Kodagu District: ಕೊರಗಜ್ಜ ದೇವಾಲಯದಿಂದ ಎರಡು ಪ್ಯಾಕೇಟ್ ಮದ್ಯ ಎಗರಿಸಿದ ಭೂಪ!

ಈ ಭಾಗದ ಭಕ್ತರು ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾದಾಗ ಕೊರಗಜ್ಜ ದೇವರಿಗೆ ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಒಂದು ಬಾಟಲಿ ಎಣ್ಣೆ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುತ್ತಾರೆ.

ಕೊರಗಜ್ಜ ದೇವಾಲಯದಲ್ಲಿ ಎಣ್ಣೆ ಕದಿಯುತ್ತಿರುವ ಭೂಪ

ಕೊರಗಜ್ಜ ದೇವಾಲಯದಲ್ಲಿ ಎಣ್ಣೆ ಕದಿಯುತ್ತಿರುವ ಭೂಪ

  • Share this:
ಕೊಡಗು : ಕಳ್ಳರು ಕದಿಯೋದಾದ್ರೆ ಚಿನ್ನಾಭರಣವನ್ನೋ, ನಗದನ್ನೋ ಇಲ್ಲ ಬೆಲೆ ಬಾಳುವ ವಸ್ತುಗಳನ್ನೋ ಕದಿಯೋದು ಕಾಮನ್. ಇನ್ನುಕೆಲವು ಕಳ್ಳರು, ನಾಯಿ, ಹಸು- ಎಮ್ಮೆ ಸೇರಿ ಇತರೆ ಪ್ರಾಣಿಗಳನ್ನು ಕದಿಯುತ್ತಾರೆ.  ಆದರೆ ಇಲ್ಲೊಬ್ಬ ಎರಡು ಪ್ಯಾಕೇಟ್ ಮದ್ಯವನ್ನ ಎಗರಿಸಿದ್ದಾನೆ (A Man Theft Drinks Pocket From Temple). ಅದು ಕೂಡ ದೇವಸ್ಥಾನದಲ್ಲಿ ಮದ್ಯ ಕಳವಾಗಿದೆ ಎನ್ನೋದು ಇನ್ನೂ ಅಚ್ಚರಿ ವಿಷಯ. ಅಷ್ಟೇ ಅಲ್ಲದೇ, ಈ ವ್ಯಕ್ತಿ ಕೊರಗಜ್ಜನಿಗೆ ಭಕ್ತರು ನೀಡಿರುವ ಹತ್ತಾರು ಬಗೆಬಗೆಯ ಮದ್ಯದ ಪ್ಯಾಕೆಟ್​ಗಳು, ಬಾಟಲಿಗಳು ಇದ್ದರೂ ಆತ ಎರಡು ಟೆಟ್ರಾ ಪ್ಯಾಕೆಟ್​ಗಳನ್ನು ಮಾತ್ರವೇ ಕದ್ದು, ಉಳಿದ ಎಣ್ಣೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಹೌದು ಇದು ಜೋಕ್ ಎನಿಸಿದರು ಸತ್ಯವೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್ ನ ಗ್ರಾಮದ ಕೊರಗಜ್ಜನ ದೇವಾಲಯದಲ್ಲಿ.

ಮದ್ಯವ್ಯಸನಿ ಆಗಿರುವ ಆ ವ್ಯಕ್ತಿಗೆ ಮದ್ಯ ಬೇಕೆನಿಸಿದಾಗ ಕೈಯಲ್ಲಿ ಹಣವಿಲ್ಲದ ಅವನು ಎಣ್ಣೆಗಾಗಿ ಪರದಾಡಿದ್ದಾನೆ. ಈ ವೇಳೆ ಆತನಿಗೆ ಕೊರಗಜ್ಜನ ದೇವಸ್ಥಾನ ನೆನಪಾಗಿದೆ. ಕೂಡಲೇ ಗ್ರಾಮದಲ್ಲಿರುವ ಕೊರಗಜ್ಜನ ದೇವಾಲಯಕ್ಕೆ ಬಂದಿದ್ದಾನೆ. ಬಂದವನೆ ಸುತ್ತಲೂ ಒಮ್ಮೆ ನೋಡಿ ಮತ್ತೆ ದೇವಾಲಯದ ಹೊರಗೆ ನಿಂತು ಆ ಕಳ್ಳ ಮೊದಲು ದೇವಾಲಯದ ಒಳಗೆ ಎಣ್ಣೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿದ್ದಾನೆ. ಅಲ್ಲದೆ ದೇವಾಲಯದ ಒಳಗೆ ಯಾರು ಇಲ್ಲದಿರುವುದನ್ನು ಮನಗಂಡಿದ್ದಾನೆ. ಕೂಡಲೇ ತಡ ಮಾಡದೆ ದೇವಾಲಯದ ಒಳಗೆ ಬಂದವನೇ ಎರಡು ಪ್ಯಾಕೇಟ್ ಎಣ್ಣೆಯನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅದೆಲ್ಲವೂ ದೇವಾಲಯದ ಒಳಗಿರುವ ಸಿಸಿ ಟಿವಿ ಕ್ಯಾಮೆರಾದಲ್ಲೇ ಸೆರೆಯಾಗಿದೆ. ಇನ್ನೊಂದು ವಿಷಯ ಎಂದರೆ ದೇವರ ಮುಂದೆ ಸಾಕಷ್ಟು ಪ್ಯಾಕೇಟ್ ಎಣ್ಣೆ ಇದ್ದರು ಆತ ಎಲ್ಲವನ್ನು ತೆಗೆದುಕೊಂಡು ಹೋಗಿಲ್ಲ. ಬದಲಾಗಿ ತನಗೆ ಅಗತ್ಯವಿದ್ದ ಎರಡು ಪ್ಯಾಕೇಟ್ ಗಳನ್ನು ಮಾತ್ರ ಕೊಂಡೊಯ್ದು ತನ್ನ ಅಗತ್ಯವನ್ನು ಪೂರೈಸಿಕೊಂಡಿದ್ದಾನೆ.

ತಪ್ಪು ಕಾಣಿಕೆ ನೀಡಿದ

ಇನ್ನು ಎಣ್ಣೆ ಎಗರಿಸಿರುವುದು ಗಮನಕ್ಕೆ ಬಂದ ಕೊರಗಜ್ಜ ದೇವರ ಅರ್ಚಕ ಎಣ್ಣೆ ಕದ್ದವನಿಗೆ ಶಿಕ್ಷೆ ಕೊಡುವಂತೆ ಕೊರಗಜ್ಜ ದೇವಾಲಯದ ಬಳಿ ಹರಕೆ ಕಟ್ಟಿದ್ದರಂತೆ. ಇದರಿಂದಾಗಿ ಬಳಿಕ ಎಣ್ಣೆ ಕದ್ದವನ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತಂತೆ. ಆತನ ಕಣ್ಣಿನ ಸುತ್ತಲೂ ಕಪ್ಪಾಗಿ ಕಣ್ಣು ಕಾಣಿಸದಂತೆ ಆಗಿತ್ತಂತೆ. ಬಳಿಕ ಆತನಿಗೆ ತನ್ನ ತಪ್ಪಿನ ಅರಿವಾಗಿ ದೇವರಿಗೆ ತಪ್ಪು ಕಾಣಿಕೆ ನೀಡಿದ್ದಾನೆ ಎನ್ನಲಾಗಿದೆ.

ಕೊರಗಜ್ಜನ ಪವಾಡ

ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕು ವ್ಯಾಪ್ತಿ ಮತ್ತು ಕೊಡಗು ಜಿಲ್ಲೆಯ ಬಹುಭಾಗದಲ್ಲಿ ಕೊರಗಜ್ಜನ ಮಹಿಮೆ ಅಥವಾ ಪವಾಡ ಜಾಸ್ತಿ. ಈ ಭಾಗದ ಭಕ್ತರು ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾದಾಗ ಕೊರಗಜ್ಜ ದೇವರಿಗೆ ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಒಂದು ಬಾಟಲಿ ಎಣ್ಣೆ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುತ್ತಾರೆ. ಹೀಗೆ ಸಲ್ಲಿಸಿದ ಹರಕೆಯ ಮದ್ಯವನ್ನೇ ಈ ಭೂಪ ಎಗರಿಸಿದ್ದಾನೆ. ಅದು ಸಹ ತನಗೆ ಬೇಕಿರುವಷ್ಟು ಮದ್ಯವನ್ನು ಮಾತ್ರ ಕದ್ದು ಉಳಿದಿದ್ದ ಮದ್ಯದ ಪ್ಯಾಕೆಟ್​ಗಳನ್ನು ಅಲ್ಲಿಯೇ ಬಿಟ್ಟಿದ್ದಾನೆ. ಅಂದರೆ ಆತ ತನಗೆ ಎಷ್ಟು ಬೇಕೋ ಅಷ್ಟು ಮಾತ್ರ ಎಣ್ಣೆಯನ್ನು ತೆಗೆದುಕೊಂಡು ಉಳಿದಿದ್ದನ್ನು ಅಲ್ಲಿಯೇ ಬಿಟ್ಟಿದ್ದಾನೆ.

ಇದನ್ನು ಓದಿ: BS Yediyurappa: ಕಾಂಗ್ರೆಸ್​ನಲ್ಲಿ ಭವಿಷ್ಯವಿಲ್ಲ, ಆ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಳ್ಳಿ; ಬಿಎಸ್ ಯಡಿಯೂರಪ್ಪ

ಒಟ್ಟಿನಲ್ಲಿ ಒಂದೆಡೆ ಐಷಾರಾಮಿ ಜೀವನಕ್ಕಾಗಿಯೋ, ಇಲ್ಲ ತಮ್ಮ ಮೋಜು ಮಸ್ತಿಗಳಿಗಾಗಿಯೋ ಕಳ್ಳತನ ಮಾಡುವವರ ನಡುವೆ ತನ್ನ ದುಷ್ಚಟಕ್ಕೆ ದಾಸನಾಗಿ ಎರಡು ಪ್ಯಾಕೇಟ್ ಮದ್ಯ ಕಳವು ಮಾಡಿ ನಗೆಪಾಟಲಿಗೆ ಈಡಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.
Published by:HR Ramesh
First published: