ಕ್ಷುಲ್ಲಕ‌ ಕಾರಣಕ್ಕೆ ಒಬ್ಬನ ಹತ್ಯೆ; ನಾಲ್ಕು ಜನರ ಆರೋಪಿಗಳ ಬಂಧನ

ರಸ್ತೆಯಲ್ಲಿ ಹೋಗುವಾಗ ಬೈಕ್ ನಲ್ಲಿ ಹೊರಟಿದ್ದ ಅಮರೇಶ ಹಾಗು ರಮೇಶರಿಗೆ ದಾರಿ ಬಿಟ್ಟಿಲ್ಲ. ಈ ಕಾರಣಕ್ಕೆ ಜಗಳವಾಗಿದೆ. ಜಗಳದ ನಂತರ ರಮೇಶನ‌ ಮೇಲೆ ಹಲ್ಲೆಯಾಗಿತ್ತು. ಇದನ್ನು ಕೇಳಲು ಇನ್ನಷ್ಟು ಜನ ಗವಿಗಟ್ಟದವರು ಹೋಗಿದ್ದರು. ವಿಷಯ ತಿಳಿದು ಆರೋಪಿಗಳ ಪರವಾಗಿಯೂ ಇನ್ನಷ್ಟು ಜನ ಬಂದಿದ್ದರು. ಅವರಲ್ಲಿ ಗಲಾಟೆಯಾದಾಗ ಚಾಕುವಿನಿಂದ ಇರಿಯಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು: ದೇವದುರ್ಗಾ ತಾಲೂಕಿನ ಶಾವಂತಗಲ್ ನಲ್ಲಿ ಡಿಸೆಂಬರ್ 15 ರಾತ್ರಿ ಯಾರು ಊಹಿಸದಂಥ ಘಟನೆ ನಡೆದಿದೆ. ಸಹಜವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆಯಲ್ಲಿ ಓರ್ವನ ಕೊಲೆಯಾಗಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಇನ್ನಷ್ಟು ಜನರ ಬಂಧಿಸುವ ಸಾಧ್ಯತೆ ಇದೆ.

ಜಿಲ್ಲೆಯ ದೇವದುರ್ಗಾ ತಾಲೂಕಿನ ಶಾವಂತಗಲ್ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಅಮರೇಶ (28) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಮಲ್ಲಯ್ಯ, ರಮೇಶ ಹಾಗು ಮಹಾದೇವ ಎಂಬುವವರಿಗೆ ಗಾಯವಾಗಿ ರಾಯಚೂರು ರಿಮ್ಸ್ ಗೆ ದಾಖಲಾಗಿದ್ದರು. ಮಾನವಿ ತಾಲೂಕಿನ‌ ಗವಿಗಟ್ಟಿ ಗ್ರಾಮದಿಂದ ದೇವದುರ್ಗಾದ ಶಾವಂತಗಲ್ ನಲ್ಲಿರುವ ಮಾರಮ್ಮ ದೇವಿಯ ಗುಡಿಗೆ ದೇವರ ಮಾಡಲು ಹೋಗಿದ್ದರು. ರಾತ್ರಿ  ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಊಟ ಮಾಡಿ ಬೈಕ್ ನಲ್ಲಿ ಹೋಗುವ ಸಂದರ್ಭದಲ್ಲಿ ಅಮರೇಶ, ಮಹಾದೇವ ರಮೇಶ ಹಾಗೂ ಹನುಮಯ್ಯ ಎಂಬುವವರು ಬೈಕ್ ನಲ್ಲಿ ಹೋಗುವಾಗ ರಸ್ತೆಯ ಮಧ್ಯೆ 15-20 ಜನರ ಗುಂಪು ನಿಂತಿತ್ತು. ರಸ್ತೆಯ ಮಧ್ಯೆ ನಿಂತಿದ್ದನ್ನು ಪ್ರಶ್ನಿಸಿದಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದವಾಗಿತ್ತು. ಈ ಮಧ್ಯೆ ಸ್ವಲ್ಪ ಸಮಯದ  ನಂತರ ಅಮರೇಶ ಹಾಗು ಹನುಮಂತ ಎಂಬುವವರು ಯಾಕೆ ಕೆಟ್ಟದಾಗಿ ಮಾತನಾಡಿದಿರಿ ಎಂದು ಕೇಳಲು ಹೋಗಿದ್ದಾರೆ. ಆಗ ಅಲ್ಲಿಯೇ ಇದ್ದ ಯುವಕರು ಇನ್ನಷ್ಟು ಜನರ ಗುಂಪುಕಟ್ಟಿಕೊಂಡು ಬಂದು ಮುಖಕ್ಕೆ ಮುಸುಕು ಹಾಕಿಕೊಂಡು , ದೊಣ್ಣೆ, ಲಾಂಗು, ಮಚ್ಚುಗಳಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದರಿಂದ‌ ಅಮರೇಶ ಸಾವನ್ನಪ್ಪಿದ್ದಾರೆ, ಇನ್ನೂ ಐದು ಜನರಿಗೆ ಗಾಯವಾಗಿದೆ.

ಇದನ್ನು ಓದಿ: ಯತ್ನಾಳ್ ಯಾರು? ಅವರೇನು ರಾಷ್ಟ್ರೀಯ ನಾಯಕನಲ್ಲ, ಸಾಮಾನ್ಯ ಶಾಸಕನಷ್ಟೇ; ಸಚಿವ ಸದಾನಂದಗೌಡ ಕಿಡಿ

ಸಂಭ್ರಮದಿಂದ ದೇವರ ಕಾರ್ಯ ಮಾಡಿ ಮನೆಗೆ ಹೋಗಿ ನೆಮ್ಮದಿಯಿಂದ ಇರಬೇಕಾದವರು ಕೇವಲ ರಸ್ತೆಯ ಮಧ್ಯೆದಲ್ಲಿ ನಿಂತಿರುವುದನ್ನು ಪ್ರಶ್ನಿಸಿದ್ದಕ್ಕೆ ಕೊಲೆಯಾಗಿತ್ತು. ಈ ಬಗ್ಗೆ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈಗ ಹಲ್ಲೆ ಮಾಡಿದವರ ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಲಿಂಗಸಗೂರು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ಘಟನೆಯಲ್ಲಿ ಚಾಕು ಇರಿದಿದ್ದ ಸಾಗರ, ಸುನೀಲ, ಬಸವ ಹಾಗೂ ವೀರೇಶ ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆಯಲ್ಲಿ ಇನ್ನಷ್ಟು ಜನರು ಭಾಗಿಯಾಗಿದ್ದಾರೆ. ಅವರ ಬಗ್ಗೆಯೂ ಮಾಹಿತಿ ಸಿಕ್ಕಿದ್ದು ಒಂದೆರಡು ದಿನದಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು  ರಾಯಚೂರು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಆರೋಪಿಗಳಾದ ನಾಲ್ಕು ಜನರು, ಕೊಲೆಯಾದ ಅಮರೇಶ ಹಾಗು ಇತರರಾರು ಮೊದಲಿನಿಂದಲೂ ಪರಿಚಿತರಲ್ಲ. ಆರೋಪಿಗಳು ಸಿರವಾರ ಪಟ್ಟಣದವರಾಗಿದ್ದು, ಅವರು ರಸ್ತೆಯಲ್ಲಿ ಹೋಗುವಾಗ ಬೈಕ್ ನಲ್ಲಿ ಹೊರಟಿದ್ದ ಅಮರೇಶ ಹಾಗು ರಮೇಶರಿಗೆ ದಾರಿ ಬಿಟ್ಟಿಲ್ಲ. ಈ ಕಾರಣಕ್ಕೆ ಜಗಳವಾಗಿದೆ. ಜಗಳದ ನಂತರ ರಮೇಶನ‌ ಮೇಲೆ ಹಲ್ಲೆಯಾಗಿತ್ತು. ಇದನ್ನು ಕೇಳಲು ಇನ್ನಷ್ಟು ಜನ ಗವಿಗಟ್ಟದವರು ಹೋಗಿದ್ದರು. ವಿಷಯ ತಿಳಿದು ಆರೋಪಿಗಳ ಪರವಾಗಿಯೂ ಇನ್ನಷ್ಟು ಜನ ಬಂದಿದ್ದರು. ಅವರಲ್ಲಿ ಗಲಾಟೆಯಾದಾಗ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಗಾಯಗೊಂಡ ಅಮರೇಶ ಸಾವನ್ನಪ್ಪಿದ್ದರು.
Published by:HR Ramesh
First published: