ಟಿಕ್ ಟಾಕ್ ಖಯಾಲಿಯಲ್ಲಿ ವನ್ಯಜೀವಿಗಳ ಬೇಟೆ - ಅರಣ್ಯ ಇಲಾಖೆ ಸಿಬ್ಬಂದಿಯಿಂದ ಓರ್ವನ ಬಂಧನ

ಟಿಕ್ ಟಾಕ್ ಖಯಾಲಿಯಲ್ಲಿ ವನ್ಯಜೀವಿಗಳ ಬೇಟೆಯಾಡುವ ಜೊತೆಗೆ, ಅವುಗಳಿಗೆ ಹಿಂಸೆ ನೀಡಿ, ಕೊಂದು ತಿಂದು ಅದನ್ನು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವೃತ್ತಿ ಹೆಚ್ಚಾಗಿದೆ

ಟಿಕ್​ಟಾಕ್ ಮಾಡಿದ್ದ ಯುವಕನನ್ನು ಬಂಧಿಸಿರುವುದು

ಟಿಕ್​ಟಾಕ್ ಮಾಡಿದ್ದ ಯುವಕನನ್ನು ಬಂಧಿಸಿರುವುದು

  • Share this:
ಕಲಬುರ್ಗಿ(ಜೂ.13): ಕಲಬುರ್ಗಿ ಜಿಲ್ಲೆಯಲ್ಲಿ ಯುವಕರ ಟಿಕ್ ಟಾಕ್ ಹಾವಳಿ ಹೆಚ್ಚಾಗಿದ್ದು, ವನ್ಯಜೀವಿಗಳನ್ನು ಬೇಟೆಯಾಡಿ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವವೃತ್ತಿ ಹೆಚ್ಚಾಗಿದೆ. ಹೀಗೆ ವನ್ಯಜೀವಿಗಳ ಬೇಟೆಯಾಡಿ ಟಿಕ್ ಟಾಕ್ ಮಾಡಿದ ಆರೋಪದ ಮೇಲೆ ಕಲಬುರ್ಗಿ ಅರಣ್ಯ ಇಲಾಖೆ ಸಿಬ್ಬಂದಿ ಓರ್ವ ಯುವಕನನ್ನು ಬಂಧಿಸಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಶರಣ ಸಿರಸಗಿ ಗ್ರಾಮದ ಶಿವಾನಂದ ಎಂಬಾತನನ್ನು ಬಂಧಿಸಿದೆ. ತನ್ನ ಗೆಳೆಯರ ಜೊತೆಗೂಡಿ ಯುವಕ ಅಡವಿಯಲ್ಲಿ ಮೊಲ ಹಾಗೂ ದೊಡ್ಡ ಗಾತ್ರದ ಉಡದ ಬೇಟೆಯಾಡಿದ್ದ. ಅಷ್ಟಕ್ಕೆ ನಿಲ್ಲದೆ ಬೇಟೆಯಾಡಿದ ವನ್ಯಜೀವಿಗಳೊಂದಿಗೆ ವಿವಿಧ ಭಂಗಿಯಲ್ಲಿ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ನಂತರ ಅವುಗಳನ್ನು ಕೊಂದು ತಿಂದು ಹಾಕಿದ್ದ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ದೃಶ್ಯಗಳನ್ನು ಗಮನಿಸಿ ಬೆಂಗಳೂರಿನ ಅರಣ್ಯ ಇಲಾಖೆ ಕೇಂದ್ರ ಕಛೇರಿ ಸಿಬ್ಬಂದಿ, ಕಲಬುರ್ಗಿಯ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಉಡ ಹಾಗೂ ಮೊಲಗಳು ಸಂರಕ್ಷಿತ ಪ್ರಾಣಿಗಳಾಗಿವೆ. ಅವುಗಳ ಬೇಟೆಯಾಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಟ್ಟಿರುವುದಕ್ಕೆ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಕಛೇರಿ ಸೂಚನೆ ಮೇರೆಗೆ ಕಲಬುರ್ಗಿ ತಾಲೂಕಿನ ಶರಣಸಿರಸಗಿ ಗ್ರಾಮದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಶಿವಾನಂದ ಎಂಬಾತನ್ನು ಬಂಧಿಸಿದೆ. ಈ ವೇಳೆ ತಾನು ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಟಿಕ್ ಟಾಕ್ ಖಯಾಲಿಯಲ್ಲಿ ವನ್ಯಜೀವಿಗಳ ಬೇಟೆಯಾಡುವ ಜೊತೆಗೆ, ಅವುಗಳಿಗೆ ಹಿಂಸೆ ನೀಡಿ, ಕೊಂದು ತಿಂದು ಅದನ್ನು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ವನ್ಯಜೀವಿಗಳ ಬೇಟೆಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಆರ್.ಎಫ್.ಒ. ಜಯವರ್ಧನ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  ಮೀನು ಹಿಡಿಯಲು ಹೋಗಿ ನೀರು ಪಾಲಾದ ಮೀನುಗಾರರು ; ಎರಡು ದಿನಗಳ ಬಳಿಕ ಶವಗಳು ಪತ್ತೆ

ಈ ಹಿಂದೆಯೂ ಜಿಲ್ಲೆಯಲ್ಲಿ ಟಿಕ್ ಟಾಕ್ ಖಯಾಲಿಯಲ್ಲಿ ಕಾಡು ಹಂದಿ, ಮುಳ್ಳು ಹಂದಿ ಹಾಗೂ ಕೃಷ್ಣ ಮೃಗಗಳ ಬೇಟೆಯಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.

ನೇಣು ಬಿಗಿದುಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ

ಪೊಲೀಸ್ ಪೇದೆಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿ ನಗರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ. ವಸತಿ ಗೃಹದಲ್ಲಿಯೇ ನೇಣು ಬಿಗಿದುಕೊಂಡು ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಪೇದೆಯನ್ನು ಮಲ್ಲಿಕಾರ್ಜುನ ಬಿರಾದಾರ(35) ಎಂದು ಗುರುತಿಸಲಾಗಿದೆ.

ಈತ ರೋಜಾ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದು, ವಾಹನ ಚಾಲನೆ ಮಾಡುತ್ತಿದ್ದ. ಈತನ ಹೆಂಡತಿಯೂ ಪೊಲೀಸ್ ಇಲಾಖೆಯಲ್ಲಿದ್ದು, ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಪೊಲೀಸ್ ದಪಂತಿಗಳಿಗೆ ಇಬ್ಬರು ಮಕ್ಕಳಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊರೋನಾ ಹಿನ್ನೆಲೆಯಲ್ಲಿ  ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
First published: