• Home
  • »
  • News
  • »
  • district
  • »
  • ಇವರ ಮನೆಯಲ್ಲಿ 100 ಹಸುಗಳು, ಎಲ್ಲವಕ್ಕೂ ಮಧ್ಯಾಹ್ನ ಬಿಸಿಯೂಟ - ಹಬ್ಬಕ್ಕೆ ಹೋಳಿಗೆ ಊಟ..ಇದು ಗೋ ಪ್ರೀತಿ!

ಇವರ ಮನೆಯಲ್ಲಿ 100 ಹಸುಗಳು, ಎಲ್ಲವಕ್ಕೂ ಮಧ್ಯಾಹ್ನ ಬಿಸಿಯೂಟ - ಹಬ್ಬಕ್ಕೆ ಹೋಳಿಗೆ ಊಟ..ಇದು ಗೋ ಪ್ರೀತಿ!

ಪ್ರೀತಿಯ ಹಸುಗಳೊಂದಿಗೆ ಸುಬ್ರಾಯ ಶೆಟ್ಟಿ

ಪ್ರೀತಿಯ ಹಸುಗಳೊಂದಿಗೆ ಸುಬ್ರಾಯ ಶೆಟ್ಟಿ

ಇವರ ಮನೆಯಲ್ಲಿ 100 ಕ್ಕಿಂತ ಹೆಚ್ಚು ಆಕಳುಗಳಿವೆ. ಇವರ ಮನೆಯಲ್ಲಿ ಇರುವ ಮಲೆನಾಡ ಗಿಡ್ಡ ಹಸು ಕರುಗಳಿಗೆ ಮಧ್ಯಾಹ್ನ ಬಿಸಿಯೂಟ ತಿನಿಸುತ್ತಾರೆ. ಶ್ರೀ ಕೃಷ್ಟಾಷ್ಟಮಿ, ದೀಪಾವಳಿಗೆ ಬೂಂದಿ ಲಾಡು, ಹೋಳಿಗೆ ಊಟ ಕೊಡುತ್ತಾರೆ.

  • Share this:

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದ ಹಂಸಾರಾಮಕ್ಕಿಯಲ್ಲಿ ವಿದ್ಯಾವಂತ ಕುಟುಂಬವೊಂದು ಗೋ ಸೇವೆಯಲ್ಲಿ ತೊಡಗಿಕೊಂಡು, ಪ್ರತಿ ದಿನವೂ ಗೋ ಪಾಲನೆ ಪೋಷಣೆ ಮಾಡಿ ಗೋ ಪ್ರೀತಿ ಸಾರುತ್ತಿದೆ. ನೂರಕ್ಕಿಂತ ಹೆಚ್ಚು ಆಕಳು ಇವರ ಮನೆಯಲ್ಲಿ ಮನೆಯ ಸದಸ್ಯರಂತೆ ಇವರ ಜೊತೆಯಾಗೇ ಇರುತ್ತಿದೆ. ಶ್ರೀ ಸುಬ್ರಹ್ಮಣ್ಯ ವಿದ್ಯಾ ಸಂಸ್ಥೆಯ ನಿವೃತ್ತ ನೌಕರ ಸುಬ್ರಾಯ ಶೆಟ್ಟಿ ಕುಟುಂಬ ವಿದ್ಯಾವಂತ ಕುಟುಂಬ. ಇವರ ಪತ್ನಿ ನಿವೃತ್ತ ಶಿಕ್ಷಕಿ ಮಕ್ಕಳು ಕೂಡಾ ವಿದ್ಯಾವಂತರೇ. ಇವರ ಇಡೀ ಕುಟುಂಬವೆ ಗೋ ಸೇವೆಯಲ್ಲಿ ತೊಡಗಿಕೊಂಡು ಬಿಟ್ಟಿದೆ. ಸರಿಸುಮಾರು ಇವರ ಮನೆಯಲ್ಲಿ 100 ಕ್ಕಿಂತ ಹೆಚ್ಚು ಆಕಳುಗಳಿವೆ. ಇವರ ಮನೆಯಲ್ಲಿ ಇರುವ ಮಲೆನಾಡ ಗಿಡ್ಡ ಹಸು ಕರುಗಳಿಗೆ ಮಧ್ಯಾಹ್ನ ಬಿಸಿಯೂಟ ತಿನಿಸುತ್ತಾರೆ. ಶ್ರೀ ಕೃಷ್ಟಾಷ್ಟಮಿ, ದೀಪಾವಳಿಗೆ ಬೂಂದಿ ಲಾಡು, ಹೋಳಿಗೆ ಊಟ ಕೊಡುತ್ತಾರೆ.


ಉಳಿದ ಹಬ್ಬಗಳಲ್ಲಿ ಪಾಯಸ ಮಾಡಿ ಬಡಿಸುತ್ತಾರೆ. ಸುಂದರು, ಅಂಬಾ ಭವಾನಿ, ಹಂಡಪ್ಪಿ, ಬೊಂಟ, ಬೆಳ್ಳಿ, ಪದ್ಮಾವತಿ, ಹಂಪಣ್ಣ ಎಲ್ಲಾ ಬನ್ನಿ, ತಿಂಡಿ ತಿನ್ನಿ ಎಂದು ಜೋರಾಗಿ ಕೂಗಿ ಕರೆಯುತಿದ್ದಂತೆ ಒಂದೊಂದೇ ಬಂದು ಮನೆಯ ಮುಂದೆ ಹಾಜರಾಗುತ್ತವೆ. ಇವರ ಮನೆಯ ಅಂಗಳ, ತೋಟ ಎಲ್ಲಾ ಕಡೆಯಲ್ಲೂ ಆಕಳಿದೆ ಪಾರುಪತ್ಯವೆವಾಗಿ ಬಿಟ್ಟಿದೆ. ಅವರ ಆರೈಕೆಯಲ್ಲಿ ಈಗ ಮಲೆನಾಡ ಗಿಡ್ಡ ತಳಿಯ 100ಕ್ಕೂ ಅಧಿಕ ಆಕಳು ಇವೆ ಕೆಲವು ಗರ್ಭ ಧರಿಸಿದ್ದು, ಸ್ವಲ್ಪ ದಿನಗಳಲ್ಲಿ ಇನ್ನೂ ಹೆಚ್ಚಾಗುತ್ತದೆ.


ಇವೆಲ್ಲ ನಮ್ಮ ಮನೆ ಸದಸ್ಯರೇ. ನಾವು ಕೊಟ್ಟಿಗೆಯಲ್ಲಿ ಕಟ್ಟಿ ಹಾಕುವುದಿಲ್ಲ. ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದು. ಅಲ್ಲೇ ಸುತ್ತಾಡುತ್ತವೆ. ತೋಟ, ಸೊಪ್ಪಿನ ಗುಡ್ಡದಲ್ಲಿ ಅವುಗಳ ಪಾಡಿಗೆ ಮೇಯುತ್ತಾ, ಕುಣಿಯುತ್ತಾ, ಓಡುತ್ತಾ ಇರುತ್ತವೆ ಎಂದು ಸುಬ್ರಾಯ ಶೆಟ್ಟಿಯವರು ಸಂತೃಪ್ತಿ ವ್ಯಕ್ತಪಡಿಸುತ್ತಾರೆ. 'ದೇಸಿ ತಳಿಯ ಹಸುವಿಗೆ ಹಾಲು ಕಡಿಮೆಯಿರುತ್ತದೆ. ಹಾಗಾಗಿ ನಾವು ಹಾಲು ಕರೆಯುವುದೇ ಇಲ್ಲ. ಎಲ್ಲವನ್ನೂ ಕರುಗಳಿಗೆ ಬಿಟ್ಟಿದ್ದು, ಮನೆ ಬಳಕೆಗೆ ಪ್ಯಾಕೆಟ್ ಹಾಲು ತರುತ್ತೇವೆ. ಮಲೆನಾಡ ತಳಿಗಳು ನಮ್ಮವು. ಅವುಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ಖರ್ಚು ವೆಚ್ಚಗಳನ್ನು ಲೆಕ್ಕಿಸದೆ ಆರೈಕೆ ಮಾಡುತಿದ್ದೇವೆ ಎಂದು ಹೇಳುತ್ತಾರೆ.


ಇದನ್ನೂ ಓದಿ: Kitchen Hacks: ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಅಷ್ಟೆಲ್ಲಾ ಕಷ್ಟ ಪಡ್ಬೇಡಿ.. ತುಂಬಾ ಸಲಭದ ಟ್ರಿಕ್ ಇದೆ, ಹೀಗೆ ಮಾಡಿ ನೋಡಿ!


ಪತ್ರಿಕೋದ್ಯಮ ಚರಿತ್ರೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಸುಬ್ರಾಯ ಶೆಟ್ಟಿಯವರ ಮಗ ವಿನಯ ಶೆಟ್ಟಿ ಹೈನುಗಾರಿಕೆ ಮತ್ತು ಕೃಷಿಯ ಮೇಲಿನ ಮಮಕಾರದಿಂದ ಮನೆಯಲ್ಲೇ ಇದ್ದು ಕೃಷಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅಡಿಕೆ ಕೃಷಿಯಲ್ಲಿ ಸಿಗುವ ಆದಾಯದಲ್ಲಿ ಒಂದಿಷ್ಟು ಪಾಲನ್ನು ದೇಸಿ ಹಸುಗಳ ಲಾಲನೆ ಪಾಲನೆಗೆ ವಿನಿಯೋಗಿಸುತ್ತಾರೆ.


ಇವರ ಮನೆಯಲ್ಲಿ ಸರಿ ಸುಮಾರು 40 ವರ್ಷಗಳಿಂದ ಆಕಳು ಸಾಕುತ್ತಿದ್ದಾರೆ. ಅವು ನಮ್ಮ ಪಾಲಿಗೆ ದೇವರಿದ್ದಂತೆ. ಹಾಗಾಗಿ ದಿನವೂ ಅವುಗಳಿಗೆ ಹುಲ್ಲು, ಹಿಂಡಿ, ಗಂಜಿ ಕೊಟ್ಟ ನಂತರವೇ ನಮ್ಮ ಊಟ, ತಿಂಡಿಯೆಲ್ಲ ಎಂದು ಸುಬ್ರಾಯ ಶೆಟ್ಟಿಯವರು ಖುಷಿ ಇಂದ ಹೇಳಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಅಕ್ಕಿ ಹಾಗೂ ತೌಡನ್ನು (ದೂಳು) ಬೇಯಿಸಿ ಗಂಜಿ ಮಾಡುತ್ತಾರೆ. ಅದಕ್ಕೆ ನೀರು ಬೆರಸಿ ಕುಡಿಯಲು ಕೊಡುತ್ತಾರೆ. ಜೊತೆಗೆ ಹತ್ತಿಕಾಳಿನ ಹಿಂಡಿ, ಒಂದು ಚೀಲ(50ಕೆ.ಜಿ) ನುಚ್ಚಕ್ಕಿಯನ್ನು ಬೇಯಿಸಿ ಬೆಳಿಗ್ಗೆ ಮತ್ತು ಮಧ್ಯಾಹ್ನ, ದಿನಕ್ಕೆ ಐದು ಬಾರಿ ಒಣ ಹುಲ್ಲನ್ನು ನೀಡುತ್ತಾರೆ. ಜಮೀನಿನಲ್ಲಿ ಎರಡು ತೊಟ್ಟಿಗಳನ್ನು ಇಟ್ಟಿದ್ದು ಸದಾ ನೀರು ತುಂಬೇ ಇಡುತ್ತಾರೆ.


ಇಷ್ಟೊಂದು ಆಕಳನ್ನು ಸಾಕುವುದು ಅಂದರೆ ಸುಲಭದ ಕೆಲಸವೇನು ಅಲ್ಲ. ಪ್ರತಿ ದಿನದ ಖರ್ಚು ಬರಿಸಲಾಗದಷ್ಟಾಗುತ್ತದೆ. ಗೋ ಸಾಕಾಣಿಕೆ ಮಾಡಿ ಹಾಲಿನ ವ್ಯಾಪಾರ, ಗೊಬ್ಬರ ವ್ಯಾಪಾರ ಹೀಗೆ ನಾನಾ ಕಾರಣದಿಂದ ಒಂದು ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡವರು ತುಂಬಾ ಜನ ಇದ್ದಾರೆ. ಆದರೆ ಸುಬ್ರಾಯ ಶೆಟ್ಟರ ಕುಟುಂಬ ಆಕಳ ಸಾಕಾಣಿಕೆಯಿಂದ ಲಾಭವನ್ನೇ ಬಯಸದೆ ಕೇವಲ ಗೋ ಸೇವೆಗಾಗಿ ಮಾತ್ರ ಸಾಕಿ ಸಲಗುತ್ತಿದ್ದಾರೆ. ಇವರಿಗೆ ಯಾವ ಲಾಭವು ಇಲ್ಲದಿದ್ದರೂ, ಇವರಿಂದ ಹುಲ್ಲು ವ್ಯಾಪಾರಸ್ಥರಿಗೆ, ಹಿಂಡಿ ಇನ್ನಿತರ ಸಾಮಗ್ರಿ ನೀಡುವ ಕಿರಾಣಿ ಅಂಗಡಿಯವರಿಗೆ ಇವರಿಂದ ಸಾಕಷ್ಟು ವ್ಯಾಪಾರ ವಾಗುತ್ತಿದೆ. ಇವರ ಹವ್ಯಾಸ, ಗೋ ಪ್ರೀತಿ ಮತ್ತೊಬ್ಬರಿಗೆ ಅನುಕೂಲ ಮಾಡಿಕೊಟ್ಟಿದೆ.

Published by:Soumya KN
First published: