ಬಂಜರು ಭೂಮಿಯಲ್ಲಿ ಆ್ಯಪಲ್ ಬಾರಿ ಹಣ್ಣು ಬೆಳೆದ ರೈತ, ವರ್ಷಕ್ಕೆ ಕನಿಷ್ಠ 10 ಲಕ್ಷ ರೂ ಲಾಭ ಗ್ಯಾರಂಟಿ !

ಬಂಜರು ಭೂಮಿಯಲ್ಲೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಬೆಳೆ ಆಪಲ್ ಬಾರಿ. ಎಲ್ಲರೂ ಅನಿಷ್ಟ ಎನ್ನುತ್ತಿದ್ದ ಗಿಡಗಳನ್ನು ತಂದು ನೆಟ್ಟ ಗದಗದ ಈ ರೈತ ಅಕ್ಷರಶಃ ಬಂಜರು ಭೂಮಿಯಲ್ಲಿ ಚಿನ್ನ ಬೆಳೆಯುತ್ತಿದ್ದಾನೆ. ಸಾಲದಲ್ಲಿ ಮುಳುಗಿಹೋಗಿದ್ದ ಆತ ಈಗ ಪ್ರಗತಿಪರ ರೈತನಾಗಿ ಯಶಸ್ಸು ಕಾಣುತ್ತಿದ್ದಾನೆ.

ಆಪಲ್ ಬಾರಿ ಹಣ್ಣುಗಳು

ಆಪಲ್ ಬಾರಿ ಹಣ್ಣುಗಳು

  • Share this:
ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ರೈತ ಜಗದೀಶಗೌಡ ಇವರ ಜಮೀನು ಕೇವಲ 5 ಎಕರೆ ಜಮೀನಿನಲ್ಲಿ ವರ್ಷಕ್ಕೆ 10 ರಿಂದ 12 ಲಕ್ಷ ರೂ. ಆದಾಯ ಗಳಿಸ್ತಿದ್ದಾರೆ. ಅದೇಗೆ ಅಂದ್ರೆ ಯಾರೂ ಮಾಡದ ಕೃಷಿ ಪ್ರಯೋಗಗಳಿಂದ. ಹೌದು ಜಗದೇಶಗೌಡ ಸುಮಾರು 30 ವರ್ಷಗಳ ಹಿಂದೆ ಯಾವ ಬೆಳೆ ಬೆಳೆಯದ ಸುಮಾರು 3 ಎಕರೆ ಜವಳು ಭೂಮಿಯೊಂದನ್ನ ಖರೀದಿ ಮಾಡ್ತಾರೆ. ಅಲ್ಲಿ ಬೇರೆ ಬೇರೆ ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿ ಸುಸ್ತಾಗ್ತಾರೆ. ಆದ್ರೆ ಈ ಜವಳು ಭೂಮಿಯನ್ನ ಖರೀದಿ ಮಾಡಿ ನಷ್ಟ ಅನುಭವಿಸಬೇಕಾಯ್ತಲ್ಲ ಅಂತ ಚಿಂತೆಗೀಡಾದಾಗ ಅನಿರೀಕ್ಷಿತವಾಗಿ ಕೃಷಿ ಇಲಾಖೆಗೆ ಭೇಟಿ ಕೊಟ್ಟು ಪರಿಹಾರ ಕಂಡುಕೊಳ್ತಾರೆ. ಅದೇ ಪರಿಹಾರ ಈಗ ಆ್ಯಪಲ್ ಬಾರಿ (Apple Barry) ಹಣ್ಣಿನ ಕೃಷಿ. ಹೌದು ಜಗದೀಶ್ ಗೌಡ ಅವರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ಈ ಜವಳು ಪ್ರದೇಶದಲ್ಲಿ ಬೆಳೆಯ ಬಹುದಾದ ಆ್ಯಪಲ್ ಬಾರಿ ಹಣ್ಣಿನ ಕೃಷಿ ಮಾಡೋದಕ್ಕೆ ಮುಂದಾಗ್ತಾರೆ.  ಮಹಾರಾಷ್ಟ್ರದಿಂದ ಸುಮಾರು 1200 ಗಿಡಗಳನ್ನ ತಂದು ತೋಟಗಾರಿಕೆ ಬೆಳೆಯಾಗಿ ಕೃಷಿ ಆರಂಭಿಸುತ್ತಾರೆ. ಮೊದಲನೆ ವರ್ಷದಲ್ಲಿ ಕೇವಲ 50 ರಿಂದ 60 ಸಾವಿರ ರೂ. ಮಾತ್ರ ಆದಾಯ ಬರುತ್ತೆ. ಬಳಿಕ ವರ್ಷಗಳು ಉರುಳಿದಂತೆ ಅದರ ಆದಾಯ ದುಪ್ಪಟ್ಟು ಆಗುತ್ತೆ. ಸದ್ಯ ಈಗ ಐದು ವರ್ಷಗಳು ಕಳೆದಿವೆ. ಈಗ ಸುಮಾರು 6 ಲಕ್ಷ ರೂ. ಆದಾಯವನ್ನ ಗಳಿಸಿದ್ದಾರೆ.

ಇನ್ನು ಈ ಬೆಳೆ ಬೆಳೆಯೋದಕ್ಕೆ ವಿಘ್ನಗಳು ಅಷ್ಟಿಷ್ಟಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಇತಿಹಾಸದಲ್ಲೇ ಈ ಬೆಳೆಯನ್ನ ಯಾರೂ ಬೆಳೆದಿಲ್ಲ. ಯಾಕೆಂದರೆ ಈ ಬೆಳೆಗೆ ಈ ಭಾಗದಲ್ಲಿ ಒಂದು ಕಳಂಕ ಇದೆ. ಬಾರಿಗಿಡ ಅಂದ್ರೆ ಅದೊಂದು ಅನಿಷ್ಟ ಅಂತ. ಯಾಕೆಂದರೆ ಆ ಗಿಡ ಇದ್ದಲ್ಲಿ ಮಾಟ ಮಂತ್ರ ದೆವ್ವ ಭೂತ ಅಂತ ಜನ ಇನ್ನೂ ಆ ಬಾರಿ ಗಿಡದ ಬಗ್ಗೆ ಮೂಢನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಈ ಗಿಡವನ್ನು ಹಿತ್ತಲದಲ್ಲಿ ಹುಟ್ಟಿದರೆ ಕಡಿದುಬಿಡ್ತಾರೆ. ಮನೆ ಮುಂದೆ ಅಂತೂ ಅದನ್ನ ಯಾರೂ ಬೆಳೆಯೋದಿಲ್ಲ. ಆದ್ರೆ ಇಂತಹ ಪರಿಸ್ಥಿತಿ ಇದ್ದಾಗ ಕೃಷಿ ಇಲಾಖೆಯವರು ನೀಡಿದ ಸಲಹೆಯನ್ನ ತಿರಸ್ಕರಿಸಬೇಕೆ ಅಥವಾ ಊರವರ ಮೂಢನಂಬಿಕೆಯ ಮಾತುಗಳಿಂದ ಹಿಂಜರಿಯಬೇಕೆ ಅನ್ನೋ ಗೊಂದಲದಲ್ಲಿ ಜಗದೇಶ್ ಗೌಡ ಕ್ಯಾತನಗೌಡರು ಅಂತೂ ಧೈರ್ಯ ಮಾಡಿ ಬಾರಿ ಹಣ್ಣಿನ ಕೃಷಿ ಮಾಡಿಯೇಬಿಟ್ಟರು.

ಇದನ್ನೂ ಓದಿ: Kitchen Hacks: ಹೀಗೆ ಮಾಡಿದ್ರೆ ಕೊತ್ತಂಬರಿ ಸೊಪ್ಪು ತುಂಬಾ ದಿನದವರಗೆ ಫ್ರೆಶ್ ಆಗೇ ಇರುತ್ತೆ

ಯಾರೂ ಏನೇ ಅಂದ್ರೂ ಸರಿ ಇದರಲ್ಲಿ ಯಶಸ್ವಿಯಾಗಲೇಬೇಕು ಅಂತ ಹಗಲಿರುಳು ದುಡಿದು ಇಂದು ಚೆನ್ನಾಗಿ ಫಸಲು ಪಡೆಯುತ್ತಿದ್ದಾರೆ. ಇದೇ ಅನಿಷ್ಟ ಕೃಷಿ ಅಂದಿದ್ದ ಜನರು ಈಗ ಶಬ್ಬಾಶ್ ಅಂತಿದ್ದಾರೆ. ಜೊತೆಗೆ ತಾಲೂಕ ಪ್ರಗತಿಪರ ರೈತ ಪ್ರಶಸ್ತಿ ಕೂಡ ಇದೇ ಬೆಳೆ ತಂದುಕೊಟ್ಟಿದೆ. ಇದರ ಜೊತೆಗೆ ಬೇರೆ ಬೇರೆ ತೋಟಗಾರಿಕೆ ಬೆಳೆಗಳನ್ನ ಬೆಳೆದಿದ್ದಾರೆ. ಸುಮಾರು ಐದು ಎಕರೆ ಜಮೀನಿನಲ್ಲಿ ವರ್ಷಕ್ಕೆ 10 ರಿಂದ 12 ಲಕ್ಷ ರೂ. ಆದಾಯ ಗಳಿಸಿ ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ.

ಇನ್ನು ಮೊದಲು ಇದೆಲ್ಲ ಮಳೆಯಾಶ್ರಿತ ಕೃಷಿಯಾಗಿತ್ತು. ಆದ್ರೆ ಕೃಷಿ ಇಲಾಖೆಯ ಸಹಕಾರದಿಂದ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಅದರಿಂದ ಕೆರೆ ಒಳಗೆ ಬೋರ್ ವೆಲ್ ಹಾಕಿದ್ದಾರೆ. ಇದರಿಂದ ಕೆರೆಯ ನೀರಿ ಮತ್ತು ಬೋರ್ ವೆಲ್ ನೀರು ಎರಡು ಜಲಮೂಲ ಅವರ ಕೃಷಿಗೆ ಅನುಕೂಲವಾಗಿವೆ. ಡ್ರಿಪ್ ಮೂಲಕ ಹನಿ ನೀರಾವರಿ ಪದ್ದತಿ ಅಳವಡಿಸಿ ನೀರು ಪೋಲಾಗದಂತೆ ತಡೆದಿದ್ದಾರೆ. ಒಟ್ಟಿನಲ್ಲಿ ಕೃಷಿ ಅಂದ್ರೆ ಕೈ ಸುಡುವುದಲ್ಲ ಲಾಭ ಗಳಿಸೋದು ಅನ್ನೋದನ್ನ ಇವರನ್ನ ನೋಡಿಯೇ ಕಲಿಯಬೇಕು..
Published by:Soumya KN
First published: