ಮತ್ತೆ ಮುನ್ನೆಲೆಗೆ ಬಂದ ಉತ್ತರ ಕನ್ನಡ ಜಿಲ್ಲೆಯ ಇಬ್ಭಾಗದ ಕೂಗು : ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಪತ್ರ ಚಳುವಳಿ

ಮಲೆನಾಡಿನ ಯಲ್ಲಾಪುರ, ಮುಂಡಗೋಡ, ಸಿದ್ದಾಪುರ, ಜೋಯಿಡಾ, ಹಳಿಯಾಳ ತಾಲೂಕುಗಳನ್ನ ಸೇರಿಸಿ ಶಿರಸಿಯನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಜೋರಾಗಿದೆ.

ಶಿರಸಿ ಜಿಲ್ಲಾ ಹೋರಾಟ ಸಮಿತಿಯಿಂದ ಪತ್ರ ಚಳುವಳಿ

ಶಿರಸಿ ಜಿಲ್ಲಾ ಹೋರಾಟ ಸಮಿತಿಯಿಂದ ಪತ್ರ ಚಳುವಳಿ

  • Share this:
ಕಾರವಾರ(ಆಗಸ್ಟ್​. 31) : ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಮಾಡಿ ಮಲೆನಾಡಿನ ತಾಲೂಕಾದ ಶಿರಸಿಯನ್ನ ಪ್ರತ್ಯೇಕವಾಗಿ ಇನ್ನೊಂದು ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಹೋರಾಟದ ಆದಿಯಾಗಿ ಹತ್ತಾರು ಹೋರಾಟ ನಡೆದಿದ್ದು, ಈಗ ಪತ್ರ ಚಳುವಳಿ ಕೂಡಾ ಆರಂಭಗೊಂಡಿದೆ.

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರ ಹೊಂದಿದೆ. ಘಟ್ಟದ ತಾಲೂಕುಗಳಿಂದ ಕಾರವಾರಕ್ಕೆ ಹೋಗಬೇಕೆಂದ್ರೆ ಬರೋಬ್ಬರಿ 120 ಕಿ.ಮೀ ಅಂತರ ದೂರಿವಿದೆ. ಇಂತಹ ಹತ್ತಾರು ಸಮಸ್ಯೆ ಮತ್ತು ಅಭಿವೃದ್ದಿಯನ್ನ ಮುಂದಿಟ್ಟು ಮಲೆನಾಡಿನ ಕೆಲ ಪ್ರಗತಿಪರ ಚಿಂತಕರು, ಹೋರಾಟಗಾರರು ಒಂದಾಗಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಮೂಲಕ ಹನ್ನೆರಡು ತಾಲೂಕಿರುವ ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಮಾಡಿ, ಮಲೆನಾಡಿನ ಯಲ್ಲಾಪುರ, ಮುಂಡಗೋಡ, ಸಿದ್ದಾಪುರ, ಜೋಯಿಡಾ, ಹಳಿಯಾಳ ತಾಲೂಕುಗಳನ್ನ ಸೇರಿಸಿ ಶಿರಸಿಯನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಹೊಸ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಜೋರಾಗಿದೆ.

ಈಗಿರುವ ಜಿಲ್ಲಾ ಕೇಂದ್ರ ಕಾರವಾರಕ್ಕೆ ಕರಾವಳಿಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಸೇರಿಸಿ ಕಾರವಾರ ಜಿಲ್ಲೆಯನ್ನಾಗಿ ಮಾಡಿ ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಮಾಡಬೇಕೆನ್ನುವುದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಒತ್ತಾಯವಾಗಿದೆ. ಕಳೆದ ಹತ್ತಾರು ವರ್ಷದಿಂದ ಈ ಹೋರಾಟ ಶಿರಸಿ ತಾಲೂಕಿನಲ್ಲಿ ಮಾತ್ರ ನಡೆಯುತ್ತಿದ್ದು, ಇದಕ್ಕೆ ಕರಾವಳಿಯ ಜನರು ಸೊಪ್ಪು ಹಾಕುತ್ತಿಲ್ಲ.

ಶಿರಸಿ ಪ್ರತ್ಯೇಕ ಜಿಲ್ಲೆ ಆದ್ರೆ ಏನು ಪ್ರಯೋಜನ?

ಶಿರಸಿ ಜಿಲ್ಲೆ ಆಬೇಕು ಎಂದು ಕಳೆದ ಹತ್ತಾರು ವರ್ಷದಿಂದ ನಡೆದುಕೊಂಡ ಬಂದ ಹೋರಾಟದ ಫಲವಾಗಿ ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಎರಡು ಜಿಲ್ಲೆಯಾಗಿ ಇಬ್ಭಾಗವಾಯಿತು. ಅಖಂಡ ಉತ್ತರ ಕನ್ನಡ ಜಿಲ್ಲೆಯನ್ನ ಒಡೆದು ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವ ಕೂಗು ಎತ್ತಿದವರು ಶಿರಸಿಯ ಜನರೇ ಹೊರತು ಕಾರವಾರ ಅಥವಾ ಕರಾವಳಿ ಜನ ಅಲ್ಲ, ಉತ್ತರ ಕನ್ನಡ ಜಿಲ್ಲೆ ಶಿರಸಿ ಜಿಲ್ಲಾ ಕೇಂದ್ರ ಕಾರವಾರದಿಂದ 120 ಕಿ ಮೀ ದೂರ ಇದೆ. ಇಲ್ಲಿನ ಜನ ಕಚೇರಿ ಕೆಲಸಕ್ಕೆಂದು ಜಿಲ್ಲಾ ಕೇಂದ್ರಕ್ಕೆ ಬರುವುದು ಕಷ್ಟದ ಕೆಲಸ ಒಂದು ದಿನವೇ ಹಾಳಾಗಿ ಬಿಡುತ್ತೆ ಹೀಗೆ ಹತ್ತು ಹಲವು ಸಮಸ್ಯೆ ಮುಂದಿಟ್ಟಿದ್ದಾರೆ. ಜತೆಗೆ ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಆಗುವುದು ಉತ್ತಮ ಅಂತಿದ್ದಾರೆ.

ಇದನ್ನೂ ಓದಿ : ಕೊರೋನಾ ಸಂಕಷ್ಟ : ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿರುವ ಪೋಷಕರು

ಶಿರಸಿ ಪ್ರತ್ಯೇಕ ಮತ್ತು ಕಾರವಾರ ಪ್ರತ್ಯೇಕ ಜಿಲ್ಲೆ ಆದರೆ ತಾಲೂಕುಗಳ ಸಂಖ್ಯೆ ಕಡಿಮೆ ಆಗಿ ಅಭಿವೃದ್ಧಿ ಆಗಬಹುದು ಎನ್ನುತ್ತಿದ್ದಾರೆ. ಆದರೆ, ಇದಕ್ಕೆ ಸಾಕಷ್ಟು ವಿರೋಧ ಕೂಡ ಇದೆ. ಅಷ್ಟು ಸುಲಭದಲ್ಲಿ ಜಿಲ್ಲೆ ಇಬ್ಭಾಗ ಆಗಲು ಸಾಧ್ಯವಿಲ್ಲ ಎನ್ನುವುದು ಈ ಹಿಂದೆ ಕೆಲ ಜನಪ್ರತಿನಿಧಿಗಳ ಹೇಳಿಕೆ ಕೂಡಾ ಸಾಕ್ಷಿಯಾಗಿದೆ. ಇತ್ತೀಚೆಗೆ ತೆರೆಮರೆಗೆ ಸರಿದಿದ್ದ ಶಿರಸಿ ಜಿಲ್ಲೆ ಕೂಗು ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಚುರುಕಾಗಿ ಕಾರ್ಯ ಮಾಡುತ್ತಿದೆ.

ಉತ್ತರ ಕನ್ನಡ ಜಿಲ್ಲೆ ಇಬ್ಭಾಗಿಸಲು ಕರಾವಳಿ ಜನ ವಿರೋಧ ಮಾಡುತ್ತಿದ್ದಾರೆ. ಅಖಂಡ ಉತ್ತರ ಕನ್ನಡ ಜಿಲ್ಲೆ ಹೀಗೆ ಇರಬೇಕು ಎನ್ನುವುದು ಕರಾವಳಿಗರ ಒತ್ತಾಸೆ. ಆದರೆ, ಮಲೆನಾಡಿನ ಬಹುತೇಕ ಜನ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.
Published by:G Hareeshkumar
First published: