ಮೈ ಮೇಲೆ ಕಲ್ಲು, ಮಣ್ಣು ಬೀಳುತ್ತಿದರೂ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಪ್ರಾಣ ಉಳಿಸಿದ ತಾಯಿ!

ತಾಯಿ ತನ್ನ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಗ ಸ್ವಲ್ಪ ಪ್ರಮಾಣದ ಕಲ್ಲು ಹಾಗೂ ಮಣ್ಣು ಮೈ‌ ಮೇಲೆ ಬಿದ್ದಿದೆ. ಆಗ ತಾಯಿ ಗಂಗಮ್ಮ ಚಿರಾಡಿದ್ದಾಳೆ. ತಕ್ಷಣವೇ ಎದೆ ಹಾಲು ಕುಡಿಯುತ್ತಿದ್ದ ಮಗುವನ್ನು ಬೆನ್ನು ಬಾಗಿ ಮಡಿಲಲ್ಲಿ ರಕ್ಷಣೆ ಮಾಡಿದ್ದಾಳೆ.

ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಮನೆ ಕುಸಿದಿರುವುದು.

ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಮನೆ ಕುಸಿದಿರುವುದು.

  • Share this:
ಯಾದಗಿರಿ: ಮೈ ಮೇಲೆ ಕಲ್ಲು ,ಮಣ್ಣು ಬಿದ್ದ ನೋವು ಒಂದು ಕಡೆಯಾದರೆ ಮತ್ತೊಂದೆಡೆ ಮಡಿಲಲ್ಲಿರುವ ಹೆಣ್ಣು ಮಗುವಿಗೆ ಏನು ಆಗಬಾರದೆಂದು‌ ಬೆನ್ನು ಬಾಗಿ ಮಗುವಿನ ಪ್ರಾಣ ಉಳಿಸಿದ ಆ ಸನ್ನಿವೇಷ ಎಲ್ಲರ ಕಣ್ಣಲು ನೀರು ತರಿಸುತ್ತದೆ.

ತನ್ನ ಮೈ ಮೇಲೆ ಕಲ್ಲು, ಮಣ್ಣು, ಬಿದ್ದರೂ ಕೂಡ  ನೋವಿನಿಂದ ಕೊರಗಿದರು ತನ್ನ ಮಡಿಲಲ್ಲಿ ಮಗುವನ್ನು ಜೋಪಾನವಾಗಿ ಇರಿಸಿಕೊಂಡು ಮಗುವಿನ ಪ್ರಾಣ ಉಳಿಸಿ ತಾಯಿ ಸಾರ್ಥಕತೆ ಮೆರೆದಿದ್ದಾಳೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಮನೆಯಲ್ಲಿ 9 ತಿಂಗಳ ಹೆಣ್ಣು ಮಗು ಪಲ್ಲವಿ, ಜೊತೆ ತಾಯಿ ಗಂಗಮ್ಮ, ಪತಿ ಗಾಳೆಪ್ಪ, ಗಾಳೆಪ್ಪನ ತಾಯಿ ಮಲ್ಲಮ್ಮ ವಾಸವಾಗಿದ್ದರು. ಕಳೆದ ನಾಲ್ಕೈದು ದಿನದಿಂದ ಭಾರಿ ಮಳೆಯಾದ ಕಾರಣ ನಿನ್ನೆ ರಾತ್ರಿ 9 ಗಂಟೆ ನಂತರ ಮನೆ ಕುಸಿಯಲು ಆರಂಭಿಸಿದೆ. ಆ ವೇಳೆ ತಾಯಿ ತನ್ನ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಗ ಸ್ವಲ್ಪ ಪ್ರಮಾಣದ ಕಲ್ಲು ಹಾಗೂ ಮಣ್ಣು ಮೈ‌ ಮೇಲೆ ಬಿದ್ದಿದೆ. ಆಗ ತಾಯಿ ಗಂಗಮ್ಮ ಚಿರಾಡಿದ್ದಾಳೆ. ತಕ್ಷಣವೇ ಎದೆ ಹಾಲು ಕುಡಿಯುತ್ತಿದ್ದ ಮಗುವನ್ನು ಬೆನ್ನು ಬಾಗಿ ಮಡಿಲಲ್ಲಿ ರಕ್ಷಣೆ ಮಾಡಿದ್ದಾಳೆ. ತನ್ನ ಮೈ ಮೇಲೆ ಕಲ್ಲು- ಮಣ್ಣು ಬಿದ್ದು ನೋವಿನಲ್ಲಿದ್ದರು ಕರುಳ ಕುಡಿಯ ಪ್ರಾಣ ಉಳಿಸುವ ಕಾಳಜಿ ತೋರಿದ್ದಾಳೆ. ನಂತರ ಗಂಗಮ್ಮಳ ಪತಿ ನೆರೆಹೊರೆಯ ಸಹಾಯ ಕೋರಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸ್ಥಳೀಯರು ಮಗು, ತಾಯಿ ಹಾಗೂ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ. ತಾಯಿ ಗಂಗಮ್ಮ, ಮಗು ಪಲ್ಲವಿ, ಗಾಳೆಪ್ಪ, ಮಲ್ಲಮ ನಾಲ್ವರಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಗಂಗಮ್ಮ, ಮಗು ಮತ್ತು ಅತ್ತೆ.


ಇದನ್ನು ಓದಿ: Viral Video: ಆನೆಯನ್ನು ಅಟ್ಟಾಡಿಸಿದ ಎಮ್ಮೆ ವಿಡಿಯೋ ಭಾರೀ ವೈರಲ್​​

ಈ ಬಗ್ಗೆ ಗ್ರಾಮದ   ಪೋತಪ್ಪ  ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಮಗು ಎದೆ ಹಾಲು ಕುಡಿಯುತ್ತಿದ್ದಾಗ ಮನೆ ಕುಸಿಯಲು ಆರಂಭಿಸಿದೆ. ತಾಯಿ ಮಗುವನ್ನು ಮಡಿಲಲ್ಲಿ ಜೋಪಾನವಾಗಿ ರಕ್ಷಣೆ ಮಾಡಿದ್ದಾಳೆ. ನಂತರ ಮಾಹಿತಿ ಅರಿತು ಎಲ್ಲರನ್ನೂ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. 
Published by:HR Ramesh
First published: