HOME » NEWS » District » A GOVERNMENT REIMBURSE EVERYONE WHO PAID FOR THE COVID 19 TREATMENT SAYS U T KHADER HK

ಕೋವಿಡ್ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ಸರ್ಕಾರ ಮರು ಪಾವತಿಸಲಿ : ಮಾಜಿ ಸಚಿವ ಯು ಟಿ ಖಾದರ್

ಕೊರೋನಾ ಪಾಸಿಟಿವ್ ಆದವರಿಗೆ ಎಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ, ಅವರೆಲ್ಲರ ಹಣವನ್ನು ಮರು ಪಾವತಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕು

news18-kannada
Updated:August 27, 2020, 3:59 PM IST
ಕೋವಿಡ್ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ಸರ್ಕಾರ ಮರು ಪಾವತಿಸಲಿ : ಮಾಜಿ ಸಚಿವ ಯು ಟಿ ಖಾದರ್
ಮಾಜಿ ಸಚಿವ ಯು ಟಿ ಖಾದರ್
  • Share this:
ಮಂಗಳೂರು(ಆಗಸ್ಟ್​. 27): ಕೊರೋನಾ ಪಾಸಿಟಿವ್ ಆದವರಿಗೆ ಎಲ್ಲೂ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿಲ್ಲ, ಹೀಗಾಗಿ ಕೋವಿಡ್ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ರಾಜ್ಯ ಸರ್ಕಾರ ಮರು ಪಾವತಿಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ‌ ಮಾತನಾಡಿದ ಅವರು ಕೊರೋನಾ ಪಾಸಿಟಿವ್ ಆದವರಿಗೆ ಎಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ, ಅವರೆಲ್ಲರ ಹಣವನ್ನು ಮರು ಪಾವತಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕು. ಆಗ ಆಸ್ಪತ್ರೆಗಳು ಎಷ್ಟು ಬಿಲ್‌ ಮಾಡಿದೆ ಎನ್ನುವುದು ಸರ್ಕಾರಕ್ಕೆ ಗೊತ್ತಾಗುತ್ತದೆ. ಸರ್ಕಾರ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತವಾಗಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೋನಾ ಪಾಸಿಟಿವ್ ಹಾಗೂ ಕೊರೋನಾದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಎಲ್ಲೆಡೆ ಲಾಕ್ ಡೌನ್ ಸಡಿಲಿಸಿದ್ದಾರೆ. ಇತ್ತೀಚೆಗೆ ಕೊರೋನಾ ಟೆಸ್ಟಿಂಗ್ ಕೂಡಾ ಕಡಿಮೆ ಮಾಡಿದ್ದಾರೆ. ಬೀದಿ ವ್ಯಾಪಾರಿಗಳು, ಇತರೆ ಎಲ್ಲಾ ರೀತಿಯ ವ್ಯಾಪಾರಿಗಳು, ಲಾರಿ, ಬಸ್ ಚಾಲಕರಿಗೆ ಕೊರೋನಾ ರಿಪೋರ್ಟ್ ತರಲು ಆದೇಶಿಸಿ, ಆಗ ಎಲ್ಲರೂ ತಪಾಸಣೆ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ನಟ ನಟಿಯರು, ಮ್ಯೂಸಿಕ್ ಡೈರೆಕ್ಟರ್ಸ್ ಇವರ ಗ್ರಾಹಕರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾದಿಂದ ಸಾವುಗೀಡಾದವರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 10 ಕ್ಕಿಂತ ಹೆಚ್ಚು ಸಾವು ಪ್ರಕರಣಗಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,092 ಪಾಸಿಟಿವ್ ಕೇಸ್ ಆಗಿದ್ದು, ಅದರಲ್ಲಿ ಒಟ್ಟು 2,339 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ 8423 ಮಂದಿ ಡಿಸ್ವಾರ್ಜ್ ಆಗಿದ್ದಾರೆ. ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಾಗಿದ್ದು, ಕೇರಳ-ದಕ್ಷಿಣ ಕನ್ನಡ ಗಡಿಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.


Published by: G Hareeshkumar
First published: August 27, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories