ಮೃತನಾದ 6 ತಿಂಗಳ ಬಳಿಕ ಅಂತ್ಯಸಂಸ್ಕಾರ; ಮಲೇಷಿಯಾದಲ್ಲಿ ಮೃತಪಟ್ಟ ಮೈಸೂರಿನ ಯವಕನ ಸಾವಿನ ರಹಸ್ಯ ಇನ್ನೂ ನಿಗೂಢ

ಲಾಕ್​ಡೌನ್​ ಬಂದ ಪರಿಣಾಮ, ಬರೋಬ್ಬರಿ 6 ತಿಂಗಳಿಂದಲೂ ಸುಮಂತ್ ಮೃತದೇಹ ಮಲೇಷಿಯಾದಲ್ಲೇ ಇತ್ತು. ಅನ್​ಲಾಕ್​ ಪರಿಣಾಮವಾಗಿ ಆರು ತಿಂಗಳ ಬಳಿಕ ಮೃತದೇಹವಿದ್ದ ಪೆಟ್ಟಿಗೆಯನ್ನು ತಮಿಳುನಾಡಿನ ತಿರುಚನಪಳ್ಳಿ ವಿಮಾನ ನಿಲ್ದಾಣಕ್ಕೆ ಏರ್​ಲಿಫ್ಟ್ ಮಾಡಲಾಗಿತ್ತು.

news18-kannada
Updated:July 13, 2020, 10:13 AM IST
ಮೃತನಾದ 6 ತಿಂಗಳ ಬಳಿಕ ಅಂತ್ಯಸಂಸ್ಕಾರ; ಮಲೇಷಿಯಾದಲ್ಲಿ ಮೃತಪಟ್ಟ ಮೈಸೂರಿನ ಯವಕನ ಸಾವಿನ ರಹಸ್ಯ ಇನ್ನೂ ನಿಗೂಢ
ಮೃತಪಟ್ಟ ಸುಮಂತ್
  • Share this:
ಮೈಸೂರು; ಆತ ಏನೇನೋ ಕನಸು ಕಟ್ಟಿಕೊಂಡಿದ್ದ. ವಿದೇಶಕ್ಕೆ ಹೋಗಿ ದುಡಿದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತೆಲ್ಲ ಅಂದುಕೊಂಡಿದ್ದ. ಯಾರದ್ದೋ ಮಾತು ನಂಬಿ ವಿದೇಶಕ್ಕೂ ಹೋಗಿದ್ದ. ಆದರೆ ವಾಪಸ್ಸು ಸ್ವದೇಶಕ್ಕೆ ಬಂದಿದ್ದು ಮಾತ್ರ ಹೆಣವಾಗಿ. ಅದೂ ಸತ್ತು ಆರು ತಿಂಗಳ ಬಳಿಕ...! ಇಂತಹದೊಂದು ಮನಕಲಕುವ ಘಟನೆ ನಡೆದಿರೋದು ಮೈಸೂರಿನಲ್ಲಿ. ಪಿರಿಯಾಪಟ್ಟಣದ ಯುವಕ ಸುಮಂತ್‌ 6 ತಿಂಗಳ ಹಿಂದೆ ಮಲೇಷಿಯಾದಲ್ಲಿ ಮೃತಪಟ್ಟಿದ್ದ. ನಿನ್ನೆ ಮೈಸೂರಿಗೆ ಮೃತದೇಹ ಬಂದಿದ್ದು, ಬಳಿಕ  ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಆದರೆ, ಈತನ ಸಾವಿನ ಕಾರಣ ಮಾತ್ರ ಈವರೆಗೂ ತಿಳಿದುಬಂದಿಲ್ಲ.

22 ವರ್ಷದ ಸುಮಂತ್ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ನಿವಾಸಿ. ಕೇವಲ 22 ವರ್ಷಗಳಲ್ಲೇ ಇಡೀ ಮನೆ ಜವಾಬ್ದಾರಿ ಹೊತ್ತುಕೊಂಡಿದ್ದ. ತಂದೆ ವೆಂಕಟೇಶ್ ರೈತ ಹಾಗೂ ತಾಯಿ ಶೋಭಾ ಟೈಲರ್. ಬಡತನದ ನಡುವೆಯೂ ಡಿಪ್ಲೊಮಾವರೆಗೂ ಓದಿದ್ದ ಸುಮಂತ್, ಇಂಡಿಯನ್ ನೇವಿ ಸೇರುವ ಕನಸು ಕಂಡಿದ್ದ. ಕೆಲಸ ಹುಡುಕುತ್ತಿದ್ದ ಆತನಿಗೆ ಮಧ್ಯವರ್ತಿಯೊಬ್ಬನ ಪರಿಚಯವಾಗಿತ್ತು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ಮಲೇಷಿಯಾಕ್ಕೆ ಕರೆದೊಯ್ದ ಆತ, ಕೇವಲ 18 ಸಾವಿರ ರೂ. ಸಂಬಳದ ಸಣ್ಣ ಕೆಲಸಕ್ಕೆ ಸೇರಿಸಿದ್ದ. ಇದರಿಂದ ಮನನೊಂದಿದ್ದ ಸುಮಂತ್, ತಾಯಿಗೆ ಫೋನ್ ಮಾಡಿ ವಾಪಸ್ ಬಂದುಬಿಡುತ್ತೇನೆ ಅಂತೆಲ್ಲ ಹೇಳಿಕೊಂಡಿದ್ದ. ಈ ನಡುವೆ ಕಳೆದ ಡಿಸೆಂಬರ್​ನಲ್ಲಿ ಪೋಷಕರಿಗೆ ಕಾಲ್ ಮಾಡಿದ ಸಹೋದ್ಯೋಗಿಗಳು, ಸುಮಂತ್ ನಿಗೂಢವಾಗಿ ಮೃತಪಟ್ಟಿದ್ದಾನೆ ಅಂತ ತಿಳಿಸಿದ್ದರು. 2019ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದ ಅಲ್ಲಿನ ಸಿಬ್ಬಂದಿ, ಹೇಗೆ ಸಾವನ್ನಪ್ಪಿದ ಅಂತ ಯಾವುದೇ ಮಾಹಿತಿ ನೀಡಿರಲಿಲ್ಲ.

ಸುಮಂತ್ ಮೃತಪಟ್ಟಿದ್ದು ಕಳೆದ ವರ್ಷ ಡಿಸೆಂಬರ್​ನಲ್ಲಿ. ಕೂಡಲೇ ಸಂಸದ ಪ್ರತಾಪ್ ಸಿಂಹ ಅವರನ್ನು ಸಂಪರ್ಕಿಸಿದ ಪೋಷಕರು, ಸುಮಂತ್ ಸಾವಿನ ತನಿಖೆ ಆಗಬೇಕು ಮತ್ತು ಮೃತದೇಹ ತರಿಸಿಕೊಡಬೇಕು ಅಂತ ಮನವಿ ಮಾಡಿದರು. ಹಲವು ಪತ್ರ ವ್ಯವಹಾರಗಳ ನಂತರ ಮೃತದೇಹ ಕಳುಹಿಸಿಕೊಡಲು ಮಲೇಷಿಯಾ ಸರ್ಕಾರವೂ ಒಪ್ಪಿತ್ತು. ಅಷ್ಟರಲ್ಲೇ ಕೊರೋನಾ ಲಾಕ್​ಡೌನ್​ ಬಂದ ಪರಿಣಾಮ, ಬರೋಬ್ಬರಿ 6 ತಿಂಗಳಿಂದಲೂ ಸುಮಂತ್ ಮೃತದೇಹ ಮಲೇಷಿಯಾದಲ್ಲೇ ಇತ್ತು. ಅನ್​ಲಾಕ್​ ಪರಿಣಾಮವಾಗಿ ಆರು ತಿಂಗಳ ಬಳಿಕ ಮೃತದೇಹವಿದ್ದ ಪೆಟ್ಟಿಗೆಯನ್ನು ತಮಿಳುನಾಡಿನ ತಿರುಚನಪಳ್ಳಿ ವಿಮಾನ ನಿಲ್ದಾಣಕ್ಕೆ ಏರ್​ಲಿಫ್ಟ್ ಮಾಡಲಾಗಿತ್ತು. ಸಂಸದ ಪ್ರತಾಪ್ ಸಿಂಹ ಅಂತಾರಾಜ್ಯ ಸಂಚಾರಕ್ಕೆ ತೊಂದರೆಯಾಗದಂತೆ ಶಿಫಾರಸ್ಸು ಪತ್ರ ನೀಡಿ ಕೊನೆಗೂ ಮೃತದೇಹವನ್ನ ಮೈಸೂರಿಗೆ ತರಲು ಸಹಕಾರ ನೀಡಿದರು.

ಇದನ್ನು ಓದಿ: Weekend Lockdown: ಕರ್ನಾಟಕದಲ್ಲಿ ಇನ್ನೊಂದು ತಿಂಗಳು ಶನಿವಾರವೂ ಲಾಕ್​ಡೌನ್​?; ಸಿಎಂ ಯಡಿಯೂರಪ್ಪ ಚಿಂತನೆ

ಬರೋಬ್ಬರಿ ಆರು ತಿಂಗಳ ಬಳಿಕ ಸುಮಂತ್ ಮೃತದೇಹ ಹುಟ್ಟೂರಿಗೆ ಬಂದು ತಲುಪಿತು. ನಿನ್ನೆ ಸಂಜೆ ಮೃತ ಸುಮಂತ್‌ ಅಂತ್ಯಸಂಸ್ಕಾರ ಮಾಡಿದ್ದು, ವಿಧಿವಿಧಾನಗಳನ್ನ ಮುಗಿಸಿದ್ದಾರೆ. ಸುಮಂತ್ ದೂರದ ಮಲೇಷಿಯಾದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಫಿಯಾಗಳಿಂದ ಮೃತಪಟ್ಟಿದ್ದಾನೆ ಎಂದು ಪೋಷಕರ ಆರೋಪಿಸಿದ್ದಾರೆ. ಆರು ತಿಂಗಳ ಹಿಂದೆಯೇ ಮೃತಪಟ್ಟ ಸುಮಂತ್ ಸಾವಿನ ತನಿಖೆಗೂ ಪೋಷಕರು ಒತ್ತಾಯಿಸಿದ್ದಾರೆ.
Published by: HR Ramesh
First published: July 8, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading