HOME » NEWS » District » A GANDHIAN MUTTANNA IN GADAG CREATES AWARENESS ON CORONA VISITS EVERY VILLAGE ON BICYCLE SKG SKTV

Coronavirus: ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರೋ ಗಾಂಧಿವಾದಿ ಮುತ್ತಣ್ಣ, ಹಳ್ಳಿಹಳ್ಳಿಗೆ ತೆರಳಿ ಎಚ್ಚರಿಕೆ

ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಗಾಂಧಿವಾದಿ ಮುತ್ತಣ್ಣ  ಚೆನ್ನಬಸಪ್ಪ ತಿಲಾ೯ಪೂರ .ಇವರು ಜಿಲ್ಲೆಯಲ್ಲಿ ಮುತ್ತಣ್ಣ ಗಾಂಧಿವಾದಿ ಎಂದು ಪ್ರಸಿದ್ದಿಯನ್ನು ಪಡೆದಿದ್ದಾನೆ. ಇವರು ಸ್ವಾತಂತ್ರೋತ್ಸವ ದಿನ, ಗಣರಾಜ್ಯೋತ್ಸವ ದಿನ ಹಾಗೂ ಕನ್ನಡ ರಾಜ್ಯೋತ್ಸವದಂದು ವಿಶಿಷ್ಟ ರೀತಿಯಲ್ಲಿ ದೇಶ ಭಕ್ತಿ ಹಾಗೂ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವುದು ಹವ್ಯಾಸ ಬೆಳಸಿಕೊಂಡಿರುವ ಮುತ್ತಣ್ಣ ಅಪಾರ ದೇಶಭಕ್ತಿ ಹೊಂದಿದ್ದಾನೆ.

news18-kannada
Updated:April 27, 2021, 7:24 AM IST
Coronavirus: ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರೋ ಗಾಂಧಿವಾದಿ ಮುತ್ತಣ್ಣ, ಹಳ್ಳಿಹಳ್ಳಿಗೆ ತೆರಳಿ ಎಚ್ಚರಿಕೆ
ಗಾಂಧಿವಾದಿ ಮುತ್ತಣ್ಣ
  • Share this:
ಗದಗ: ದೇಶಾದ್ಯಂತ ಕೊರೋನಾ ವೈರಸ್ ತನ್ನ ಆರ್ಭಟ ಮುಂದುವರಿಸಿದೆ. ಜನ್ರು ಮಾತ್ರ ಕೊರೋನಾ ವೈರಸ್ ಬಗ್ಗೆ ಜಾಗೃತರಾಗಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿ ತನ್ನ ತೋರಿಸುತ್ತಿದ್ದಾರೆ. ಹೀಗಾಗಿ ಜನ್ರಿಗೆ ಕೊರೋನಾ ಬಗ್ಗೆ ಜಾಗೃತರಾಗಿ ಎಂದು ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ  ಗಾಂಧಿವಾದಿ ಮುತ್ತಣ್ಣ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ.

ಕೊರೋನಾ ಜಾಗ್ರತಿ ಮೂಡಿಸುತ್ತಿರುವ ವ್ಯಕ್ತಿ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಗಾಂಧಿವಾದಿ ಮುತ್ತಣ್ಣ  ಚೆನ್ನಬಸಪ್ಪ ತಿಲಾ೯ಪೂರ .ಇವರು ಜಿಲ್ಲೆಯಲ್ಲಿ ಮುತ್ತಣ್ಣ ಗಾಂಧಿವಾದಿ ಎಂದು ಪ್ರಸಿದ್ದಿಯನ್ನು ಪಡೆದಿದ್ದಾನೆ. ಇವರು ಸ್ವಾತಂತ್ರೋತ್ಸವ ದಿನ, ಗಣರಾಜ್ಯೋತ್ಸವ ದಿನ ಹಾಗೂ ಕನ್ನಡ ರಾಜ್ಯೋತ್ಸವದಂದು ವಿಶಿಷ್ಟ ರೀತಿಯಲ್ಲಿ ದೇಶ ಭಕ್ತಿ ಹಾಗೂ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವುದು ಹವ್ಯಾಸ ಬೆಳಸಿಕೊಂಡಿರುವ ಮುತ್ತಣ್ಣ ಅಪಾರ ದೇಶಭಕ್ತಿ ಹೊಂದಿದ್ದಾನೆ.

ಹೀಗಾಗಿ ದೇಶಾಭಿಮಾನ ದಿಂದ ಗಾಂಧಿವೇಷ ಧರಿಸಿ ಗಾಂಧೀಜಿಯವರ ಆದರ್ಶ ತತ್ವಗಳ ಜಾಗೃತಿ ಮೂಡಿಸಲು ಸ್ವಗ್ರಾಮ ಕರಿಕಟ್ಟಿಯಿಂದ ದೆಹಲಿಯ ಗಾಂಧಿ ಗಾಟ್ ವರಿಗೆ ಸುಮಾರು 1800 ಕಿಮೀ ಪಾದಯಾತ್ರೆ ಮಾಡಿದ್ದಾನೆ. ಬರೋಬ್ಬರಿ ಒಂದು ತಿಂಗಳ ವರೆಗೆ ಪಾದಯಾತ್ರೆ ನಡೆಸುವ ಮೂಲಕ ದೆಹಲಿ ತಲುಪಿ ಜಾಗೃತಿ ಮೂಡಿಸಿ ಮೆಚ್ಚುಗೆಗೆ ಪಾತ್ರರಾದ ಮುತ್ತಣ್ಣ ಈವಾಗ ಮತ್ತೆ ಕರೋನಾ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾನೆ.

ಕಳೆದ ಐದು ದಿನಗಳಿಂದ ಸೈಕಲ್ ಏರಿ ಗದಗ ಜಿಲ್ಲೆ ರೋಣ ತಾಲೂಕು ಹಾಗೂ ನರಗುಂದ ತಾಲೂಕಿನ ಹತ್ತಾರು ಹಳ್ಳಿಗಳಿಗೆ ತೆರಳಿ ಕೊರೋನಾದಿಂದ ಹೇಗೆ ಜಾಗೃತರಾಗಿರ ಬೇಕು ಎಂಬುವುದರ ಬಗ್ಗೆ  ಡಂಗುರ ಸಾರಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾನೆ.

ಇದನ್ನೂ ಓದಿ: https://kannada.news18.com/news/coronavirus-latest-news/pre-booking-for-cremation-and-hearse-vans-in-bengaluru-to-avoid-queue-near-crematorium-sktv-556361.html

ಸದ್ಯ ದೇಶದಲ್ಲಿ ಕೊರೋನಾ ವೈರಸ್ ರುದ್ರ ತಾಂಡವ ಆಡುತ್ತಿರುವ ಸಂದರ್ಭದಲ್ಲಿ ಮುತ್ತಣ್ಣ ರವರು ತಮ್ಮ ಸೈಕಲ್‌ ಜಾಥಾ ಮೂಲಕ ವೈರಸ್ ತಡೆಗಟ್ಟಲು ಯಾವೆಲ್ಲ ಮುಂಜಾಗ್ರತೆಯನ್ನು ವಹಿಸಬೇಕು ಎನ್ನುವುದನ್ನು ಸಾವ೯ಜನಿಕರಿಗೆ ತಿಳುವಳಿಕೆ ನೀಡುವ ಕಾಯ೯ದಲ್ಲಿ ತೊಡಗಿಕೊಂಡಿದ್ದಾರೆ. ಈ ಜಾಗ್ರತಿ ಕಾಯ೯ದಲ್ಲಿ ಇವರು ಈಗಾಗಲೇ ದಿನಕ್ಕೆ 80 ಕಿ.ಮೀ ಯನ್ನು ಕ್ರಮಿಸಿದ ಮುತ್ತಣ್ಣ ರೋಣ ಪಟ್ಟಣಕ್ಕೆ ಆಗಮಿಸುವ ಜೊತೆಗೆ ಸಾವ೯ಜನಿಕರಿಗೆ ಕೊರೋನಾ ವೈರಸ್ ತಡೆಗಟ್ಟುವ ಕುರಿತು ಜಾಗ್ರತಿಯನ್ನು ಮೂಡಿಸಿದರು. ಸಾವ೯ಜನಿಕ ಸ್ಥಳಗಳಲ್ಲಿ ಹಾಗೂ ಸರಕಾರಿ ಕಚೇರಿಗಳ ಆವರಣದಲ್ಲಿ ಹಲಗೆ ಬಡಿದು ಡಂಗುರ ಸಾರಿದ ಮುತ್ತಣ್ಣ ಕರ ಪತ್ರಗಳನ್ನು ಹಂಚುವ ಮೂಲಕ ನಾಗರಿಕ ಸಮುದಾಯದಲ್ಲಿ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸುತ್ತಿರೋದು ಸಾವ೯ಜನಿಕರ ಮೆಚ್ಚುಗೆ ವ್ಯಕ್ತಪಡಿಸಿದರು.
Youtube Video
ಆದ್ರೆ ಮುತ್ತಣ್ಣ ಯಾವುದೇ ಸರ್ಕಾರಿ ಸೇವೆ ಕೆಲಸ ಮಾಡುತ್ತಿಲ್ಲ, ಯಾವುದೇ ನೌಕರಿ ಯಿಂದ ಲಕ್ಷಾಂತರ ರೂಪಾಯಿ ಹಣ ಪಡೆಯುವ ಕೆಲಸಗಾರನನ್ನು ಅಲ್ಲಾ. ಒಬ್ಬ ಗಾಂಧಿ ತತ್ವಗಳನ್ನು ಜೀವನದಲ್ಲಿ ರೂಢಿಸಿಕೊಂಡು ಜೀವನ ನಡೆಸುವದರ ಜೊತೆಗೆ ಸಮಾಜ ಮುಖಿ ಕೆಲಸ ಸಹ ಮಾಡುತ್ತಿದ್ದಾನೆ.ಇನ್ನು ಮುತ್ತಣ್ಣ ಮಾಡುತ್ತಿರುವ ಸಮಾಜ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Published by: Soumya KN
First published: April 27, 2021, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories