ಬ್ಯಾಂಕ್​ನಿಂದ ಹಣ ಡ್ರಾ ಮಾಡುವವರನ್ನು ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಚಾಲಕಿ ಕಳ್ಳಿ ಬಂಧಿಸಿದ ಪೊಲೀಸರು

ಯಾರಿಗೂ ಸಂಶಯ ಬಾರದ ಹಾಗೇ ಇರುತ್ತಿದ್ದಳು. ಹೀಗಾಗಿ ಈ ಚಾಲಾಕಿ ಮಹಿಳೆಯನ್ನು ಬಂಧಿಸುವುದು ಪೊಲೀಸರಿಗೆ ಸುಲಭದ ಕೆಲಸವಾಗಿರಲಿಲ್ಲ. ಕೊನೆಗೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಹಣ ಕಳೆದುಕೊಂಡವರಿಗೆ ಅವರ ಹಣ ವಾಪಸ್ ಮಾಡಿಸಿದ್ದಾರೆ. 

ಚಾಲಾಕಿ ಕಳ್ಳಿ ಬಂಧಿಸಿರುವ ಪೊಲೀಸರು.

ಚಾಲಾಕಿ ಕಳ್ಳಿ ಬಂಧಿಸಿರುವ ಪೊಲೀಸರು.

  • Share this:
ಗದಗ : ಬ್ಯಾಂಕ್​ನಿಂದ ಹಣ ಡ್ರಾ ಮಾಡುವವರನ್ನು ಗುರಿಯಾಗಿಸಿಕೊಂಡು ಒಂಟಿಯಾಗಿ ಹೋಗಿ ಕಳ್ಳತನ ಮಾಡುತ್ತಿದ್ದ ಚಾಲಕಿ ಕಳ್ಳಿ ಗದಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೌದು ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜನರ ನಿದ್ದೆ ಹಾಳು ಮಾಡಿದ್ದ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಾರಾಯಣಪುರ ಗ್ರಾಮದ ಹೂವಮ್ಮ ಅಲಿಯಾಸ್ ಹೂವಕ್ಕ ಕೊರಚರ್ ಎನ್ನುವ ಚಾಲಾಕಿ‌ ಮಹಿಳೆ ಸದ್ಯ ಅರೆಸ್ಟ್ ಆಗಿದ್ದಾಳೆ.

ಬ್ಯಾಂಕ್ ಹಾಗೂ ಎಟಿಎಂಗಳಿಗೆ ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡು ಒಂಟಿಯಾಗಿ ಸ್ಕೆಚ್ ಹಾಕುತ್ತಿದ್ದಳು. ಬ್ಯಾಂಕ್ ಹಾಗೂ ಸುತ್ತಮುತ್ತ ಯಾರಿಗೂ ಅನುಮಾನ ಬಾರದ ಹಾಗೇ ಓಡಾಡಿಕೊಂಡು ಎಲ್ಲರ ವ್ಯವಹಾರದ ಮೇಲೆ ಕಣ್ಣು ಇಡುತ್ತಿದ್ದಳು. ಯಾರು ಹೆಚ್ಚು ಹಣ ಡ್ರಾ ಮಾಡ್ತಾರೆ ಅವರನ್ನು ಹಿಂಬಾಲಿಸಿ ಅವರು ಡ್ರಾ ಮಾಡಿದ ಹಣವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗ್ತಾಯಿದ್ದಳು. ಕಳ್ಳತನದ ಜೊತೆ ಜೊತೆಗೆ ಬಟ್ಟೆ ವ್ಯಾಪಾರ ಮಾಡುವ ಹಾಗೇ ನಟಿಸಿ ಯಾರಿಗೂ ಸಂಶಯ ಬಾರದ ಹಾಗೇ ಮತ್ತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡ್ತಾಯಿದ್ದಳು.

ಗಜೇಂದ್ರಗಡ ಪಟ್ಟಣದಲ್ಲಿ ಹೀಗೆ ಬ್ಯಾಂಕ್ ನಿಂದ ಹಣ ಡ್ರಾ ಮಾಡಿದ ಮೇಲೆ‌ ಕಳ್ಳತನ ಕುರಿತು ಎರಡು ಪ್ರತ್ಯೇಕ  ದೂರು ಗಜೇಂದ್ರಗಡ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದವು. ಕಾರ್ಯಾಚರಣೆ ನಡೆಸಿ ಚಾಲಕಿ ಕಳ್ಳಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಯತೀಶ ಎನ್ ಅವರು ತಿಳಿಸಿದ್ದಾರೆ.

ಹೂವಮ್ಮ ಅಲಿಯಾಸ್ ಹೂವಕ್ಕ ಕೊರಚರ್


2020 ಮಾರ್ಚ್ ತಿಂಗಳಲ್ಲಿ ಸಿದ್ದಲಿಂಗಪ್ಪ‌ ಚಿಕ್ಕೊಪ್ಪ ಎನ್ನುವವರು ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವಾಗ ಬ್ಲೇಡ್ ಮೂಲಕ ಬ್ಯಾಗ್ ಕತ್ತರಿಸಿ ಅದರಲ್ಲಿದ್ದ 55 ಸಾವಿರ ರೂಪಾಯಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು. ನಂತರ ಅಕ್ಟೋಬರ್ ತಿಂಗಳಲ್ಲಿ ಆನಂದ ಎನ್ನುವವರು ಬ್ಯಾಂಕ್ ನಿಂದ 2 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇಟ್ಟುಕೊಂಡು ನಿಂತಾಗ, ಬೇರೆಡೆ ಗಮನ ಸೆಳೆದು 2  ಲಕ್ಷ ರೂಪಾಯಿ ಸಮೇತ ಎಸ್ಕೇಪ್ ಆಗಿದ್ದಳು. ದೊಡ್ಡ ಮೊತ್ತದ ಗಿರಾಕಿಗಳು ಇದ್ದರೆ ಮಾತ್ರ ಕಳ್ಳತನ ಮಾಡುತ್ತಿದ್ದ ಈ‌‌‌ ಕಳ್ಳಿ ಯಾರಿಗೂ ಸಂಶಯ ಬಾರದ ಹಾಗೇ ಇರುತ್ತಿದ್ದಳು. ಹೀಗಾಗಿ ಈ ಚಾಲಾಕಿ ಮಹಿಳೆಯನ್ನು ಬಂಧಿಸುವುದು ಪೊಲೀಸರಿಗೆ ಸುಲಭದ ಕೆಲಸವಾಗಿರಲಿಲ್ಲ. ಕೊನೆಗೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಹಣ ಕಳೆದುಕೊಂಡವರಿಗೆ ಅವರ ಹಣ ವಾಪಸ್ ಮಾಡಿಸಿದ್ದಾರೆ.

ಇದನ್ನು ಓದಿ: ಆ ಒಂದು ಶಕ್ತಿ ಯಡಿಯೂರಪ್ಪರನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ, ಸಮಯ ಬಂದಾಗ ಬಹಿರಂಗಪಡಿಸುವೆ; ಶಿವಲಿಂಗೇಗೌಡ

ಒಟ್ಟಾರೆ ಕಳೆದ ಹಲವು ತಿಂಗಳಿಂದ ಗಜೇಂದ್ರಗಡ ಪಟ್ಟಣದಲ್ಲಿ ಭೀತಿ ಹುಟ್ಟಿಸಿದ್ದ ಚಾಲಾಕಿ ಕಳ್ಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಯಾರೇ ಹಣಕಾಸಿನ ವ್ಯವಹಾರ ಮಾಡುವ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಇಂತಹ ನಯವಂಚಕರು ನಿಮ್ಮ ಹಣಕ್ಕೆ ಕತ್ತರಿ ಹಾಕುತ್ತಾರೆ ಎಚ್ಚರ.
Published by:HR Ramesh
First published: