ಜಿಯ ಬಗ್ಗೆ ಅವರೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಗ್ರಾಮದಲ್ಲಿಯೇ ಕಾಳಜಿ ಕೇಂದ್ರ ತೆರೆದಿದ್ದು, ಅಜ್ಜಿ ಅಲ್ಲಿಗೆ ಹೋಗಲೂ ಸಿದ್ಧಳಿಲ್ಲ. ಹೀಗಾಗಿ ಅಜಿಯನ್ನು ಮೇಲ್ಛಾವಣೆ ಮೇಲೆಯೆ ಬಿಟ್ಟು ಜನ ಸುಮ್ಮನಾಗಿದ್ದಾರೆ.

  ಇದನ್ನೂ ಓದಿ : ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ : ಶೇ. 51.28 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

  ಅಜ್ಜಿಯ ಮನೆ ಸೇರಿದಂತೆ ಫಿರೋಜಾಬಾದ್ ನ ಹತ್ತಾರು ಗ್ರಾಮಗಳು ಮುಳುಗಡೆಯಾಗಿವೆ. ಗ್ರಾಮದ ಮಹಾಲಕ್ಷ್ಮಿ ಮಂದಿರ, ಅಂಬಿಗರ ಚೌಡಯ್ಯ ಮಂದಿರಗಳು ಮುಳುಗಡೆಯಾಗಿವೆ. ಅಮಾವಾಸ್ಯೆಯಾದ ಹಿನ್ನೆಲೆಯಲ್ಲಿ ಗ್ರಾಮದ ಅರ್ಚಕ ಪ್ರವಾಹದ ನೀರಿನಲ್ಲಿಯೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾನೆ. ಕೆಲ ಗ್ರಾಮಸ್ಥರು ಪ್ರವಾಹದಲ್ಲಿ ಈಜಿಕೊಂಡೇ ಹೋಗಿ ಮಹಾಲಕ್ಷ್ಮಿಯ ದರ್ಶನ ಪಡೆದು ಬಂದಿದ್ದಾರೆ.

  ಒಟ್ಟಾರೆ ಉಕ್ಕಿ ಹರೀತಿರುವ ಭೀಮಾ ನದಿ ಹಲವಾರು ಜನರನ್ನು ಬಿಕ್ಕುವಂತೆ ಮಾಡಿದೆ. ಸಾವಿರಾರು ಜನರನ್ನು ಕಂಗಾಲಾಗುವಂತೆ ಮಾಡಿದೆ. ಯಾವಾಗ ಭೀಮೆ ತನ್ನ ರುದ್ರನರ್ತನ ನಲ್ಲಿಸುತ್ತಾಳೋ ಎಂದು ಜನ ಎದುರು ನೋಡುತ್ತಿದ್ದಾರೆ.
  Published by:G Hareeshkumar
  First published: