ಗಂಡ ಹೊರ ಹೋಗುತ್ತಿದ್ದಂತೆ ಮನೆಗೆ ನುಗ್ಗಿದ ಕಾಮುಕ.. ಮೇಲೆ ಬಿದ್ದವನನ್ನು ತಳ್ಳಿದ್ದಕ್ಕೆ ಮಹಿಳೆಗೆ ಬೆಂಕಿಯಿಟ್ಟ ಪಾಪಿ

ಗೃಹಿಣಿ ಮನೆಗೆ ನುಗ್ಗಿದ್ದ ಕಿರಾತಕ ಗಂಗಪ್ಪ ತಡರಾತ್ರಿ   ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ.  ವಿರೋಧಿಸಿದ್ದಕ್ಕೆ ಕೋಪಗೊಂಡ ಈ ಅಮಾನವೀಯ ಕೃತ್ಯ ವೆಸಗಿದ್ದಾನೆ.

ಆರೋಪಿ ಗಂಗಪ್ಪ

ಆರೋಪಿ ಗಂಗಪ್ಪ

  • Share this:
ಯಾದಗಿರಿ: ಪಾಗಲ್ ಪ್ರೇಮಿಯೊಬ್ಬ ಗೃಹಿಣಿಗೆ ಪ್ರೀತಿ ಪ್ರೇಮವೆಂದು ಕಾಡುತ್ತಿದ್ದನು. ನಿನ್ನೆ ಆಕೆ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಗೃಹಿಣಿ ವಿರೋಧ ಮಾಡಿದಕ್ಕೆ ಪಾಗಲ್ ಪ್ರೇಮಿ ಗಂಗಪ್ಪ ಗೃಹಿಣಿ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಸುರಪುರ ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ತಡರಾತ್ರಿ ದುರ್ಘಟನೆ ಜರುಗಿದೆ. ಗ್ರಾಮದ ಗೃಹಿಣಿ ಮನೆಗೆ ನುಗ್ಗಿದ್ದ ಕಿರಾತಕ ಗಂಗಪ್ಪ ತಡರಾತ್ರಿ   ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ.  ವಿರೋಧಿಸಿದ್ದಕ್ಕೆ ಕೋಪಗೊಂಡ ಕಿರಾತಕ ಈ ಅಮಾನವೀಯ ಕೃತ್ಯ ವೆಸಗಿದ್ದಾನೆ.

ಬೈಕ್ ಟ್ಯಾಂಕ್ ನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಬಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿ ನಂತರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.  ಮನೆಯಲ್ಲಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿ ವಾಸವಾಗಿದ್ದರು . ಪತಿ ರಾತ್ರಿ ಮನೆಯಿಂದ ಹೊರಗಡೆ ತೆರಳಿದಾಗ ಇದನ್ನು ಗಮನಿಸಿದ ಗಂಗಪ್ಪ ರಾತ್ರಿ ಮನೆಗೆ ನುಗ್ಗಿ ಈ‌ ಅಮಾನವೀಯ ಕೃತ್ಯ ವೇಸಗಿದ್ದಾನೆ. ಆರೋಪಿ ಗಂಗಪ್ಪ ಈಗ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಸುರಪುರ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಎದುರು ಮಹಿಳೆಯ ಕಣ್ಣೀರು 

ಈ ಬಗ್ಗೆ ಮಾತನಾಡಿದ ಸಂತ್ರಸ್ಥೆ,  ಗಂಗಪ್ಪ ರಾತ್ರಿ ಮನೆಗೆ ಬಂದು ಅತ್ಯಾಚಾರ ಮಾಡಲು ಬಂದಿದ್ದ ನಾನು ಆತನಿಗೆ ವಿರೋಧಿಸಿ ತಳ್ಳಿದೆ. ಆಗ ಆತನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದೆನೆಂದು ನೋವು ತೊಡಿಕೊಂಡಿದ್ದಾಳೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ತನ್ನ ಮೇಲೆ ಅಮಾನವೀಯ ಕೃತ್ಯ ವೇಸಗಿರುವ ಬಗ್ಗೆ ವೈದ್ಯರ ಮುಂದೆ ನೋವು ತೊಡಿಕೊಂಡಿದ್ದಾಳೆ. ಮಹಿಳೆಯ ದುಸ್ಥಿತಿ ನೋಡಿ ಆಕೆಯ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಇದನ್ನೂ ಓದಿ: Man Assaults Girlfriend: ಸೋದರ-ಸ್ನೇಹಿತನ ಜೊತೆ ಮಲಗಲು ನಿರಾಕರಿಸಿದ ಯುವತಿಗೆ ನರಕ ತೋರಿಸಿದ ಬಾಯ್​​​ಫ್ರೆಂಡ್​​!

ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಚೌಡೇಶ್ವರಹಾಳ ಗ್ರಾಮದಲ್ಲಿ ಮಹಿಳೆ ಮೇಲೆ ಗ್ರಾಮದ ಗಂಗಪ್ಪ ತಡರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದು ಈ ವೇಳೆ ಮಹಿಳೆಯು ವಿರೋಧಿಸದಕ್ಕೆ ಗಂಗಪ್ಪ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದು ಮಹಿಳೆಯು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆಂದರು. ಘಟನೆ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಸುರಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ವರ್ಷದಿಂದ ಹಿಂದೆ ಬಿದ್ದಿದ್ದ 

ಮಹಿಳೆಯ ಸಂಬಂಧಿ ಬಾಲಮ್ಮ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಗಂಗಪ್ಪ ಒಂದು ವರ್ಷದಿಂದ  ಪ್ರೀತಿ, ಪ್ರೇಮವೆಂದು ಪೀಡಿಸುತ್ತಿದ್ದನು. ನಿನ್ನೆ ರಾತ್ರಿಕೂಡ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗ  ಒಪ್ಪಿಲ್ಲ. ಇದರಿಂದ ಕೋಪಗೊಂಡು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆಂದಳು. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬಾಲಮ್ಮ ಒತ್ತಾಯ ಮಾಡಿದ್ದಾರೆ.

ಮತ್ತೊಂದು ಕೇಸ್​: ಅನೈತಿಕ ಸಂಬಂಧ ಬಿಟ್ಟಿದ್ದಕ್ಕೆ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್

ಚಿಕ್ಕೋಡಿ: ಆಕೆ ತನ್ನ ಮಗುವಿನ ಜನನ ಪ್ರಮಾಣ ಪತ್ರ ತರೋಕೆ ಅಂತ ತನ್ನೂರಿನಿಂದ ಪಟ್ಟಣಕ್ಕೆ ಬಂದಿದ್ದಳು.‌ ಬಂದ ಕೆಲಸ ಮುಗಿಸಿಕೊಂಡು ಶಿವ ಶಿವ ಅಂತ ಬಸ್ ಹತ್ತಿ ಊರಿನ ಕಡೆ ಪಯಣ ಬೆಳೆಸಿದ್ದಳು. ಇನ್ನೇನು ಊರು ಬಂದೆ ಬಿಡ್ತು ಅನ್ನುವಷ್ಟರಲ್ಲಿ ಮಧ್ಯದಾರಿಯಲ್ಲಿ ಅದೇ ಬಸ್ ಹತ್ತಿದ್ದ ಆಸಾಮಿ ಆಕೆಯ ಮೇಲೆ ಚಾಕುವಿನಿಂದ ಮನಸೋ ಇಚ್ಛೆ ಹಲ್ಲೆ (Man Sliced with a knife) ಮಾಡಿದ್ದ. ಸಹ ಪ್ರಯಾಣಿಕರು ಯಾರಾದರೂ ಹತ್ತಿರ ಬಂದರೆ ಅವರಿಗೆ ಚಾಕು ತೋರಿಸಿ, ಹೆದರಿಸಿ, ಆಕೆಯ ಮೇಲೆ ಆಮಾನುಷವಾಗಿ ಹಲ್ಲೆ ಮಾಡುವುದನ್ನು ಮುಂದುವರೆಸಿದ್ದ.

ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ (Hukkeri Taluk) ಬಾಡ ಮತ್ತು ಕೆ ಎಂ ಆಲೂರು ಮಾರ್ಗ ದಿನಂ ಪ್ರತಿ ಟ್ರಿಪ್ ಸರ್ವಿಸ್ ಮಾಡೋ ಬಸ್ ನಲ್ಲಿ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರೋ ಈ ಮಹಿಳೆಯ ಹೆಸರು ವಂದನಾ ಹಟ್ಟಿಕರ್ ಅಂತ. ಇದೇ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಹೆಣ್ಣುಮಗಳು. ಹುಕ್ಕೇರಿಗೆ ತನ್ನ ಮಗುವಿನ ಜನನ ಪ್ರಮಾಣ ಪತ್ರ ತಗೊಂಡು ವಾಪಸ್ ಊರಿಗೆ ಬರಲು ಬಸ್ ಹತ್ತಿದ್ದ ಈ ಹೆಣ್ಣುಮಗಳ ಮೇಲೆ ಚಿಕ್ಕೋಡಿ ತಾಲೂಕಿನ ಮಾಂಗನೂರು ಗ್ರಾಮದ ಪ್ರವೀಣ ಕಾಂಬಳೆ ಎಂಬಾತ ಮನಸೋ ಇಚ್ಛೆ ಹಲ್ಲೆ ಮಾಡತೊಡಗಿದ್ದ.
Published by:Kavya V
First published: