Corona Virus; ಹಾಸನದಲ್ಲಿ ಕೊರೋನಾ ಗೆದ್ದು ಬಂದ ಪೊಲೀಸರಿಗೆ ಭವ್ಯ ಸ್ವಾಗತ

ಹಾಸನ ಜಿಲ್ಲೆಯಲ್ಲಿ ಒಟ್ಟು ಈವರೆಗೆ 185 ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ, ಈವರೆಗೆ ಆಸ್ಪತ್ರೆಯಿಂದ ಪಿಎಸ್ಐ, ಪೇದೆಗಳು ಸೇರಿ 33 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

news18-kannada
Updated:June 3, 2020, 9:38 PM IST
Corona Virus; ಹಾಸನದಲ್ಲಿ ಕೊರೋನಾ ಗೆದ್ದು ಬಂದ ಪೊಲೀಸರಿಗೆ ಭವ್ಯ ಸ್ವಾಗತ
ಹಾಸನದಲ್ಲಿ ಕೊರೋನಾದಿಂದ ಗುಣಮುಖರಾದ ಪೊಲೀಸರು.
  • Share this:
ಹಾಸನ ; ಹಾಸನದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪಿಎಸ್‌ಐ ಒಬ್ಬರಿಗೆ ಕೊರೋನಾ ಸೋಂಕು ತಗುಲಿತ್ತು. ಕರೋನಾ ವಾರಿಯರ್ಸ್ ಗಳಿಗೇ ಸೋಂಕು ತಗುಲಿದ್ದು ಬಾರೀ ಆಘಾತ ಉಂಟು ಮಾಡಿತ್ತು. ಪಿಎಸ್ ಐ ಸೇರಿ ಪೇದೆಗಳಿಗೆ ಕರೋನಾ ಸೋಂಕು ತಗುಲಿದ್ದರಿಂದ ಇಡೀ ಜಿಲ್ಲೆಯ ಜನ ಆಂತಕಕ್ಕೀಡಾಗಿದ್ದರು. ಆದರೆ, ಈಗ ಈ ಪಿಎಸ್‌ಐ ಸೇರಿ ಮೂವರು ಪೇದೆಗಳು ಕರೋನಾ ಗೆದ್ದು ಬಂದಿದ್ದಾರೆ. ಕರೋನಾದಿಂದ ಗುಣಮುಖರಾದ ಪಿಎಸ್ಐ ಮತ್ತು ಪೇದೆಗಳಿಗೆ ಪುಷ್ಪಾರ್ಚನೆ ಮಾಡಿ ವಾದ್ಯ ಗೋಷ್ಠಿಗಳೊಂದಿಗೆ ಇಂದು ಭವ್ಯ ಸ್ವಾಗತ ನೀಡಲಾಯಿತು.

ಹಾಸನದ ಹಿಮ್ಸ್ ಆಸ್ಪತ್ರೆಯ ಮುಂಭಾಗ ಕೊರೋನ ಗೆದ್ದು ಬಂದ ಪೊಲೀಸರಿಗೆ ಹಾರ ಹಾಕಿ, ಹೂ ಬೊಕ್ಕೆ ಕೊಟ್ಟು, ಪುಷ್ಪವೃಷ್ಟಿ  ಮಾಡಿ ಸ್ವಾಗತ ಕೋರಲಾಯ್ತು. ಪೊಲೀಸ್ ಬ್ಯಾಂಡ್ ಮೂಲಕ ಕೊರೋನ ಗೆದ್ದು ಬಂದ ಪೊಲೀಸರಿಗೆ ಗೌರವ ಸಲ್ಲಿಸಲಾಯ್ತು. ಈ ಕುರಿತು ಮಾತನಾಡಿರುವ ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್, "ನಮ್ಮ‌ ಪೊಲೀಸರು ಗುಣಮುಖರಾಗಿರುವುದು ಕರ್ತವ್ಯ ನಿರ್ವಹಿಸಲು ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ಪೊಲೀಸರ ಕೆಲಸ ಮತ್ತು ಶ್ರಮದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ, ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಋಣಿಯಾಗಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು ಈವರೆಗೆ 185 ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ, ಈವರೆಗೆ ಆಸ್ಪತ್ರೆಯಿಂದ ಪಿಎಸ್ಐ, ಪೇದೆಗಳು ಸೇರಿ 33 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಕರೋನಾ ವಾರಿಯರ್ಸ್ ಗಳಾದ ಪೊಲೀಸರು ಗುಣಮುಖರಾಗಿರುವುದಕ್ಕೆ ಜಿಲ್ಲೆಯಾದ್ಯಂತ ಬಾರೀ ಸಂತಸ ವ್ಯಕ್ತವಾಗಿದೆ.

ಇದನ್ನೂ ಓದಿ : ಲಾಕ್‌ಡೌ‌ನ್‌ನಿಂದ ಸಾರಿಗೆ ನಿಗಮಗಳಿಗೆ 1200 ಕೋಟಿಗೂ ಹೆಚ್ಚು ನಷ್ಟ; ನೌಕರರ ಸಂಬಳಕ್ಕೂ ಹಣವಿಲ್ಲ!
First published: June 3, 2020, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading