ರಾಮನಗರ: ಈ ರೈತ ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಬೋರ್ವೆಲ್ ಪೈಪ್ ಅಳವಡಿಸಲು ಪೈಪ್ ಲೈನ್ ಒಳಗೆ ಹೋಗಿದ್ದ. ಸುಮಾರು 200 ಅಡಿ ಉದ್ದ ಇದ್ದ ಪೈಪ್ ಲೈನ್ ನಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಿಲುಕೊಂಡಿದ್ದ. ವಿಚಾರ ತಿಳಿದು ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸತತ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರೈತನನ್ನ ರಕ್ಷಣೆ ಮಾಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಪೈಪ್ ಲೈನ್ನಲ್ಲಿ ಸಿಲುಕಿದ್ದ ರೈತನನ್ನ ರಕ್ಷಣೆ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ..! ಪವಾಡ ಸದೃಶ್ಯದಲ್ಲಿ ಬದುಕಿ ಬಂದ ರೈತ ಗೋವಿಂದರಾಜು: ಹೌದು, ಪೈಪ್ ಲೈನ್ ಒಳಭಾಗದಲ್ಲಿ ಸಿಲುಕಿದ ರೈತನನ್ನ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ರಾಮನಗರದ ಕೊಂಕಾಣಿದೊಡ್ಡಿ ಗ್ರಾಮದ ಬಳಿಯ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಸುಮಾರು 200 ಅಡಿ ಉದ್ದ ಇರುವ ಪೈಪ್ ಲೈನ್ ಒಳಭಾಗದಲ್ಲಿ ರೈತ ಗೋವಿಂದರಾಜು ಎಂಬುವವರು ಸಿಲುಕಿದ್ದರು. ಸಿಂಗ್ರಿಬೋವಿದೊಡ್ಡಿ ಗ್ರಾಮದ ರೈತ ಗೋವಿಂದರಾಜು ಪೈಪ್ ಲೈನ್ ನಲ್ಲಿ ಸಿಲುಕಿದ ವ್ಯಕ್ತಿ. ಜಮೀನಿಗೆ ನೀರಿನ ಪೈಪ್ ಅಳವಡಿಸಲು ಪೈಪ್ ಲೌನ್ ಒಳಭಾಗಕ್ಕೆ ರಾಜಣ್ಣ ಹೋಗಿದ್ದರು.
ಇದನ್ನೂ ಓದಿ: 2nd PU Repeaters: ಪಿಯು ರಿಪೀಟರ್ಸ್ಗೆ ಗುಡ್ ನ್ಯೂಸ್; ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಿದ ಸರ್ಕಾರ
ಈ ವೇಳೆ ಮಧ್ಯಭಾಗದಲ್ಲಿ ರೈತ ರಾಜಣ್ಣ ಸಿಲುಕಿಕೊಂಡಿದ್ದರು. ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಪೈಪ್ ಲೈನ್ ಆಳವಡಿಸಲಾಗಿತ್ತು. ಸತತ ಎರಡು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ತೊಡಗಿಕೊಂಡು ರೈತ ರಾಜಣ್ಣನನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ರಾಜಣ್ಣ ತನ್ನ ಜಮೀನಿನಲ್ಲಿ ಹೊಸ ಬೋರ್ವೆಲ್ ಕೊರೆಸಿದ್ದರು. ತನ್ನ ಜಮೀನಿನ ಮಧ್ಯ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಜಮೀನಿಗೆ ನೀರು ಹಾಯಿಸಲು ಮುಂದಾಗಿದ್ದರು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಾಣ ಮಾಡಿದ್ದ ಹಳ್ಳದಲ್ಲಿ ನೀರು ಹೋಗಲು ನಿರ್ಮಿಸಿದ್ದ ಪೈಪ್ ಲೈನ್ ಒಳಭಾಗದಲ್ಲಿ ರಾಜಣ್ಣ ಬೋರ್ ವೆಲ್ ಪೈಪ್ ಹಾಕಲು ಮುಂದಾಗಿದ್ದರು. ಆದ್ರೆ, ಮಧ್ಯ ಭಾಗದಲ್ಲಿ ಮಣ್ಣು ಕುಸಿದಿದ್ದ ಹಿನ್ನೆಲೆ ರೈತ ಸಿಲುಕಿಕೊಂಡಿದ್ದ ರಾಜಣ್ಣ. ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಪೈಪ್ ಲೈನ್ ನಲ್ಲೇ ರೈತ ವನವಾಸ ಅನುಭವಿಸಿದ್ದರು. ಒಂದೆಡೆ ಪೈಪ್ ಲೈನ್ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ನೇರವಾಗಿ ಪೈಪ್ ಹಾಕದೇ ಇರುವುದೇ ಸಿಲುಕಿಕೊಳ್ಳಲಾಯ್ತು. ಮತ್ತೊಂದೆಡೆ ನೋಡಿಕೊಳ್ಳದೇ ಒಳ ನುಗ್ಗಿರುವುದು ನಮ್ಮದೂ ಸಹ ತಪ್ಪಾಗಿದೆ ಎಂದು ರಾಜಣ್ಣ ಪುತ್ರ ವೇಣುಗೋಪಾಲ್ ಹೇಳುವ ಮಾತು.
ಒಟ್ಟಾರೆ, ಸಿಲುಕಿದ್ದ ರಾಜಣ್ಣ ವನವಾಸ ಅನುಭವಿಸುತ್ತಿದ್ದರೆ. ಸಾರ್ವಜನಿಕರಿಗೆ ಹಾಗೂ ಕುಟುಂಬಸ್ಥರಿಗೆ ಆತಂಕ ಸೃಷ್ಟಿಯಾಗಿತ್ತು. ಆದರೂ ಎರಡು ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿ ರೈತ ರಾಜಣ್ಣ ಪವಾಡ ಸದೃಶ್ಯದಲ್ಲಿ ಬದುಕಿಬಂದಿದ್ದಾರೆ. ರಕ್ಷಣೆ ಮಾಡಲು ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಶ್ಲಾಘಿಸಲೇಬೇಕು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ