ಮೈಸೂರು; ಕೇರಳದಲ್ಲಿ ಗರ್ಭಿಣಿ ಕಾಡಾನೆಯೊಂದು ಪಟಾಕಿ ತುಂಬಿದ ಪೈನಾಪಲ್ ಸೇವಿಸಿ ಸಾವನ್ನಪ್ಪಿದ ಘಟನೆ ಇಡೀ ದೇಶದ ಜನರ ಮನ ಕಲಕಿತ್ತು. ಇದೀಗ ಅದೇ ಮಾದರಿಯ ಘಟನೆಯೊಂದು ಮೈಸೂರಿನಲ್ಲೂ ನಡೆದಿದೆ. ಕಿಡಿಗೇಡಿಗಳು ಮೇವಿನಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ಸೇವಿಸಿದ ಹಸುವೊಂದು ತೀವ್ರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದೆ.
ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದ ನರಸಿಂಹೇಗೌಡ ಎಂಬುವವರಿಗೆ ಸೇರಿದ ಹಸು ಯಾರೋ ಇಟ್ಟಿದ್ದ ಆಹಾರ ಸೇವಿಸಿದೆ. ಆದರೆ, ಆ ಆಹಾರದಲ್ಲಿ ಕಿಡಿಗೇಡಿಗಳು ಸಿಡಿಮದ್ದು ತುಂಬಿಟ್ಟಿದ್ದಾರೆ. ಹಸು ಆಹಾರ ಸೇವಿಸುತ್ತಿದ್ದಂತೆ ಅದು ಬಾಯಿಯೊಳಗೆ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಹಸುವಿನ ಬಾಯಿ ಸಂಪೂರ್ಣ ಛಿದ್ರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಹಸುವಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗೆ ಕಿಡಿಗೇಡಿಗಳು ಆಹಾರದಲ್ಲಿ ಸಿಡಿಮದ್ದು ಸೇರಿಸಿ ಇಟ್ಟಿದ್ದಾರೆ. ಮೂಕ ಪ್ರಾಣಿ ರೋಧನ ಕಂಡು ಎಲ್ಲರೂ ಮಮಲ ಮರುಗಿದ್ದಾರೆ. ಸಿಡಿಮದ್ದು ಇರಿಸಿದ್ದ ಕಿಡಿಗೇಡಿಗಳಿಗೆ ಪ್ರಾಣಿಪ್ರಿಯರು ಹಿಡಿಶಾಪ ಹಾಕಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಇದನ್ನು ಓದಿ: ಗರ್ಭಿಣಿ ಆನೆಯ ದುರಂತ ಸಾವು ಪ್ರಕರಣ; ಕೇರಳ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ