ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಸಿದುಕೊಂಡ ಮಳೆರಾಯ; ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಬಾಣಂತಿ!

ಮಳೆ ಬಂದಾಗ ಹೊರಗಡೆ ಇದ್ದು ಅಡುಗೆ ಮಾಡಿಕೊಂಡು ಇರಲು  ಕಷ್ಟವಾಗುತ್ತಿದೆ. ಮಳೆ ಬಂದಾಗ ಎಲ್ಲರೂ ಸಮುದಾಯ ಭವನದಲ್ಲಿ ವಾಸ ಮಾಡುತ್ತಾರೆ. ಕೆಲವೊಮ್ಮೆ  ಉಪವಾಸ ಕೂಡ ಮಲಗಿದ್ದಾರೆ. ಗ್ರಾಮದಲ್ಲಿ ಮಂಗಗಳ ಕಾಟ ಕೂಡ ಹೆಚ್ಚಾಗಿದೆ. ರೊಟ್ಟಿ ಏನಾದರೂ ಮಾಡಿ ಇಟ್ಟರೆ ಮಂಗಗಳು ರೊಟ್ಟಿ ತೆಗೆದುಕೊಂಡು ಹೋಗುತ್ತವೆ.

ಮಗುವಿನೊಂದಿಗೆ ಬೀದಿಯಲ್ಲಿಯೇ ಅಡುಗೆ ತಯಾರಿಸುತ್ತಿರುವ ತಾಯಿ.

ಮಗುವಿನೊಂದಿಗೆ ಬೀದಿಯಲ್ಲಿಯೇ ಅಡುಗೆ ತಯಾರಿಸುತ್ತಿರುವ ತಾಯಿ.

  • Share this:
ಯಾದಗಿರಿ: ಜಿಲ್ಲೆಯಲ್ಲಿ ಎಲ್ಲಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ ಆದರೆ, ಈ ಕುಟುಂಬಸ್ಥರು ಹಬ್ಬದ ದಿನವೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮನೆಯಲ್ಲಿ ಯಾವುದೇ ಹಬ್ಬದ ಸಂಭ್ರಮ ಇಲ್ಲ. ಯಾರಾದರು ಸಹಾಯ ಮಾಡಿ ಪುಣ್ಯ ಕಟ್ಟಿಕೊಂಡು ಆಶ್ರಯವಾಗಬೇಕೆಂದು ಈ ಕುಟುಂಬ ನೋವು ತೋಡಿಕೊಳ್ಳುತ್ತಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಬಾಣಂತಿ, ಮಗು ಸೇರಿ 7 ಜನ ಬೀದಿ ಬದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದೇ 23ರಂದು ಸುರಿದ ಭಾರಿ ಮಳೆಗೆ ಮನೆ ಕುಸಿದಿದೆ. ಇದರ ಪರಿಣಾಮ ಕುಟುಂಬ ಈಗ ಬೀದಿ ಪಾಲಾಗಿದೆ. ನಾಯ್ಕಲ್ ಗ್ರಾಮದ ಗಾಳೆಪ್ಪ ಎಂಬುವರ ಮನೆಯ ಪಕ್ಕದ ಗೋಡೆಯು ಗಾಳೆಪ್ಪ ಅವರ ಮನೆ ಮೇಲೆ ಕುಸಿದ ಪರಿಣಾಮ ಗಾಳೆಪ್ಪ ಅವರ ಮನೆಯು ಕುಸಿದಿದೆ. ಮನೆ ಕುಸಿದಾಗ ಬಾಣಂತಿ ಹಾಗು ‌ಮಗು ಸೇರಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಧವಸ ಧಾನ್ಯ ಹಾಗೂ ಮನೆಯಲ್ಲಿರುವ ಅಗತ್ಯ ವಸ್ತುಗಳು ಕೂಡ ಹಾನಿಯಾಗಿವೆ.

ಬಾಣಂತಿ ಗಂಗಮ್ಮ, ಹೆಣ್ಣು ಮಗು ಪಲ್ಲವಿ, ಬಾಣಂತಿ ಪತಿ ಗಾಳೆಪ್ಪ, ಗಾಳೆಪ್ಪನ  ತಾಯಿ ಮಲ್ಲಮ್ಮ, ಇಬ್ಬರು ಸಹೋದರಿಯರು, ಓರ್ವ ಸಹೋದರ ಚಿಕ್ಕದಾದ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮನೆ ಬಿದ್ದಿದ್ದರಿಂದ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ. ಬಿದ್ದ ಮನೆಯ ಮುಂಭಾಗದ ಜಾಗದಲ್ಲಿ ಅಡುಗೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಪಾಳು ಬಿದ್ದ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಈ ಬಗ್ಗೆ ಬಾಣಂತಿ ಗಂಗಮ್ಮ ಮಾತನಾಡಿ, ಮನೆ ಕುಸಿದು ಬಿದ್ದಿದ್ದರಿಂದ ಮೈದಾನ ಪ್ರದೇಶದಲ್ಲಿ ವಾಸ ಮಾಡುತ್ತಿದ್ದೇವೆ. ಮಗು ಜೊತೆ ನಾನು ಹೇಗೆ ಇರಬೇಕು. ಯಾರಾದರು ಸಹಾಯ ಮಾಡಿ ಮನೆ ದುರಸ್ತಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ನೋವು ತೊಡಿಕೊಂಡಿದ್ದಾರೆ.

ರೊಟ್ಟಿ ಕಸಿದುಕೊಂಡು ಹೋದ ಮಂಗಗಳು...!

ಮಳೆ ಬಂದಾಗ ಹೊರಗಡೆ ಇದ್ದು ಅಡುಗೆ ಮಾಡಿಕೊಂಡು ಇರಲು  ಕಷ್ಟವಾಗುತ್ತಿದೆ. ಮಳೆ ಬಂದಾಗ ಎಲ್ಲರೂ ಸಮುದಾಯ ಭವನದಲ್ಲಿ ವಾಸ ಮಾಡುತ್ತಾರೆ. ಕೆಲವೊಮ್ಮೆ  ಉಪವಾಸ ಕೂಡ ಮಲಗಿದ್ದಾರೆ. ಗ್ರಾಮದಲ್ಲಿ ಮಂಗಗಳ ಕಾಟ ಕೂಡ ಹೆಚ್ಚಾಗಿದೆ. ರೊಟ್ಟಿ ಏನಾದರೂ ಮಾಡಿ ಇಟ್ಟರೆ ಮಂಗಗಳು ರೊಟ್ಟಿ ತೆಗೆದುಕೊಂಡು ಹೋಗುತ್ತವೆ. ಒಂದು ಕಡೆ ಬಯಲು ಪ್ರದೇಶದಲ್ಲಿ ಸಂಕಷ್ಟದ ಜೀವನ, ಮತ್ತೊಂದೆಡೆ ಮಂಗಗಳ ಹಾವಳಿಯಿಂದಲೂ ಈ ಕುಟುಂಬ ಸಂಕಷ್ಟ ಎದುರಿಸುತ್ತಿದೆ.

ಇದನ್ನು ಓದಿ: ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್​ನಲ್ಲಿ 21 ಜನ ಸಾವು; ಸಿಎಂ ಅಮರೀಂದರ್ ಸಿಂಗ್ ತನಿಖೆಗೆ ಆದೇಶ

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ವಡಗೇರಾ ತಹಸೀಲ್ದಾರ ಸುರೇಶ್ ಅಂಕಲಗಿ ಮಾತನಾಡಿ, ಆ ಕುಟುಂಬಕ್ಕೆ ಧವಸ, ಧಾನ್ಯ ನೀಡಲಾಗಿದೆ. ಸರಕಾರದಿಂದ  ಎಲ್ಲಾ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕೂಡಲೇ ಸರಕಾರ ಇಲ್ಲವೇ ಸಂಘ ಸಂಸ್ಥೆಯವರು ಬೀದಿಯಲ್ಲಿ ಬದುಕು  ಸಾಗಿಸುತ್ತಿರುವ ಈ ಕುಟುಂಬಕ್ಕೆ ಆಶ್ರಯವಾಗಿ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.
Published by:HR Ramesh
First published: