ಮಳವಳ್ಳಿಯನ್ನು ಮಲೆನಾಡು ಮಾಡಿದ ಹಸಿರು ಸೇನಾನಿ, ಇವ್ರ ಪರಿಸರ ಪ್ರೇಮಕ್ಕೆ ಸಾಲುಮರದ ನಾಗರಾಜ್ ಎಂದು ಬಿರುದು

ಇಲ್ಲೊಬ್ಬ ವ್ಯಕ್ತಿ ಪ್ರಕೃತಿಯೇ ತನ್ನ ಉಸಿರು, ಮರ-ಗಿಡಗಳು ತನ್ನ ಸರ್ವಸ್ವ ಎಂಬಂತೆ ಇದುವರೆಗೂ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಮರಗಳನ್ನ ಬೆಳೆಸಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಅವರನ್ನ ಸಾಲುಮರದ ನಾಗರಾಜ್ ಎಂದು ಜನರು ಬಿರುದನ್ನು ಸಹ ಕೊಟ್ಟಿದ್ದಾರೆ. 

ಸಾಲುಮರದ ನಾಗರಾಜ್

ಸಾಲುಮರದ ನಾಗರಾಜ್

 • Share this:
  ಮಂಡ್ಯ: ಆಧುನಿಕತೆ ಬೆಳೆದಂಗೆಲ್ಲ ಪ್ರಕೃತಿ ತನ್ನ ಸೌಂದರ್ಯದ ಜೊತೆಗೆ ಶಕ್ತಿಯನ್ನ ಸಹ ಕಳೆದುಕೊಳ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದಿನ ನಿತ್ಯ ಲಕ್ಷಾಂತರ ಮರಗಳ ಮಾರಣ ಹೋಮ ಮಾಡ್ತಿದ್ದಾನೆ. ಆದ್ರೆ ಇಂತವರ ನಡುವೆ ಇಲ್ಲೊಬ್ಬ ವ್ಯಕ್ತಿ ಪ್ರಕೃತಿಯೇ ತನ್ನ ಉಸಿರು, ಮರ-ಗಿಡಗಳು ತನ್ನ ಸರ್ವಸ್ವ ಎಂಬಂತೆ ಇದುವರೆಗೂ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಮರಗಳನ್ನ ಬೆಳೆಸಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಅವರನ್ನ ಸಾಲುಮರದ ನಾಗರಾಜ್ ಎಂದು ಜನರು ಬಿರುದನ್ನು ಸಹ ಕೊಟ್ಟಿದ್ದಾರೆ. ಹೌದು..., ನಾವೀಗ ಹೇಳ್ತಿರೋದು ಮಂಡ್ಯ ಜಿಲ್ಲೆಯ ಮಳವಳ್ಳಿಯ ಸಾಲುಮರದ ನಾಗರಾಜು ಅವರ ಬಗ್ಗೆ. ಹೌದು..., ನಾಗರಾಜು ಅವರು ಸಾಲುಮರದ ನಾಗರಾಜ್ ಆಗಲು ಅವರ ಪರಿಶ್ರಮ ಅಪಾರ, ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಅದ್ವಿತೀಯ.

  ಸಾಲುಮರದ ನಾಗರಾಜು 1979 ರಲ್ಲಿ ಮಳವಳ್ಳಿ ಪಟ್ಟಣದ ಶಾಂತಿ ನಗರದಲ್ಲಿ ಜನಿಸಿದರು. ಬರಿ ಹತ್ತು ಗುಂಟೆ ಜಮೀನು ಹೊಂದಿದ್ದ ಇವರ ತಂದೆ ಅಷ್ಟೇನು ಸ್ಥಿತಿವಂತರಲ್ಲ. ಹಿಗಾಗಿ ಬಡತನದಲ್ಲೆ ಬೆಳದ ನಾಗರಾಜ್ ತಮ್ಮ ಪರಿಸರ ಪ್ರೇಮದಿಂದ ಈಗ ಸಾಲುಮರದ ನಾಗರಾಜ್ ಆಗಿ ಬದಲಾಗಿದ್ದಾರೆ..ಮಳವಳ್ಳಿ ತಾಲ್ಲೂಕಿನಲ್ಲಿ ಬರೋಬ್ಬರಿ 15  ಸಾವಿರ ಮರ ಬೆಳೆಸಿದ ನಾಗರಾಜ್.....

  ಬಡತನದಲ್ಲಿ ಬೆಳದ ನಾಗರಾಜ್ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡ್ತಿದ್ರು. ಈ ಸಂದರ್ಭ ಪರಿಸರದ ಬಗ್ಗೆ ಅವರಿಗೆ ಅರಿವು ಹಾಗೂ ಮರ ಗಿಡಗಳ ಬಗ್ಗೆ ಅಪಾರ ಪ್ರೇಮ ಮೈಗೂಡಿಸಿಕೊಂಡ್ರು. ಇದಾದ ಬಳಿಕ ಗುತ್ತಿಗೆ ಕೆಲಸ ಹೋದ್ರು ಕೂಡ ಇವರ ಮರ ಗಿಡಗಳ ಮೇಲಿನ ಪ್ರೀತಿ ಹೋಗಲಿಲ್ಲ. ಹಿಗಾಗಿ ಅಂದಿನಿಂದ ಇಂದಿನವರೆಗೂ ಮಳವಳ್ಳಿ ಪಟ್ಟದಲ್ಲಿ ನಾಗರಾಜ್ ಗಿಡಗಳನ್ನ ಬೆಳೆಸುತ್ತಾ ಬಂದಿದ್ದಾರೆ.

  ಇದನ್ನೂ ಓದಿ: Elephant Day 2021: ಭಾರತದ ಎಲ್ಲಾ ಆನೆಗಳಿಗೆ ಅರ್ಥವಾಗೋದು ಒಂದೇ ಭಾಷೆ, ಅದು ಉರ್ದು ಮಿಶ್ರಿತ ಬೆಂಗಾಳಿ!

  ಖಾಲಿ ಜಾಗ ಕಂಡ್ರೆ ಸಾಕು ತಟ್ಟ ಅಂತ ಅಲ್ಲೊಂದು ಗಿಡ ನೆಡ್ತಾರೆ ನಾಗರಾಜ್...ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳು, ಪಾರ್ಕ್‌ಗಳು, ಸರ್ಕಾರಿ ಕಚೇರಿಗಳು ಹೀಗೆ ಹತ್ತು ಹಲವು ಜಾಗಗಳಲ್ಲಿ ನಾಗರಾಜ್ ಗಿಡ ನೆಟ್ಟಿದ್ದಾರೆ. ಅದೆಷ್ಟೋ ಗಿಡಗಳನ್ನ ವಿದ್ಯಾರ್ಥಿಗಳು, ಪರಿಸರ ಆಸಕ್ತರಿಗೆ ಕೊಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಪಟ್ಟಣದಲ್ಲಿ ಅವರು ನೆಟ್ಟ ಗಿಡಗಳು ಈಗ ಬೃಹದಾಕಾರದ ಮರಗಳಾಗಿ ಬಂದಂತ ಜನ್ರಿಗೆ ನೆರಳಾಗಿವೆ. ಬರಡಾಗಿದ್ದ ಸರ್ಕಾರಿ ಜಾಗಗಳು ಇಂದು ಮರ ಗಿಡಗಳಿಂದ ಕಂಗೊಳಿಸುತ್ತಿವೆ. ಅದರಲ್ಲೂ ಪಟ್ಟಣದ ಸ್ಟೇಡಿಯಂ ರಸ್ತೆಯಲ್ಲಿ ಇವರು ನೆಟ್ಟ ಸಾಲು ಮರಗಳು ಇವರಿಗೆ ಸಾಲುಮರದ ನಾಗರಾಜ್ ಎಂಬ ಬಿರುದ್ದನ್ನ ತಂದು ಕೊಡೊದರ ಜೊತೆಗೆ ದಿನ ನಿತ್ಯಾ ಸಾವಿರಾರು ಜನಕ್ಕೆ‌ ತಂಪನ್ನ ನೀಡ್ತಿವೆ.

  ಇಂದಿಗೂ ನಾಗರಾಜ್ ಬಳಿ ಒಂದು ಸೈಕಲ್‌, ಆ ಸೈಕಲ್ಲಿನಲ್ಲೆ ಮರ ಗೀಡಕ್ಕೆ ನೀರು....ನಾಗರಾಜ್ ಬಡತನದಲ್ಲಿ ಬೆಳೆದಿದ್ದರು ಯಾವತ್ತು ಅವರು ಅವರ ಸ್ವಾಭಿಮಾನ ಮರೆತಿಲ್ಲಾ. ಅವರು ಇಷ್ಟು ದಿನ ಪರಿಸರಕ್ಕಾಗಿ ಏನೆ ಮಾಡಿದ್ದರು ಅದು ಅವರ ಮರ ಗೀಡಗಳ ಮೇಲಿಮ ಪ್ರೇಮದಿಂದ. ಇವರ ಕಾರ್ಯವನ್ನ ಮೆಚ್ಚಿ ಹಲವರು ಇವರಿಗೆ ಹಣ ಸಾಹಯ ಮಾಡಿದ್ರು. ನಾಗರಾಜ್ ಆ ಹಣವನ್ನ ಮುಟ್ಟದೆ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಇಂದಿಗೂ ಸೈಕಲ್ ನಲ್ಲೆ ದಿನ ನಿತ್ಯ ಗಿಡಗಳನ್ನ ಸಾಗಿಸುತ್ತಾ ಖಾಲಿ ಜಾಗ ಕಂಡ ತಕ್ಷಣ ಅಲ್ಲೊಂದು ಗಿಡ ನೆಟ್ಟು ಸಂತೋಷ ಪಡ್ತಾರೆ.

  ಪರಿಸರ ಪ್ರೇಮಕ್ಕೆ ಸಂದ ಹತ್ತು ಹಲವು ಪ್ರಶಸ್ತಿಗಳು.....ಇವರ ಪರಿಸರ ಪ್ರೇಮ. ಮರ ಗಿಡಗಳ ಮೇಲಿನ ಕಾಳಜಿ ಕಂಡು ಹಲವು ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನ ಕೊಟ್ಟು ಗೌರವಿಸಿವೆ. ಮಳವಳ್ಳಿ ಯುವಕ ಮಿತ್ರ ಮಂಡಳಿ ಇವರಿಗೆ ಸಾಲುಮರದ ನಾಗರಾಜ್ ಎಂಬ ಬಿರುದ್ದನ್ನ ಸಹ ನೀಡಿ ಗೌರವಿಸಿವೆ. ಅಲ್ಲದೆ ತಾಲೂಕು ಕನ್ನಡ ರಾಜ್ಯೋತ್ಸವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನ ಕೂಡ ನಾಗರಾಜ್ ಅವರಿಗೆ ನೀಡಲಾಗಿದೆ.‌ ಒಟ್ಟಾರೆ, ನಾಗರಾಜ್ ಅವರ  ಪರಿಸರದ ಮೇಲಿನ ಕಾಳಜಿ, ಅವರ ನಿಸ್ವಾರ್ಥ ಸೇವೆ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  (ಸುನೀಲ್ ಗೌಡ, ಮಂಡ್ಯ)
  Published by:Soumya KN
  First published: