ಕಾಫಿತೋಟದ ಕೆಲಸಕ್ಕೆಂದು ಕೆರೆತಂದು ಅಪ್ರಾಪ್ತೆ ಮೇಲೆ ಕಾಮಕ್ರೌರ್ಯಕ್ಕೆ ಮುಂದಾದ ಕಾಮುಕ

ನಂಬಿದವನಿಂದ ಇಷ್ಟೆಲ್ಲಾ ನಂಬಿಕೆ ದ್ರೋಹವಾದರೂ ಅಪ್ರಾಪ್ತೆಯ ಪೋಷಕರು ನಮಗೆ ಬಳ್ಳಾರಿಯಿಂದ ಓಡಾಡಿ ಕೇಸ್ ನಡೆಸಲು ಸಾಧ್ಯವಿಲ್ಲ. ರಾಜೀ ಮಾಡಿಕೊಳ್ಳುತ್ತೇವೆ ಎಂದಿದ್ದರಂತೆ. ಆದರೆ, ಪೊಲೀಸರು ಇದು ಪೋಕ್ಸೋ ಕೇಸ್. ಹಾಗೆಲ್ಲ ಬಿಡಲು ಆಗಲ್ಲ. ಕೇಸ್ ಆಗಲೇಬೇಕು ಎಂದು ಕೇಸ್ ದಾಖಲಿಸಿ ಆರೋಪಿಯನ್ನು ಅಂದರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಿಕ್ಕಮಗಳೂರು; ವ್ಯಕ್ತಿಯೋರ್ವ ಮಗಳ ವಯಸ್ಸಿನ ಅಪ್ರಾಪ್ತೆ ಮೇಲೆ ಕಾಮಕ್ರೌರ್ಯಕ್ಕೆ ಮುಂದಾಗಿ ಸ್ಥಳೀಯರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ. ನಂತರ ಪೊಲೀಸ್ ಠಾಣೆಯಿಂದ ಆರೋಪಿ ಪರಾರಿಯಾಗಿದ್ದನು. ಆ ಬಳಿಕ ಪೊಲೀಸರು ಮತ್ತೆ ಅವನನ್ನು ಬಂಧಿಸಿ, ಕಂಬಿ ಹಿಂದೆ ಸೇರಿಸಿದ್ದಾರೆ. ಆರಂಭದಲ್ಲಿ ಆರೋಪಿ ತಪ್ಪಿಸಿಕೊಳ್ಳುವಂತೆ ಬೇಜವಾಬ್ದಾರಿ ತೋರಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.

ಮೊನ್ನೆ ಬಿಸಿಲನಾಡು ಬಳ್ಳಾಯಿಂದ ಕುಟುಂಬವೊಂದನ್ನು ಕಾಫಿತೋಟದಲ್ಲಿ ಕೆಲಸಕ್ಕೆಂದು ಬಳ್ಳಾರಿ ಮೂಲದ ರಘು ಎಂಬಾತ ಕರೆತಂದಿದ್ದ. ಅಪ್ಪ-ಅಮ್ಮನನ್ನು ಒಂದು ತೋಟದಲ್ಲಿ ಬಿಟ್ಟು ಮಗಳನ್ನು ಮತ್ತೊಂದು ತೋಟಕ್ಕೆ ಕರೆದುಕೊಂಡು ಹೋಗಬೇಕೆಂದು ಕಾಡಿಗೆ ಕರೆದೊಯ್ತು ಅತ್ಯಾಚಾರಕ್ಕೆ ಯತ್ನಿಸ್ತಿದ್ದ.

ಕಡೂರು ರಸ್ತೆಯ ಹಿರೇಗೌಜ ಗ್ರಾಮದ ಕಾಡಿನಲ್ಲಿ ಬಾಲಕಿ ಕೂಗಾಡುವ ಶಬ್ಧ ಕೇಳಿ ಅಕ್ಕಪಕ್ಕದ ತೋಟದಲ್ಲಿದ್ದವರು ಬಾಲಕಿಯನ್ನು ರಕ್ಷಿಸಿದ್ದಾರೆ. ಆರಂಭದಲ್ಲಿ ಕಾಮುಕ ಬಾಲಕಿಗೆ ಮೂಗು-ಬಾಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾನೆ. ಸ್ಥಳೀಯರು ಸ್ಥಳಕ್ಕೆ ಬಂದಾಗ ಇವಳು ನನ್ನ ಮಗಳು. ಮನೆಯಲ್ಲಿ ಮಾತು ಕೇಳಲಿಲ್ಲ. ಅದಕ್ಕೆ ಬುದ್ಧಿ ಹೇಳಲು ಕರೆತಂದಿದ್ದೇನೆ ಎಂದು ಹೇಳಿದ್ದಾನೆ. ನಂತರ ಬಾಲಕಿ ಕೇಳಿದಾಗ ಇಲ್ಲ ಕೆಲಸಕ್ಕೆಂದು ಕೆರೆದುಕೊಂಡು ಬಂದಿದ್ರು ಎಂಬ ವಿಷಯ ಕೇಳಿ ಸ್ಥಳದಲ್ಲಿದ್ದ ಯುವಕರು ರಘು ಎಂಬ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ಲಾಕಪ್​ನಲ್ಲಿ ಕೂಡಿಹಾಕಿದ್ದರು. ಆದರೆ, ಆತ ಲಾಕಪ್‍ನಿಂದ ಎಸ್ಕೇಪ್ ಆಗಿದ್ದಾನೆ. ಪೊಲೀಸರೇ ಆತನನ್ನು ಬಿಟ್ಟು ಕಳಿಸಿದ್ದರೋ ಅಥವಾ ಅವನೇ ಓಡಿಹೋಗಿದ್ದಾನೊ ಗೊತ್ತಿಲ್ಲ. ಅವನು ಹೇಗೆ ತಪ್ಪಿಸಿಕೊಂಡ ಅನ್ನೋದು ಇಂದಿಗೂ ನಿಗೂಢ. ಆರೋಪಿ ಠಾಣೆಯಿಂದಲೇ ತಪ್ಪಿಸಿಕೊಂಡ ಬಳಿಕ ಮತ್ತೆ ಪೊಲೀಸರು ಎಚ್ಚೆತ್ತು ಆತನನ್ನು ಹುಡುಕಿ ಬಂಧಿಸಿದ್ದಾರೆ. ಮೊದಲಿಗೆ ಸಿಬ್ಬಂದಿ ಬೇಜಾವಾಬ್ದಾರಿಯಿಂದಲೇ ಆರೋಪಿ ತಪ್ಪಿಸಿಕೊಂಡಿದ್ದಾನೆಂದು ಎಸ್ಪಿ ಅಕ್ಷಯ್ ಅಂದು ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ಎ.ಎಸ್.ಐ. ಹಾಗೂ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಿದ್ದಾರೆ.

ನಂಬಿದವನಿಂದ ಇಷ್ಟೆಲ್ಲಾ ನಂಬಿಕೆ ದ್ರೋಹವಾದರೂ ಅಪ್ರಾಪ್ತೆಯ ಪೋಷಕರು ನಮಗೆ ಬಳ್ಳಾರಿಯಿಂದ ಓಡಾಡಿ ಕೇಸ್ ನಡೆಸಲು ಸಾಧ್ಯವಿಲ್ಲ. ರಾಜೀ ಮಾಡಿಕೊಳ್ಳುತ್ತೇವೆ ಎಂದಿದ್ದರಂತೆ. ಆದರೆ, ಪೊಲೀಸರು ಇದು ಪೋಕ್ಸೋ ಕೇಸ್. ಹಾಗೆಲ್ಲ ಬಿಡಲು ಆಗಲ್ಲ. ಕೇಸ್ ಆಗಲೇಬೇಕು ಎಂದು ಕೇಸ್ ದಾಖಲಿಸಿ ಆರೋಪಿಯನ್ನು ಅಂದರ್ ಮಾಡಿದ್ದಾರೆ. ಸ್ಥಳೀಯರು ಸಮಯಪ್ರಜ್ಞೆಯಿಂದ ಅಪ್ರಾಪ್ತೆ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾಳೆ.
Published by:HR Ramesh
First published: