Farming Tips: ಲಾಭ ಗಳಿಸೋಕೆ ಬೆಳೆಯೇ ಆಗಬೇಕಿಲ್ಲ, ಬರೀ ಸಸಿಗಳನ್ನೇ ಮಾರಿ ಕೋಟಿಗಟ್ಟಲೆ ಗಳಿಸುತ್ತಿದ್ದಾನೆ ಬೀದರ್ ರೈತ

ಸುಮಾರು ಒಂದು ಎಕರೆಯ ನೆರಳು ಪರದೆಯಲ್ಲಿ ಟೊಮ್ಯಾಟೊ, ರಾಂಪುರ ಬದನೆ, ಪಪ್ಪಾಯಿ ಕಬ್ಬಿನ ಸಸಿಗಳನ್ನ ಬೆಳೆಸಿ ರಾಜ್ಯ ಸೇರಿದಂತೆ ವಿವಿಧ ಹೊರರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾನೆ. ಸಾವಿರಾರು ರೂಪಾಯಿ ಸಂಬಳ ಪಡೆಯುವ ಸರಕಾರಿ ನೌಕರನಂತೆ ನಾನೇನು ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಮಾರಾಟಕ್ಕೆ ಸಜ್ಜಾಗುತ್ತಿರುವ ಬೆಳೆಯ ಸಸಿಗಳು

ಮಾರಾಟಕ್ಕೆ ಸಜ್ಜಾಗುತ್ತಿರುವ ಬೆಳೆಯ ಸಸಿಗಳು

 • Share this:
  ಬೀದರ್ : ಇಲ್ಲೊಬ್ಬ ರೈತ ಕೃಷಿ ಜೊತೆಗೆ ವಿವಿಧ  ಬಗೆಯ ಸಸಿಗಳನ್ನ ಬೆಳೆಸಿ ಮಾರಾಟ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.  ನರ್ಸರಿಯಿಂದ ಉತ್ತಮ ಗುಣಮಟ್ಟದ ಸಸಸಿಗಳನ್ನ ಬೆಳೆಸಿ ಮಾರಾಟ ಮಾಡಿ ಅದರಿಂದ  ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾನೆ. ಸುಮಾರು ಒಂದು ಎಕರೆಯ ನೆರಳು ಪರದೆಯಲ್ಲಿ ಟೊಮ್ಯಾಟೊ, ರಾಂಪುರ ಬದನೆ, ಪಪ್ಪಾಯಿ ಕಬ್ಬಿನ ಸಸಿಗಳನ್ನ ಬೆಳೆಸಿ ರಾಜ್ಯ ಸೇರಿದಂತೆ ವಿವಿಧ ಹೊರರಾಜ್ಯಕ್ಕೂ ಮಾರಾಟ ಮಾಡುತ್ತಿದ್ದಾನೆ. ಸಾವಿರಾರು ರೂಪಾಯಿ ಸಂಬಳ ಪಡೆಯುವ ಸರಕಾರಿ ನೌಕರನಂತೆ ನಾನೇನು ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.  ಕೃಷಿಯ ಜೊತೆಗೆ ವಿವಿಧ ಬಗೆಯ ತಳಿಯ ಸಿಸಿಗಳನ್ನ ಬೆಳೆಸಿ ಕೈ ತುಂಬಾ ಹಣ, ಸುಂದರ ಬದುಕು ಕಟ್ಟಿಕೊಂಡಿದ್ದಾನೆ  ರೈತ. ಸಮಗ್ರ ಕೃಷಿಯ ಜೊತೆಗೆ ವಿವಿಧ ಬಗೆಯ ಸಸಿಗಳನ್ನ ಬೆಳೆಸಿ ಆದಾಯ ಗಳಿಸುತ್ತಿದ್ದಾನೆ ತಿಂಗಳಿಗೆ ಲಕ್ಷ ಲಕ್ಷ ಹಣ ಆದಾಯ ಪಡೆಯುತ್ತಿದ್ದಾನೆ. ಓರ್ವ ಐಎಎಸ್ ಆಫೀಸರ್ ಪಡೆಯೋ ಸಂಬಳಕ್ಕಿಂತಲೂ ನಾನೇನು ಕಮ್ಮಿಯಿಲ್ಲ ಅಂತಾ ತೋರಿಸಿಕೊಟ್ಟ ರೈತ. ಕೃಷಿಯಲ್ಲಿ ಮಾಡುತ್ತಿದ್ದಾನೆ ಹೊಸ ಹೊಸ ಪ್ರಯೋಗ, ಇವರ ಹೊಲಕ್ಕೆ  ಪ್ರತಿ ದಿನ ನೂರಾರು ರೈತರು ಬಂದು ಹೋಗುತ್ತಾರೆ.

  ಇಂದಿನ ದಿನಮಾನಗಳಲ್ಲಿ ಕಳಪೆ ಗುಣಮಟ್ಟದ ಬಿತ್ತನೆಯ ಬಿಜ ರೈತರನ್ನ ಹೈರಾಣಾಗಿಸಿದ್ದು ಬಿತ್ತಿದ ಕಾಳು ಮೊಳಕೆಯೊಡೆಯದೆ ರೈತ ಸಂಕಷ್ಟವನ್ನ ಅನುಭವಿಸುತ್ತಿರುವುದನ್ನ ನಾವೆಲ್ಲರು ಕೇಳಿದ್ದೇವೆ ನೋಡಿದ್ದೇವೆ. ಆದರೇ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಣಕಟ್ಟಾ ಗ್ರಾಮದ ರೈತ ಶಾಹಜಿ ಬಿರಾದಾರ್ ಕಳಪೆಗುಣಮಟ್ಟದ ಬಿತ್ತನೆ ಬಿಜದಿಂದ ರೈತರು ಸಂಕಷ್ಟದಿಂದ ಪಾರು ಮಾಡುಬೆಂಕೆಂದು ರೈತರು ಬಯಸುವ ವಿವಿಧ ಕಂಪನಿಯ ಸಸಿಗಳನ್ನ ತಯ್ಯಾರಿ ಅವುಳನ್ನ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ರೈತರನ್ನ ನಷ್ಟದಿಂದ ಪಾರು ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ.

  ಇದರಿಂದ ತಾನು ಕೂಡಾ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಯುತ್ತಿದ್ದಾನೆ. ಸಿದ್ದಾರೆಡ್ಡಿ ರೈತರಿಗೆ ಬೇಕಾದ ತೋಟಗಾರಿಗೆ ಬೆಳೆಗಳಾದ ಕಬ್ಬು, ಪಪ್ಪಾಯಿ, ಕಲ್ಲಂಗಡಿ, ಬಾಳೆ, ಸೇರಿದಂತೆ ಹತ್ತಾರು ಬಗೆಯ ಸಸಿಗಳನ್ನ ಬೆಳೆಸಿ ಮಾರಾಟ ಮಾಡುತ್ತಿದ್ದಾರೆ.  ಉತ್ತಮ ತಳಿಯ ಸಸಿಗಳನ್ನ ಬೆಳೆಸಿ ಮಾರಾಟ ಮಾಡುತ್ತಿರುವ ಶಾಹಜಿ ಬಿರಾದಾರ್ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ. ಇನ್ನೂ ಇಲ್ಲಿ ಬೆಳೆದ ಸಸಿಗಳನ್ನ ರೈತರು ತಮ್ಮ ಹೊಲದಲ್ಲಿ ನಾಟಿ ಮಾಡಿದರೇ ಅವರಿಗೆ ಹೆಚ್ಚಿನ ಲಾಭ ಸಿಗುತ್ತಿದ್ದು ಹೊಲದಲ್ಲಿ ಬೀಜ ಬಿತ್ತಿ ಅದು ಮೊಳಕೆಯೊಡೆಯುವುದರ ವರೆಗೆ ಕಾಯುವ ಸಮಯ ರೈತರಿಗೆ ತಪ್ಪಿಸಿದಂತಾಗಿದೆ.

  ಇದನ್ನೂ ಓದಿ: Mandya to Malaysia: ಬಡವರ ಅನ್ನಕ್ಕೂ ಕನ್ನ: ಅನ್ನಭಾಗ್ಯದ ಅಕ್ಕಿ ಕದ್ದು ಮಲೇಷ್ಯಾಗೆ ಎಕ್ಸ್​ಪೋರ್ಟ್ ಮಾಡುತ್ತಿದ್ದ ಖದೀಮರು

  ರೈತರ ಬೇಡಿಕೆಗೆ ತಕ್ಕಂತೆ ಉತ್ತಮ ಗುಣಮಟ್ಟದ ಇಳುವರಿಕೊಡುವ ಹಣ್ಣು, ತರಕಾರಿ, ಕಬ್ಬು, ಮಾವು, ಪೆರಲ, ತೆಂಗು, ಹೀಗೆ ಎಲ್ಲಾ ಜಾತಿಯ ಸಸಿಗಳನ್ನ ತಯಾರಿಸಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಇದರ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 35 ಎಕರೆ ಜಮೀನು ಹೊಂದಿರುವ ಯುವ ರೈತ ಶಾಹಜಿ ಬಿರಾದಾರ್ ಪಪ್ಪಾಯಿ, ಕಬ್ಬ, ಕಲ್ಲಂಗಡಿ ಜೊತೆಗೆ ಮಾವೂ, ಸೇಬು ಬೆಳೆದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಘಳಿಸುತ್ತಿದ್ದಾನೆ. ಇನ್ನೂ ಇದಕ್ಕಿಂತ ಹೆಚ್ಚಾಗಿ ಲಾಭ ಕಂಡುಕೊಂಡಿರುವದು ನರ್ಸರಿಯಿಂದ ಎಂದು ಹೆಮ್ಮೆಯಿಂದ ಶಾಹಜಿ ಬಿರಾದಾರ್ ಹೇಳುತ್ತಿದ್ದಾರೆ.
  ಸುಮಾರು ವರ್ಷಕ್ಕೆ ಏನಿಲ್ಲವೆಂದು ಒಂದು ಕೋಟಿ ರೂಪಾಯಿ ವರೆಗೂ ಸಸಿಗಳನ್ನ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.

  ಇವರು ಬೆಳೆಸುವ ಸಸಿಗಳು ರಾಜ್ಯ ಅಷ್ಟೇ ಅಲ್ಲದೇ ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣ, ಮಹರಾಷ್ಟ್ರದದಿಂದಲೂ ರೈತರು ಮುಂಗಡವಾಗಿ ಹಣ ನೀಡಿ ತಮಗೆ ಬೇಕಾದ ಸಸಿಗಳನ್ನ ರೆಡಿ ಮಾಡಿಕೊಡುವಂತೆ ಹೇಳುತ್ತಾರಂತೆ.  ರೈತರ ಬೇಡಿಕೆಗೆ ತಕ್ಕಂತೆ ಶಾಹಜಿ ಬಿರಾದಾರ್ ಸಸಿಗಳನ್ನ ರೆಡಿ ಮಾಡಿ ಅವರಿಗೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಆದಾಯ ಗಳಿಸುವುದರಲ್ಲಿ ಹೆಚ್ಚಿನ ಸಹಾಯವಾಗಿದೆ ಎಂದು ರೈತ ಹೇಳುತ್ತಿದ್ದಾನೆ. ಸಸಿ ತಯಾರಿಸಲು ಬೇಕಾದ ಗೊಬ್ಬರ ಹಾಗೂ ಪ್ಲಾಸ್ಟಿಕ್ ಹುಂಡಿಗಳನ್ನ ಪಕ್ಕದ ಮುಂಬೈ, ಹಾಗೂ ಹೈದರಾಬಾದ್ ನಿಂದ ತರಿಸಿಕೊಂಡು ಸಸಿಗಳನ್ನ ಬೆಳೆಸುತ್ತಿದ್ದಾರೆ. ಇನ್ನೂ ಸಸಿ ತಯಾರಿಸಲು ಸುಮಾರು 40 ಜನ ಮಹಿಳೆಯರು ನಿರಂತರವಾಗಿ ಇಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ತಿಂಗಳಿಗೆ ಇಂತಿಷ್ಟು ಸಂಬಳವನ್ನ ಫಿಕ್ಸ್ ಮಾಡಿ ಅವರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದಾರೆ.

  ತೋಟಗಾರಿಕೆ ಇಲಾಖೆಯಿಂದ ಬರುವ ಎಲ್ಲಾ ಸೌಲಭ್ಯಗಳನ್ನ ಅವರು ಪಡೆದುಕೊಂಡಿದ್ದು ಜಿಲ್ಲೆಯಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಸದಾ ಕಬ್ಬು, ತೊಗರಿ, ಸೋಯಾ, ಉದ್ದು,  ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಈ ಕಣಕಟ್ಟಾ ಯುವ ರೈತರ ಮಾದರಿ ರೈತನಾಗಿ ಹೊರಹೊಮ್ಮಿದ್ದಾನೆ.  ಒಂದು ಎಕರೆ ನೆರಳು ಪರದೆ ಮನೆಯಲ್ಲಿ ಇಡಿ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿರುವುದರಿಂದ ಇವರ ಲಾಭ ಇಮ್ಮಡಿಯಾಗಿಸಿದೆ. ಕೆಲಸಕ್ಕೆ ಬರೋ ಕೂಲಿ ಆಳುಗಳು ಕೂಡಾ ಇವರ ಕುಟುಂಬದ ಸದಸ್ಯರ ಜೊತೆ ಕೆಲಸ ಮಾಡುವುದರಿಂದ ಹೆಚ್ಚಿನ ಕೆಲಸವಾಗುತ್ತಿದೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಇನ್ನೊಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಅನ್ನೊದನ್ನ ತೋರಿಸಿದ್ದಾರೆ.

  (ವರದಿ: ಚಮನ್. ಹೊಸಮನಿ, ಬೀದರ್)
  Published by:Soumya KN
  First published: