ಮೊಲ ಕೊಂದು, ನವಿಲಿಗೆ ಹಿಂಸೆ ನೀಡಿ ಟಿಕ್ ಟಾಕ್​ ವಿಡಿಯೋ ಮಾಡಿದ್ದ ಬಾಗಲಕೋಟೆ ಯುವಕ ಜೈಲು ಪಾಲು!

ಇತ್ತೀಚೆಗೆ ಬಾದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದ ಗುಡ್ಡದಲ್ಲಿ ಇಬ್ಬರು ಯುವಕರು ಮೊಲಕ್ಕೆ ಹಿಂಸೆ ನೀಡಿ ಟಿಕ್ ಟಾಕ್ ಮಾಡಿದ್ದರು. ಈ ಯುವಕರಿಬ್ಬರ ವಿರುದ್ಧ ಬಾದಾಮಿ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ, ಓರ್ವನನ್ನು ಬಂಧಿಸಿದ್ದರು, ಇನ್ನೋರ್ವ ಯುವಕ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.

news18-kannada
Updated:June 11, 2020, 12:57 PM IST
ಮೊಲ ಕೊಂದು, ನವಿಲಿಗೆ ಹಿಂಸೆ ನೀಡಿ ಟಿಕ್ ಟಾಕ್​ ವಿಡಿಯೋ ಮಾಡಿದ್ದ ಬಾಗಲಕೋಟೆ ಯುವಕ ಜೈಲು ಪಾಲು!
ಪ್ರಾಣಿ-ಪಕ್ಷಿಗೆ ಹಿಂಸೆ ನೀಡಿ ಟಿಕ್​ಟಾಕ್ ಮಾಡಿದ್ದ ಯುವಕನನ್ನು ಬಂಧಿಸಿರುವುದು.
  • Share this:
ಬಾಗಲಕೋಟೆ (ಜೂ. 11): ಟಿಕ್ ಟಾಕ್ ಪ್ರಿಯರೇ, ವನ್ಯಜೀವಿಗಳೊಂದಿಗೆ ವಿಡಿಯೋ ಮಾಡುವ ಮುನ್ನ ಎಚ್ಚರ ವಹಿಸಿ. ಇಲ್ಲವಾದರೆ ಜೈಲು ಪಾಲಾಗುವುದು ಗ್ಯಾರಂಟಿ. ಟಿಕ್​ಟಾಕ್​ ವಿಡಿಯೋ ಮಾಡಲು ವನ್ಯಜೀವಿಗಳಿಗೆ ಹಿಂಸೆ ನೀಡಿದ ಆರೋಪದ ಮೇಲೆ ಬಾಗಲಕೋಟೆಯ ಯುವಕನೋರ್ವ ಈಗ ಜೈಲು ಪಾಲಾಗಿದ್ದಾನೆ.

ಹೌದು, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಾದಾಪುರ ಗ್ರಾಮದ ಯುವಕ ವಿಠ್ಠಲ ವಾಲಿಕಾರ ಎಂಬಾತ ಮೊಲ ಕೊಂದು, ನವಿಲಿನೊಂದಿಗೆ ಟಿಕ್ ಟಾಕ್ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ. ಅರಣ್ಯ ಇಲಾಖೆ ಅಧಿಕಾರಿಗಳು ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ವಿಠ್ಠಲ ಮಾದಾಪುರ ಗುಡ್ಡದಲ್ಲಿ ಎರಡು  ಮೊಲ ಕೊಂದು, ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹುನಗುಂದ ವಲಯ ಅರಣ್ಯಾಧಿಕಾರಿ ವಿರೇಶ್, ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿದ್ದಾರೆ. ರಾಷ್ಟ್ರ ಪಕ್ಷಿ ನವಿಲಿಗೆ ಹಿಂಸೆ ಹಾಗೂ ಮೊಲ ಕೊಂದಿರುವುದು ಕಾನೂನಿನನ್ವಯ ಅಪರಾಧವಾಗಿದೆ.

ಮೊಲ ಸಾಯಿಸಿ ಹಿಡಿದುಕೊಂಡಿರುವ ವಿಠ್ಠಲ ವಾಲಿಕಾರ

ಇದನ್ನು ಓದಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ

ಇತ್ತೀಚೆಗೆ ಬಾದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದ ಗುಡ್ಡದಲ್ಲಿ ಇಬ್ಬರು ಯುವಕರು ಮೊಲಕ್ಕೆ ಹಿಂಸೆ ನೀಡಿ ಟಿಕ್ ಟಾಕ್ ಮಾಡಿದ್ದರು. ಈ ಯುವಕರಿಬ್ಬರ ವಿರುದ್ಧ ಬಾದಾಮಿ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ, ಓರ್ವನನ್ನು ಬಂಧಿಸಿದ್ದರು, ಇನ್ನೋರ್ವ ಯುವಕ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.
First published: June 11, 2020, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading