ಗದಗ(ಜೂ. 11): ಕಳೆದ 10 ತಿಂಗಳ ಹಿಂದೆ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹದ ಅಟ್ಟಹಾಸಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮ ತತ್ತರಿಸಿ ಹೋಗಿತ್ತು. ಆದರೆ, 10 ತಿಂಗಳು ಕಳೆದರೂ ಇನ್ನೂ ನೆರೆ ಸಂತ್ರಸ್ತರ ಬದುಕು ಮಾತ್ರ ಅತಂತ್ರವಾಗಿದೆ. ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಇನ್ನೂ ನನಸಾಗಿಲ್ಲಾ. ಯಾಕೆಂದರೆ ಅಧಿಕಾರಿಯೊಬ್ಬರು ಮಾಡಿದ ಎಡವಟ್ಟಿಗೆ ಬಡ ನಿರಾಶ್ರಿತರು ಪ್ರತಿನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.
ಹೊಳೆ ಆಲೂರು ಗ್ರಾಮದ ಫಲಾನುಭವಿ ಶಂಕ್ರಪ್ಪ ಹುಚ್ಚಪ್ಪ ಗಂಗೂರ, ಫಲಾನುಭವಿ ಸಂಖ್ಯೆ- 441450, ಅಕೌಂಟ್ ನಂಬರ್- 64154236626, ಈ ಅಕೌಂಟ್ ನಂಬರ್ ಇನ್ನೊರ್ವ ಫಲಾನುಭವಿ ಶಂಕ್ರಪ್ಪ ಕಲ್ಲಪ್ಪ ಗಂಗೂರ ಅವರ ಫಲಾನುಭವಿ ಸಂಖ್ಯೆ 440941, ನಮೂದು ಮಾಡಿದ್ದಾರೆ. ಇವರ ಅಕೌಂಟ್ ನಂಬರ್ 1719477056, ಈ ಅಕೌಂಟ್ ನಂಬರ್ ನಮೂದು ಮಾಡುವ ಬದಲಾಗಿ ಶಂಕ್ರಪ್ಪ ಹುಚ್ಚಪ್ಪ ಗಂಗೂರು ಅಕೌಂಟ್ ನಂಬರ್ 64154236626 ನಮೂದು ಮಾಡಿದ್ದಾರೆ. ಹೀಗಾಗಿ ಕಳೆದ 10 ತಿಂಗಳಿಂದ ತಹಶೀಲ್ದಾರ್ ಕಚೇರಿ ಅಲೆದಾಡಿದರೂ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ.
ಮೊದಲ ಲಾಕ್ ಡೌನ್ ನಡುವೆ ಕೆಲಸ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಬೇರೆಯವರಿಗೆ ಹಣ ಬರುತ್ತೇ ನಮಗೆ ಹಣ ಬರುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಫಲಾನುಭವಿ ಶಂಕ್ರಪ್ಪ ಹುಚ್ಚಪ್ಪ ಗಂಗೂರ ಆಕ್ರೋಶ ವ್ಯಕ್ತಪಡಿಸುತ್ತಾರೆ.
2019 ರಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ಸಿಲುಕಿ ಮನೆ ಮಠವನ್ನು ಕಳೆದುಕೊಂಡವರು ಆದಷ್ಟು ಬೇಗ ನಿರ್ಮಾಣ ಮಾಡಿಕೊಳ್ಳುವಂತೆ ಸರ್ಕಾರದಿಂದ ನೋಟಿಸ್ ಸಹ ನೀಡಿದ್ದಾರೆ. ಅದೇ ರೀತಿ ಶಂಕ್ರಪ್ಪ ಹುಚ್ಚಪ್ಪ ಗಂಗೂರ ಅವರಿಗೆ ರೋಣ ತಹಶೀಲ್ದಾರ್ 1 ಲಕ್ಷ ರೂಪಾಯಿ ಹಣ ಮಂಜೂರು ಮಾಡಲಾಗಿದ್ದು, ಮನೆ ಕಟ್ಟಲು ಆರಂಭ ಮಾಡಿದ ಮೇಲೆ ಹಂತ ಹಂತವಾಗಿ 5 ಲಕ್ಷ ರೂಪಾಯಿಹಣ ಬರುತ್ತದೆ ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ನೋಟಿಸ್ ನೀಡಿದ್ದಾರೆ. ಆದರೆ ಇಬ್ಬರು ಫಲಾನುಭವಿಗಳಿಗೆ ಒಂದೇ ಅಕೌಂಟ್ ಇರುವದರಿಂದ ಹಣ ಬಂದಿಲ್ಲ
ಇದನ್ನೂ ಓದಿ :
ಪೊಲೀಸರ ಕಾರ್ಯವೈಖರಿ ಬದಲಿಸಿದ ಕೊರೋನಾ ; ಆರೋಗ್ಯ ರಕ್ಷಣೆ ಕುರಿತು ಜಿಲ್ಲಾ ಎಸ್ಒಪಿ ಬಿಡುಗಡೆ ಮಾಡಿದ ವಿಜಯಪುರ ಪೊಲೀಸರು
ಇನ್ನೂ ಕುರಿತು ರೋಣ ತಹಶೀಲ್ದಾರ್ ಅವರನ್ನು ಕೇಳಿದ್ರೆ, ಹೌದು ತಾಂತ್ರಿಕ ಕಾರಣಗಳಿಂದ ಇಬ್ಬರು ಫಲಾನುಭವಿಗಳಿಗೆ ಒಂದೇ ಅಕೌಂಟ್ ನಮೂದು ಆಗಿದೆ ಎರಡುಮೂರು ದಿನದಲ್ಲಿ ಬಗೆ ಹರಿಸುತ್ತೇನೆ. ಟಾಟಾ ಎಂಟ್ರಿ ಮಾಡುವಾಗ ಗೊಂದಲವಾಗಿದ್ದು, ಸರಿ ಪಡಿಸುವ ಭರವಸೆ ನೀಡಿದ್ದಾರೆ ತಹಶೀಲ್ದಾರ್ ಜಿ.ಬಿ ಜಕ್ಕನಗೌಡರ್.
ಮೊದಲೇ ಪ್ರವಾಹದಿಂದ ತತ್ತರಿಸಿದ ಕುಟುಂಬಗಳು ಈವಾಗ ಲಾಕ್ ಡೌನ್ ನಿಂದಾಗಿ ಬದುಕು ದುರ್ಬಲವಾಗಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ನೀಡುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಇನಾದರೂ ಎಚ್ಚತ್ತುಕೊಂಡು ಆ ಬಡ ಕುಟುಂಬಗಳ ಸಮಸ್ಯೆ ಬಗೆ ಹರಿಸಿ ಪರಿಹಾರ ನೀಡಬೇಕು ಎನ್ನುವದು ನಮ್ಮ ಆಶಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ