ತನ್ನ ದಂತಗಳಿಂದಲೇ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಮುರಿದು ಹಾಕಲು ಕಾಡಾನೆ ಯತ್ನ: ವಿಡಿಯೋ ವೈರಲ್

ಕಾಡಿನಿಂದ ಹೊರಬರಲು ಮುಂದಾದ ಗಂಡಾನೆಯೊಂದು ಈ ರೈಲ್ವೆ ಕಂಬಿಗಳನ್ನು ತನ್ನ ದಂತಗಳಿಂದಲೇ ಮುರಿದು ಹಾಕಲು ಯತ್ನಿಸಿದೆ. ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಬ್ಯಾರಿಕೇಡ್ ಮುರಿದು ಹಾಕಲು ಯತ್ನಿಸುತ್ತಿರುವ ಆನೆ

ಬ್ಯಾರಿಕೇಡ್ ಮುರಿದು ಹಾಕಲು ಯತ್ನಿಸುತ್ತಿರುವ ಆನೆ

  • Share this:
ಚಾಮರಾಜನಗರ(ಜುಲೈ. 21): ಕಾಡು ಪ್ರಾಣಿಗಳು ನಾಡಿನ ಕಡೆಗೆ ಬಾರದಂತೆ ಅರಣ್ಯ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡರೂ ಸಹ ಕಾಡಂಚಿನ ಗ್ರಾಮಗಳಿಗೆ ಪ್ರಾಣಿಗಳು ಬರುವುದು ಮಾತ್ರ ತಪ್ಪಿಲ್ಲ. ಕಾಡಿನಿಂದ ಹೊರ ಬರಲು ವನ್ಯಜೀವಿಗಳು ಪ್ರಯತ್ನ ನಡೆಸುತ್ತಲೇ ಇರುತ್ತವೆ. ಇಂತಹದೇ ಒಂದು ಪ್ರಕರಣ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದ್ದು, ಗಂದು ಆನೆಯೊಂದು ಕಾಡಿನಿಂದ ಹೊರಬರಲು ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನ್ನು ತನ್ನ ದಂತಗಳಿಂದಲೇ ಮುರಿದು ಹಾಕಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದೇ ವೇಳೆ ಕರ್ನಾಟಕ ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಗಜೆಪಡೆಯೊಂದರ ಬಿಂದಾಸ್ ವಾಕಿಂಗ್ ವಿಡಿಯೋ ಸಹ ವೈರಲ್ ಆಗಿದೆ. ಬಂಡೀಪುರ ಹುಲಿರಕ್ಷಿತಾರಣ್ಯದ ಹೆಡಿಯಾಲ ವಲಯದ ಕಾಡಂಚಿನಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಹಾಕಲಾಗಿದೆ.

ಕಾಡಿನಿಂದ ಹೊರಬರಲು ಮುಂದಾದ ಗಂಡಾನೆಯೊಂದು ಈ ರೈಲ್ವೆ ಕಂಬಿಗಳನ್ನು ತನ್ನ ದಂತಗಳಿಂದಲೇ ಮುರಿದು ಹಾಕಲು ಯತ್ನಿಸಿದೆ. ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ನಿವೃತ್ತ ಅರಣ್ಯಾಧಿಕಾರಿಯೊಬ್ಬರು ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದು, ಇದೀಗ ಇತರ ಸಾಮಾಜಿಕ ಜಾಲತಾಣಗಳಲ್ಲು ವೈರಲ್ ಆಗಿದೆ.ಆನೆ ಬುದ್ದಿವಂತ ಪ್ರಾಣಿ . ಆದರೂ, ಬ್ಯಾರಿಕೇಡ್ ಗಳ ಮೂಲಕ ನುಸುಳಲು ಪ್ರಯತ್ನಿಸುವಾಗ ಸಿಲುಕಿ ಹಾಕಿಕೊಂಡ ನಿದರ್ಶನಗಳಿವೆ ಎನ್ನುತ್ತಾರೆ ಹಿರಿಯ ಪತ್ರಕರ್ತ, ಪರಿಸರವಾದಿ ಜೋಸೆಫ್ ಹೂವರ್

ಕಳೆದ ತಿಂಗಳು ಸಹ ಹೆಚ್.ಡಿ.ಕೋಟೆ ತಾಲೋಕು ನಡಾಡಿ ಗ್ರಾಮದ ವಸ್ತಿಹಳ್ಳದ ಬಳಿ ಕಾಡಾನೆಯೊಂದು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ  ಸಿಲುಕಿಕೊಂಡಿತ್ತು. ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ ತೂರಿ ಹೋಗಲು ಯತ್ನಿಸಿದಾಗ ಆನೆಯ ಹೊಟ್ಟೆ ಭಾಗ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಕೆಳ ಭಾಗದಲ್ಲಿ ಸಿಲುಕಿ ಗಂಟೆಗಟ್ಟಲೆ ಒದ್ದಾಡಿತ್ತು. ಈ ವಿಡಿಯೋ ಸಹ ವೈರಲ್ ಆಗಿತ್ತು.

ಇದನ್ನೂ ಓದಿ : ಕೊರೋನಾ ಸೋಂಕು ತಡೆಗೆ ಜಾರಿಗೆ ಬಂತು ದಂಡ ಪ್ರಯೋಗ : ಈ ಊರಿಗೆ ಯಾರೆ ಬಂದರೂ ಐದು ಸಾವಿರ ರೂಪಾಯಿ ದಂಡ

ಇನ್ನೊಂದೆಡೆ ಕರ್ನಾಟಕ ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಕಾಡಾನೆಗಳ ಬಿಂದಾಸ್ ವಾಕಿಂಗ್ ದೃಶ್ಯವೂ ಸಹ ವೈರಲ್ ಆಗಿದೆ

ಮೂರು ಮರಿಯಾನೆಗಳು  ಸೇರಿದಂತೆ ಒಂಭತ್ತು ಆನೆಗಳ ಈ  ಹೆದ್ದಾರಿಯಲ್ಲಿ ಸಂಚರಿಸುವ ದೃಶ್ಯವನ್ನು ವಾಹನ ಸವಾರರೊಬ್ಬರು ತಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
Published by:G Hareeshkumar
First published: