COVID Vaccine; ಕೋವಿಡ್ ಲಸಿಕೆ ಹಾಕುತ್ತಾರೆಂದು ಜಮೀನಿಂದ ಓಡಿ ಹೋದ ರೈತ ಕಾರ್ಮಿಕ ಮಹಿಳೆ, ಮತ್ತೋರ್ವ ಮಹಿಳೆಯಿಂದ ಹಲ್ಲೆಗೆ ಯತ್ನ!

ಲಸಿಕೆ ಕಂಡ ಕೂಡಲೇ ಓಡಿದ ಮಹಿಳೆ ಲಕ್ಷ್ಮಿದೇವಿ ಹಿಂದೆ ಬೆನ್ನತ್ತಿದ್ದಾರೆ. ಆದರೂ ವೈದ್ಯರ ಮಾತು ಕೇಳದೆ ಲಸಿಕೆ ಪಡೆಯದೆ ಮಹಿಳೆಯರು ಹಠ ಸಾಧಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಮೀನಿನಿಂದ ಓಡಿ ಹೋಗುತ್ತಿರುವ ರೈತ ಮಹಿಳೆ.

ಜಮೀನಿನಿಂದ ಓಡಿ ಹೋಗುತ್ತಿರುವ ರೈತ ಮಹಿಳೆ.

  • Share this:
ಚಿತ್ರದುರ್ಗ: ಕೋವಿಡ್ ಸೋಂಕಿನಿಂದ ಜನರ ಜೀವ ರಕ್ಷಣೆಗೆ ಸಂಜೀವಿಯಾಗಿರುವ ಕೋವಿಡ್ ಲಸಿಕೆ (COVID Vaccine) ಕೊಡೋಕೆ ಹೋಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ (Health Department Staff) ಮೇಲೆ ರೈತ ಮಹಿಳೆ ಹಲ್ಲೆಗೆ ಯತ್ನಿಸಿ, ಮತ್ತೋರ್ವ ಮಹಿಳೆ ಲಸಿಕೆ ನೀಡುತ್ತಾರೆ ಎಂದು ತಿಳಿದು ಜಮೀನಿನಿಂದ ಕಾಲ್ಕಿತ್ತು ಹೋಡಿ ಹೋಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕೊರೋನಾ ಸೋಂಕು ಅನ್ನೋ ಹೆಸರು ಕೇಳಿದ್ರೆ ಜನರು ಬೆಚ್ಚಿ ಬೀಳುತ್ತಿದ್ದರು. ದೇಶಕ್ಕೆ ದೇಶವೇ ತಲ್ಲಣಿಸಿ ಹೋಗಿದೆ, ಲಕ್ಷಾಂತರ ಜನರು ಸೋಂಕಿಗೆ ಸಿಲುಕಿ ಬಲಿಯಾಗಿದ್ದಾರೆ. ಸೋಂಕು ತಗುಲಿದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೆಡ್ ಸಿಗದೆ, ಬೆಡ್ ಸಿಕ್ಕರೂ ಆಕ್ಸಿಜನ್, ರೆಮ್ಡಿಸಿವಿರ್​ನಂತಹ ಇಂಜಕ್ಷನ್ ಸಿಗದೆ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲಾ ಸಾವು ನೋವುಗಳನ್ನ ಕಂಡ ಸರ್ಕಾರ ಎಷ್ಟೇ ಖರ್ಚಾದ್ರು ಪರವಾಗಿಲ್ಲ ದೇಶದ ಜನರ ಪ್ರಾಣ ರಕ್ಷಣೆ ಮುಖ್ಯ ಅಂಥ ಜೀವ ರಕ್ಷಕ ಸಂಜೀವಿನಿ ಕೋವಿಡ್ ಲಸಿಕೆಯನ್ನು ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಿದೆ. 

ಸಾವಿರಾರು ವಿಜ್ಞಾನಿಗಳು, ವೈದ್ಯರು ರಾತ್ರಿ ಹಗಲು ನಿದ್ದೆಗೆಟ್ಟು ಕೊನೆಗೂ ಕೋವಿಡ್​ನಿಂದ ಜನರ ಜೀವ ರಕ್ಷಿಸಲು ಲಸಿಕೆ ಕಂಡು ಹಿಡಿದಿದ್ದಾರೆ. ಹಾಗಾಗಿ ದೇಶದ ಜನರ ಪ್ರಾಣ ರಕ್ಷಣೆಯ ಹೊಣೆ ಹೊತ್ತ ಭಾರತ ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ನೀಡೋಕೆ ಮುಂದಾಗಿದೆ. ಲಸಿಕೆ ಹಾಕಿಸಿಕೊಳ್ಳಿ ಜೀವ ರಕ್ಷಣೆ ಮಾಡಿ ಅಂಥ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದೆ‌. ಆದರೆ ಅದ್ಯಾಕೋ ಜನರಲ್ಲಿ ಜಾಗೃತಿ ಮೂಡಿಲ್ಲ. ಇನ್ನೂ ಭಯದಿಂದಲೇ ಲಸಿಕೆ ಪಡೆಯೋಕೆ ಹಿಂದೆ ಸರಿಯುತ್ತಿದ್ದಾರೆ. ಆದ್ದರಿಂದ ಜನರು ಇರುವಲ್ಲಿಗೇ ಹೋಗಿ ಲಸಿಕೆ ನೀಡೋಕೆ ಆರೋಗ್ಯ ಇಲಾಖೆಗೆ ಸರ್ಕಾರ, ಆಯಾ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

ಜಮೀನಿನಿಂದ ಕಾಲ್ಕಿತ್ತ ರೈತ ಮಹಿಳೆ

ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯೋಕೆ ಮುಂದೆ ಬರುತ್ತಿಲ್ಲ. ಲಸಿಕೆ ಹಾಕುತ್ತಾರೆ ಅನ್ನೋ ಕಾರಣಕ್ಕೆ ಸಿಬ್ಬಂದಿಗಳ ಮೇಲೆ ಜಗಳ ಮಾಡಿ ತಪ್ಪಿಸಿಕೊಂಡು ಹೋಡಿ ಹೋರುವ ಘಟನೆಗಳು ನಡೆದಿವೆ. ಅದಕ್ಕೆ ಉದಹಾರಣೆ ಎಂಬಂತೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ  ಉಚ್ಚಂಗಿದುರ್ಗ ಗ್ರಾಮದಲ್ಲಿ ರೈತರು, ಕಾರ್ಮಿಕರು ಇರುವಲ್ಲಿಗೆ ಹೋಗಿ ಲಸಿಕೆ ನೀಡೋಕೆ ವೈದ್ಯರು ಮುಂದಾಗಿದ್ದಾರೆ. ಆದರೆ ಜೀವ ರಕ್ಷಣೆಯ ಲಸಿಕೆ ನೀಡಲು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಪಾಲಕ್ಕ ಎಂಬ ಮಹಿಳೆ ಕೈಯಲ್ಲಿದ್ದ ಕೈ ಗುದ್ದಲಿ ಹಿಡಿದು ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿದ್ದಾರೆ. ಮತ್ತೋರ್ವ ಮಹಿಳೆ ಲಕ್ಷ್ಮಿದೇವಿಗೆ ಲಸಿಕೆ ನೀಡಲು ಮನವೊಲಿಕೆ ಮಾಡುತ್ತಿದ್ದಂತೆ ಜಮೀನಿನಿಂದ ಕಾಲ್ಕಿತ್ತು ಓಡಿ ಹೋಗಿದ್ದಾರೆ‌.

ಇದನ್ನು ಓದಿ: Viral Video: ಹಸುವಿನ ಸಗಣಿ ತಿಂದ್ರೆ ನಾರ್ಮಲ್​ ಡೆಲಿವರಿ ಆಗುತ್ತಾ? ವೈದ್ಯರೊಬ್ಬರ ವಿಡಿಯೋ ಸಖತ್​ ವೈರಲ್​!

ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ

ನಿನ್ನೆ  ಸಮುದಾಯ ಆರೋಗ್ಯ ಕೇಂದ್ರದ ವೈಧ್ಯ ಹುಸೇನ್ ಭಾಷಾ, ಹಾಗು ಅಂಗನವಾಡಿ ಕಾರ್ಯಕರ್ತೆ ವೀರಕ್ಕ, ಸುಜಾತ, ಹಾಗೂ  ಆಶಾ ಕಾರ್ಯಕರ್ತೆ ಗೌರಮ್ಮ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹನುಮಂತಪ್ಪ, ಲಸಿಕೆ ನೀಡಲು ತೆರಳಿದ್ದರು. ಈ ವೇಳೆ ಕೋವಿಡ್ ಲಸಿಕೆ ಪಡೆಯಲು ಕೂಲಿ ಕಾರ್ಮಿಕ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಲಸಿಕೆ ಕಂಡ ಕೂಡಲೇ ಓಡಿದ ಮಹಿಳೆ ಲಕ್ಷ್ಮಿದೇವಿ ಹಿಂದೆ ಬೆನ್ನತ್ತಿದ್ದಾರೆ. ಆದರೂ ವೈದ್ಯರ ಮಾತು ಕೇಳದೆ ಲಸಿಕೆ ಪಡೆಯದೆ ಮಹಿಳೆಯರು ಹಠ ಸಾಧಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮೀಣ ಭಾಗದ ಜನರಿಗೆ ಜಿಲ್ಲಾಡಳಿತ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ ಅನ್ನೊದನ್ನ ತೋರಿಸುತ್ತಿದೆ‌. ಇನ್ನಾದರು ಜಿಲ್ಲಾಡಳಿತ ಎಚ್ಚೆತ್ತು ಸಾರ್ವಜನಿಕರ ಜಾಗೃತಿ ಕಾರ್ಯ ಮಾಡಬೇಕಿದೆ.

ವರದಿ: ವಿನಾಯಕ ತೊಡರನಾಳ್
Published by:HR Ramesh
First published: