HOME » NEWS » District » A DANGER TO THE STATE IF THE YEDDYURAPPA LED GOVERNMENT DOES NOT END SAYS VATAL NAGARAJ VTC MAK

ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಯಾಗದಿದ್ದರೆ ರಾಜ್ಯಕ್ಕೆ ಅಪಾಯ; ವಾಟಾಳ್ ನಾಗರಾಜ್

ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪ ನನ್ನ ಖಾತೆಗೆ ಸಿಎಂ ಬಿಎಸ್​ವೈ ಕೈ ಹಾಕಬಾರದು ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ. ಸಿಎಂ ನಡೆಯನ್ನು  ಬೆಂಬಲಿಸಲು ಕೆಲವರು ಹೊರಟಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಅಲ್ಲ, ಸಿಎಂ‌ ಅಸ್ತಕ್ಷೇಪವೂ ಸರಿಯಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

news18-kannada
Updated:April 2, 2021, 8:16 PM IST
ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಯಾಗದಿದ್ದರೆ ರಾಜ್ಯಕ್ಕೆ ಅಪಾಯ; ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್.
  • Share this:
ಚಿತ್ರದುರ್ಗ: "ರಾಜ್ಯದಲ್ಲಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕಂಪನಿ ಸರ್ಕಾರ ಅದು ವ್ಯಾಪಾರದ ಅಂಗಡಿ ಮಾಡಿಕೊಂಡು, ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಆಗಿದೆ. ಬಿಎಸ್​ವೈ ಸರ್ಕಾರ ತೊಲಗಬೇಕು, ಇಲ್ಲವಾದಲ್ಲಿ ರಾಜ್ಯಕ್ಕೆ ಅಪಾಯ ಆಗುತ್ತದೆ. ಮಠಾಧೀಶರು ಯಡಿಯೂರಪ್ಪಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು" ಎಂದು ಚಿತ್ರದುರ್ಗದಲ್ಲಿ ಸಿಎಂ ಯಡಯೂರಪ್ಪ ವಿರುದ್ದ ವಾಟಳ್ ನಾಗರಾಜ್ ವಾಗ್ದಾಳಿ‌ ನಡೆಸಿದ್ದಾರೆ. ಇಂದು ಗುಡ್ ಪ್ರೈಡೆ ಹಿನ್ನಲೆ ಚಿತ್ರದುರ್ಗ ನಗರದ ಹೊರ ವಲಯದ ಸೀಬಾರ ಬಳಿ ಇರುವ ಮಾಜಿ ಸಿಎಂ ಎಸ್. ನಿಜಲಿಂಗಪ್ಪ  ಸಮಾಧಿಗೆ ಹಾರ ಹಾಕಿ ಅವರ ಕಾರ್ಯವೈಖರಿ ಆದರ್ಶಗಳನ್ನ ನೆನಪು ಮಾಡಿಕೊಂಡ ವಾಟಳ್ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಯಡಿಯೂರಪ್ಪ ಸರ್ಕಾರದ ಬಗ್ಗೆ ಅಸಮಾಧಾನ ಹೊರಹಾಕಿರುವ ವಾಟಾಳ್ ನಾಗರಾಜ್, "ಬಿಎಸ್​ವೈ ಸರ್ವಾಧಿಕಾರಿ. ಅವರು ಎಲ್ಲಕ್ಕೂ ಕೈ ಹಾಕುತ್ತಾರೆ. ಆದ್ದರಿಂದ ಅವರ ಅಸ್ತಕ್ಷೇಪದ ಕುರಿತು ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ನಿಲುವು ಸರಿಯಿದೆ. ಅವರ ಖಾತೆಗೆ ಕೈ ಹಾಕಿ ಬೀಗರಿಗೆ, ಬೇಕಾದವರಿಗೆ ಹಣ ಕೊಟ್ಟರೆ ಇವರ್ಯಾಕೆ ಮಂತ್ರಿ ಆಗಿರಬೇಕು. ಮಂತ್ರಿ ಮಂಡಲದಲ್ಲಿ ಮಂತ್ರಿಗೆ ಅವರದೆ ಆದ ಸ್ವತಂತ್ರ ಇದ್ದೇ ಇದೆ. ಆದ್ದರಿಂದ ಕೆ.ಎಸ್. ಈಶ್ವರಪ್ಪ ವಾದವನ್ನು ನಾನು ಬೆಂಬಲಿಸುತ್ತೇನೆ" ಎಂದಿದ್ದಾರೆ.

ಇನ್ನೂ ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪ ನನ್ನ ಖಾತೆಗೆ ಸಿಎಂ ಬಿಎಸ್​ವೈ ಕೈ ಹಾಕಬಾರದು ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ. ಸಿಎಂ ನಡೆಯನ್ನು  ಬೆಂಬಲಿಸಲು ಕೆಲವರು ಹೊರಟಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಅಲ್ಲ, ಸಿಎಂ‌ ಅಸ್ತಕ್ಷೇಪವೂ ಸರಿಯಲ್ಲ ಅದು ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Coronavirus Guidelines: ಥಿಯೇಟರ್​ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್; ಜಿಮ್, ಈಜುಕೊಳ ಬಂದ್

ಅಷ್ಟೆ ಅಲ್ಲದೇ ರಾಜ್ಯದಲ್ಲಿರುವ ಬಿಎಸ್​ವೈ ನೇತೃತ್ವದ ಸರ್ಕಾರ ಕಂಪನಿ ಸರ್ಕಾರ, ಅದೊಂದು ವ್ಯಾಪಾರದ ಅಂಗಡಿ ಮಾಡಿಕೊಂಡಿದ್ದು ವರ್ಗಾವಣೆ ರೇಟ್ ಫಿಕ್ಸ್ ಆಗಿದೆ. ಬಿ.ಎಸ್. ಯಡಿಯೂರಪ್ಪ ಕಂಪನಿ ಹೋಗಬೇಕು. ಇಲ್ಲವಾದಲ್ಲಿ ರಾಜ್ಯಕ್ಕೆ ಅಪಾಯ ಎದುರಾಗುತ್ತದೆ. ಇವರು ಈ ಕೂಡಲೇ ಹೋಗಬೇಕು‌ ಇಲ್ಲವಾದಲ್ಲಿ ಅರಾಜಕತೆ ಶುರುವಾಗುತ್ತೆ. ರಾಜ್ಯದಲ್ಲಿ ಬೇಗ ಚುನಾವಣೆ ಬರಬೇಕು,ಅರಾಜಕತೆ ಸೃಷ್ಠಿ ಆಗಲು ಬಿಡಬಾರದು ಎಂದಿದ್ದಾರೆ.
Youtube Video

ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, "ಜಾರಕಿಹೊಳಿಯನ್ನ ಬಂದಿಸುತ್ತಾರೋ ಇಲ್ಲವೋ ಆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಆದರೇ ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು. ಈಗಿನ ತನಿಖೆಯನ್ನ ಬಹಳ ಜವಬ್ದಾರಿಯಿಂದ ಮಾಡುತ್ತಿದ್ದಾರೆ. ಆದರೂ ಉನ್ನತ ಮಟ್ಟದ ಸಮಗ್ರ ತನಿಖೆ ಆಗಬೇಕಿದೆ. ಜಾರಕಿಹೊಳಿಯ ಸಿಡಿ ಎಲ್ಲಿಂದ ಬಂತು? ಹೇಗೆ ಬಂತು? ಎಂದು ಸಮಗ್ರ ತನಿಖೆ ಆಗಬೇಲೇ ಬೇಕು" ಎಂದು ಒತ್ತಾಯ ಮಾಡಿದ್ದಾರೆ.
Published by: MAshok Kumar
First published: April 2, 2021, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories