ಚಾಮರಾಜನಗರ(ಜೂ.25): ಜಿಲ್ಲೆಯ ಬಂಡೀಪುರದಲ್ಲಿ ಕಾಡಾನೆಯೊಂದು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ ಸಿಲುಕಿ ಗಂಟೆಗಟ್ಟಲೆ ಒದ್ದಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈಲ್ವೆ ಕಂಬಿ ಬ್ಯಾರಿಕೇಡ್ ಕೆಳಗೆ ತೂರಿ ಹೋಗಲು ಯತ್ನಿಸಿದ ಕಾಡಾನೆ ಕಂಬಿಯ ಕೆಳಗೆ ಸಿಲುಕ್ಕಿದ್ದ ವಿಡಿಯೋ ಸಖತ್ ವೈರಲ್ ಆಗಿದೆ
ಕಳೆದ ವಾರ ಬಂಡೀಪುರ ಹುಲಿರಕ್ಷಿತಾರಣ್ಯದ ಮೊಳೆಯೂರು ವಲಯದಿಂದ ಮೇವನ್ನರಿಸಿ ರಾತ್ರಿ ವೇಳೆ ಹೊರಬಂದಿದ್ದ ಸುಮಾರು 40 ವರ್ಷದ ಹೆಣ್ಣಾನೆ ಬೆಳಗಿನ ಜಾವವಾದರೂ ಕಾಡಂಚಿನ ಜಮೀನಿನಲ್ಲೆ ಬೀಡುಬಿಟ್ಟಿತ್ತು. ಬೆಳಕು ಹರಿಯುತ್ತಿದ್ದಂತೆ ಮತ್ತೆ ಕಾಡಿಗೆ ಹೊರಟ ಆನೆ ಹೆಚ್. ಡಿ.ಕೋಟೆ ತಾಲೋಕು ನಡಾಡಿ ಎಂಬ ಗ್ರಾಮದ ವಸ್ತಿಹಳ್ಳದ ಬಳಿ ಕಾಡಂಚಿನಲ್ಲಿ ಅಳವಡಿಸಿದ್ದ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ ತೂರಿ ಹೋಗಲು ಯತ್ನಿಸಿದೆ
ಈ ವೇಳೆ ಆನೆಯ ಹೊಟ್ಟೆ ಭಾಗ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಕೆಳಭಾಗದಲ್ಲಿ ಸಿಲುಕಿದೆ. ಇದರಿಂದ ಬಿಡಿಸಿಕೊಳ್ಳಲಾಗದೆ ಗಂಟೆಗಟ್ಟಲೆ ಒದ್ದಾಡಿದೆ.
ಇದನ್ನೂ ಓದಿ : ಕೊರೋನಾ ಹಾಟ್ ಸ್ಪಾಟ್ ನಲ್ಲಿ ಸೋಂಕಿತರ ತೀವ್ರಗತಿ ಚೇತರಿಕೆ ; ಶೇ.66 ರಷ್ಟು ರೋಗಿಗಳು ಗುಣಮುಖ
ಬೆಳಿಗ್ಗೆ ಜಮೀನುಗಳಿಗೆ ಹೋಗುತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮೊಳೆಯೂರು ವಲಯ ಅರಣ್ಯಾಧಿಕಾರಿಗಳು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಸಡಿಲಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ