ಮದುವೆಯಾಗೋದೇ ಇವನ ಖಯಾಲಿ.. ‘ಮೂರು’ಬಿಟ್ಟು 4ನೇ ಸಲ ನಿಕ್ಕಾ ಮಾಡಿಕೊಳ್ಳಲು ಹೋಗಿ ಸಿಕ್ಕಬಿದ್ದ!

marriage cheating story: ವರದಕ್ಷಿಣೆ ಪಡೆದುಕೊಂಡು ಮದ್ವೆಯಾಗಿ ಮಹಿಳೆಯರಿಗೆ ವಂಚಿಸೋದು ಒಂದ್ಕಡೆಯಾದ್ರೆ, ಇನ್ನೊಂದೆಡೆ ತಾನು ಮಂತ್ರವಾದಿ ಅಂತಾ ಅಮಾಯಕ ಯುವತಿಯರು-ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರನ್ನ ದೈಹಿಕವಾಗಿ ಬಳಸಿಕೊಳ್ಳೋದ್ರಲ್ಲಿ ಈತ ನಿಸ್ಸೀಮ.

ಆರೋಪಿ ಯೂಸುಫ್ ಹೈದರ್

ಆರೋಪಿ ಯೂಸುಫ್ ಹೈದರ್

  • Share this:
ಚಿಕ್ಕಮಗಳೂರು : ಮೋಸಗಾರನೊಬ್ಬ ಮೂರು ಮದುವೆಯಾಗಿ ಮೂವರು ಹೆಂಡತಿಯರಿಗೆ ಕೈಕೊಟ್ಟು  ನಾಲ್ಕನೇಯವಳೊಂದಿಗೆ ಪರಾರಿಯಾಗಿರೋ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ನಲ್ಲಿ ನಡೆದಿದೆ. ನಾಲ್ಕನೇ ಮಹಿಳೆಯೊಂದಿಗೆ ಪರಾರಿ ಆಗಿರುವ ವ್ಯಕ್ತಿ ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್. ಸದ್ಯ ಮೂವರು ಪತ್ನಿಯರನ್ನ ಬಿಟ್ಟು ನಾಲ್ಕನೇ ಮದುವೆಗೆ ಸಿದ್ದನಾಗಿದ್ದಾನೆ. ಕಳಸ ಪಟ್ಟಣದ ಮಹಿಳೆ ಜೊತೆ ಮದುವೆಗೆ ಸಿದ್ದತೆ ನಡೆಸ್ತಿರೋ ವಿಚಾರ ಜನರಿಗೆ ಗೊತ್ತಾದಾಗ ಬಾಳೆಹೊನ್ನೂರು ಬಿಟ್ಟು ಆ ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ.

ಮೊದಲು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಮಹಿಳೆಯೊಬ್ಬರ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಈ ಭೂಪ, ಆ ಮಹಿಳೆಗೆ ಎರಡು ಮಕ್ಕಳನ್ನ ದಯಪಾಲಿಸಿದ ನಂತ್ರ ಆಕೆಯನ್ನ ಬಿಟ್ಟು ಪರಾರಿಯಾದ. ಆ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದ ಮಹಿಳೆಯೊಬ್ಬರನ್ನ ಯಾಮಾರಿಸಿ ಮದ್ವೆಯಾದ. ಆರು ತಿಂಗಳು ಸಂಸಾರ ಮಾಡದೇ ಎಸ್ಕೇಪ್ ಆದ. ಹೀಗೆ ಎರಡು ಮದ್ವೆಯಾದ್ರೂ ಮುಚ್ಚಿಟ್ಟು ಆ ಬಳಿಕ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಮಹಿಳೆಯೊಬ್ಬರ ಜೊತೆ ಮದುವೆಯಾದ. ಆ ಮಹಿಳೆಗೂ ಒಂದು ಹೆಣ್ಣು ಮಗು ಕರುಣಿಸಿ, ನಾಲ್ಕು ವರ್ಷ ಸಂಸಾರ ಮಾಡಿ ಇದೀಗ ನಾಲ್ಕನೇ ಇನ್ನಿಂಗ್ಸ್​ಗೆ ರೆಡಿಯಾಗಿದ್ದಾನೆ. ನಾಲ್ಕನೇ ಮದುವೆ ವಿಚಾರ ಮೂರನೇ ಪತ್ನಿಗೆ ತಿಳಿಯುತ್ತಲೇ ಗುಪ್ತ್ ಗುಪ್ತ್ ಮದುವೆಯಾಗಲು ಬಾಳೆಹೊನ್ನೂರಿನಿಂದಲೇ ಪರಾರಿಯಾಗಿ ಕಳಸ ಪಟ್ಟಣದಲ್ಲಿ ಮದುವೆಯಾಗಿ ಮಗು ಕೂಡ ಇರುವ ಮಹಿಳೆಯೊಬ್ಬರನ್ನ ಕರೆದುಕೊಂಡು ಹೋಗಿದ್ದಾನೆ.

ವರದಕ್ಷಿಣೆ ಪಡೆದುಕೊಂಡು ಮದ್ವೆಯಾಗಿ ಮಹಿಳೆಯರಿಗೆ ವಂಚಿಸೋದು ಒಂದ್ಕಡೆಯಾದ್ರೆ, ಇನ್ನೊಂದೆಡೆ ತಾನು ಮಂತ್ರವಾದಿ ಅಂತಾ ಅಮಾಯಕ ಯುವತಿಯರು-ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರನ್ನ ದೈಹಿಕವಾಗಿ ಬಳಸಿಕೊಳ್ಳೋದ್ರಲ್ಲಿ ಈತ ನಿಸ್ಸೀಮ ಅಂತಾ ಈತನಿಂದ ಮೋಸಹೋದ ಪತ್ನಿಯರೇ ಆರೋಪಿಸುತ್ತಿದ್ದಾರೆ.  ಈತನ ಕಿರುಕುಳ ತಾಳಲಾರದೇ ಮೊದಲನೇ ಪತ್ನಿ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ರೆ, ಎರಡನೇ ಪತ್ನಿ ಈತನನ್ನ ಕಟ್ಟಿಕೊಂಡ ತಪ್ಪಿಗೆ ಇದೀಗ ಬೇರೆಯವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ.

ಎರಡು ಮದ್ವೆಗಳನ್ನ ಮುಚ್ಚಿಟ್ಟು ಮೂರನೇ ಮದ್ವೆಯಾಗುವ ವೇಳೆ ಒಂದೂವರೆ ಲಕ್ಷ ಚಿನ್ನ, ಚಿನ್ನಾಭರಣ ಪಡೆದುಕೊಂಡಿದ್ದಾನೆ. ಇದೀಗ ಹೆಣ್ಣು ಮಗುವನ್ನ ಇಟ್ಟುಕೊಂಡು ತವರು ಮನೆ ಸೇರಿರೋ ಮಹಿಳೆ ಮುಂದೆ ಹೇಗೆ ಜೀವನ ಸಾಗಿಸೋದು ಅನ್ನೋ ಚಿಂತೆಯಲ್ಲಿದ್ದಾರೆ. ಇತ್ತ ಮಗಳನ್ನ ಕರೆದುಕೊಂಡು ಜೂಟ್ ಆಗಿದ್ದ ಭೂಪನನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಈ ನೀಚನ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತಾ ನಾಲ್ಕನೇ ಮದುವೆಯಾಗಲು ರೆಡಿಯಿರುವ ಮಹಿಳೆಯ ತಂದೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಪ್ರಜೆ ವಿವಾಹವಾಗಿ ಗಂಡನ ಜೊತೆ ತವರಿಗೆ ಬಂದಿರುವ ಕನ್ನಡತಿಗೆ ಈಗ ಹೊಸ ಸಮಸ್ಯೆ

ಮಾಟ, ಮಂತ್ರ ಅಂತಾ ಈಗಾಗಲೇ ನೂರಾರು ಜನರನ್ನ ಮುಖ್ಯವಾಗಿ ಯುವತಿಯರು-ಮಹಿಳೆಯರನ್ನ ವಂಚಿಸಿರೋ ಈ ಭೂಪನಿಗೆ ಯಾವುದೇ ಕಾನೂನಿನ ಭಯವಿಲ್ಲ. ನಾನು ಮಾಡಿದ್ದೇ ಸರಿ ಅಂತಾ ಕಟ್ಟಿಕೊಂಡ ಪತ್ನಿಯರಿಗೂ ಮೋಸ ಮಾಡುತ್ತಾ, ಅಮಾಯಕ ಜನರಿಗೂ ವಂಚಿಸುತ್ತಾ ಮಂತ್ರವಾದಿ ವೇಷ ಹಾಕ್ಕೊಂಡು ಜೀವನ ಮಾಡ್ತಾ ಇದ್ದಾನೆ. ಸದ್ಯ ಮೋಸ ಹೋದ ಪತ್ನಿಯರು ಹಾಗೂ ನಾಲ್ಕನೇ ಮದುವೆಯಾಗಲು ಕರೆದುಕೊಂಡು ಹೋಗಿರೋ ಮಹಿಳೆಯ ತಂದೆ ಈತನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ಮೋಸಗಾರ ಮಾಟಗಾರನಿಗೆ ಶಿಕ್ಷೆಯಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: