Police Raid: ಹಣ ಕೇಳಲು ಬಂದವರನ್ನ ಮನೆಯೊಳಗೆ ಕೂಡಿ ಹಾಕಿದ ರೌಡಿ ಶೀಟರ್, ಬಡ್ಡಿ ವ್ಯಾಪಾರದ ಅಸಲಿಯತ್ತು ಹೀಗಿರುತ್ತೆ ನೋಡಿ

People house arrested by Rowdy Sheeter: ಹಣ ಕೇಳಲು ವಾಪಾಸ್ ಬಂದಿದ್ದ ಅಂಬಿಕಾ ಅವ್ರ ಮೊಬೈಲ್ ಕಸಿದುಕೊಂಡಿದ್ದ ಸಿಕಂದರ್, ಹೊರಗೆ ಹೋಗದಂತೆ ಮನೆಯಲ್ಲೆ ಇರಿಸಿಕೊಂಡಿದ್ದಾನೆ. ಪತ್ನಿಯನ್ನ ಹುಡುಕಿಕೊಂಡು ಬಂದಿದ್ದ ನಿಶ್ಚಲ್ ನನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ, ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದ.

ರೌಡಿಶೀಟರ್ ಸಂತ್ರಸ್ತರನ್ನು ಕೂಡಿ ಹಾಕಿದ್ದ ಮನೆ

ರೌಡಿಶೀಟರ್ ಸಂತ್ರಸ್ತರನ್ನು ಕೂಡಿ ಹಾಕಿದ್ದ ಮನೆ

  • Share this:
ಕೋಲಾರ: ಸಾಲ ಕೊಡಿಸೊದಾಗಿ ನಂಬಿಸಿ, ದಂಪತಿಗಳ ಬಳಿ ಲಕ್ಷ ಲಕ್ಷ ಹಣ ಪೀಕಿದ್ದ ರೌಡಿಶೀಟರ್, ಕೊನೆಗೆ ದಂಪತಿಗಳನ್ನೆ 8 ತಿಂಗಳ ಕಾಲ ಗೃಹಬಂದನಲ್ಲಿ (House Arrest) ಇರಿಸಿದ್ದ ಘಟನೆ, ಕೋಲಾರದ  ಕೆಜಿಎಪ್ (KGF) ನಗರದ ಬಿ.ಜಿ.ಎಂ.ಎಮ್ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೆಜಿಎಫ್ ನ ಉರಿಗಾಂ  ಪೇಟೆಯ ಬಿ.ಜಿ.ಎಂ.ಎಲ್ ಬಡಾವಣೆಯ ವಸತಿ ಗೃಹದಲ್ಲಿ ವಾಸವಿರೋ ರೌಡಿಶೀಟರ್ ಸಿಕಂದರ್(Rowdy Sheeter), ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೆಲ ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡ್ತಿದ್ದಾನೆ.  ಬೆಂಗಳೂರು ಮೂಲದ ಅಂಬಿಕಾ ಹಾಗು ನಿಶ್ಚಲ್ ದಂಪತಿಗಳು (Couple Locked) ಕೆಲ ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದು, ಅದನ್ನ ತೀರಿಸೋಕೆ, ರೌಡಿಶೀಟರ್ ಸಿಕಂದರ್ ಬಳಿ ಕಡಿಮೆ ಬಡ್ಡಿಗೆ  ಹಣ ಕೇಳಿದ್ದಾರೆ. ಅವರೊಂದಿಗೆ  ಸಲುಗೆ ಬೆಳೆಸಿಕೊಂಡಿದ್ದ ಸಿಕಂದರ್, ಇಬ್ಬರ ಬಳಿಯಿಂದಲೂ 54 ಲಕ್ಷ ಹಣ ಹಾಗು ಚಿನ್ನಾಭರಣ ಪಡೆದು ಕೊಂಡಿದ್ದಾನಂತೆ.

ಹಣ ಕೇಳಿದ್ದೇ ತಪ್ಪಾಗಿಹೋಯ್ತು

ಕಳೆದ ಪೆಬ್ರವರಿ ತಿಂಗಳಲ್ಲಿ ಹಣ ಕೇಳಲು ವಾಪಾಸ್ ಬಂದಿದ್ದ ಅಂಬಿಕಾ ಅವ್ರ ಮೊಬೈಲ್ ಕಸಿದುಕೊಂಡಿದ್ದ ಸಿಕಂದರ್, ಹೊರಗೆ ಹೋಗದಂತೆ ಮನೆಯಲ್ಲೆ ಇರಿಸಿಕೊಂಡಿದ್ದಾನೆ. ಪತ್ನಿಯನ್ನ ಹುಡುಕಿಕೊಂಡು ಬಂದಿದ್ದ ನಿಶ್ಚಲ್ ನನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ, ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನಂತೆ, ಇನ್ನು ಹಣದ ವ್ಯವಹಾರದಲ್ಲಿ ಅದೇ ಸ್ಥಳದಲ್ಲಿ ಬಂಧಿಯಾಗಿದ್ದ  ಕುಮಾರ್ ಎನ್ನುವರ ಬಳಿಯಿದ್ದ ಫೋನ್ ಮೂಲಕ, ಅಂಬಿಕಾ ತನ್ನ ಅಣ್ಣ ನಾಗರಾಜ್ ರಿಗೆ ಪೋನ್‌ ಕರೆ ಮಾಡಿ ಗೃಹ ಬಂಧನದಲ್ಲಿ ಇರಿಸಿದ್ದ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಷೆತ್ತುಕೊಂಡ ನಾಗರಾಜ್, ಕೆಜಿಎಫ್ ನ ಉರಿಗಾಂ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಅಕ್ಟೋಬರ್ 1 ರಂದು  ಸಿಕಂದರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಅಂಬಿಕಾ ಹಾಗು ನಿಶ್ಚಲ್ ಇಬ್ಬರನ್ನು ರಕ್ಷಿಸಿದ್ದಾರೆ.

ಪೊಲೀಸರ ದಾಳಿಯಿಂದ ಬಚಾವ್

ಕೆಜಿಎಫ್ ಪೊಲೀಸರ ದಾಳಿ ವೇಳೆ ಇನ್ನು ಮೂವರು ಬಂಧಿಯಾಗಿದ್ದು ಬೆಳಕಿಗೆ ಬಂದಿದೆ.  ತಮಿಳುನಾಡು ಮೂಲದ ಜಾನ್ಸಿ ಹಾಗು ಅವರ ಅಣ್ಣ ಅರಿವಳಗನ್ ಹಾಗು ಮತ್ತೊಬ್ಬ ಕುಮಾರ್ ಎನ್ನುವರನ್ನು ಹಣದ ವ್ಯವಹಾರವಾಗಿ ಗೃಹ ಬಂಧನದಲ್ಲಿ ಇರಿಸಿಕೊಂಡಿದ್ದ.   ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಯಲ್ಲಿ ಸರ್ಕಾರಿ "ಡಿ" ಗ್ರೂಪ್  ಕೆಲಸ ಕೊಡಿಸುವುದಾಗಿ ಕುಮಾರ್ ಬಳಿ 3 ಲಕ್ಷ ಹಣವನ್ನ ರೌಡಿಶೀಟರ್ ಸಿಕಂದರ್ ಪಡೆದುಕೊಂಡಿದ್ದ.

ಇದನ್ನೂ ಓದಿ: ಮಾಗಡಿಯಲ್ಲಿ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್ ಅಧಿಕಾರಿಗಳು

ಹಣ ವಾಪಸ್ ಕೇಳಲು ಬಂದಾಗ ಕುಮಾರ್ ನನ್ನು ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿ ಕೂಡಿಹಾಕಿದ್ದಾನೆ ಎಂದು, ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.  ಪೊಲೀಸರ ದಾಳಿ ವೇಳೆ ರೌಡಿಶೀಟರ್ ಸಿಕಂದರ್ ಮನೆಯಲ್ಲಿ 50 ಕ್ಕೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಘಟನೆ ಸಂಬಂದ ಸಿಕಂದರ್ ನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರೌಡಿ ಶೀಟರ್ ಸಂತ್ರಸ್ತರನ್ನು ಕೂಡಿ ಹಾಕಿದ್ದು ಇಲ್ಲೇ


ಪ್ರಕರಣ ಬೆಳಕಿಗೆ ಬಂದದ್ದು ಹೇಗೆ ?

ರೌಡಿಶೀಟರ್ ಸಿಕಂದರ್ ಮನೆಯಲ್ಲಿ ಬಂಧಿಯಾಗಿದ್ದ, ಅಂಬಿಕಾ, ಪಕ್ಕದ ಕೋಣೆಯಲ್ಲಿದ್ದ ಕುಮಾರ್ ಬಳಿ ಪೋನ್ ಪಡೆದುಕೊಂಡು ಅಣ್ಣ ನಾಗರಾಜ್ ಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಗರಾಜ್​ ನೀಡಿದ ದೂರಿನ ಮೇರೆಗೆ ಕೆಜಿಎಫ್​ನ ಉರಿಗಾಂ ಪೇಟೆ ಪೊಲೀಸರು, ಸಿಕಂದರ್ ಮನೆ ಮೇಲೆ ದಾಳಿ ಮಾಡಿ ವಿಚಾರಣೆ ನಡೆಸಿದಾಗ ಮನೆಯಲ್ಲಿ ಬೆಂಗಳೂರು ಮೂಲದವರಾದ ಅಂಬಿಕಾ, ನಿಶ್ಚಲ್, ತಮಿಳುನಾಡಿನ ಜಾನ್ಸಿ,  ಅರಿವಳಗನ್, ಹಾಗು ಕುಮಾರ್  ಎಂಬುವವರು ಪತ್ತೆಯಾಗಿದ್ದಾರೆ.

ಹಣದ ವಿಚಾರವಾಗಿ ಕೆಲವರನ್ನು ತಂದು ಒತ್ತೆ ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದ್ದರೆ ಮತ್ತೆ ಕೆಲವರನ್ನು ಜೀತದಾಳುಗಳನ್ನಾಗಿ ಇರಿಸಿಕೊಂಡಿದ್ದ ಎಂಬುವುದು ಗೊತ್ತಾಗಿದೆ.  ಸದ್ಯ ಈ ಸಂಬಂಧ ಕೆಜಿಎಫ್​ ತಹಶೀಲ್ದಾರ್ ರವರಿಗೂ ದೂರು ನೀಡಲಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಬಂಧನದಲ್ಲಿದ್ದವರನ್ನು ಪೊಲೀಸರು ಬಿಡಿಸಿದ್ದರಿಂದ ಐದು ಜನರು ನೆಮ್ಮದಿಯಾಗಿ ಹೊರಬಂದಿದ್ದಾರೆ. ಆದರೆ ರೌಡಿಶೀಟರ್​ ಆಗಿರುವ ಕಾರಣ ಅವರ ಬಗ್ಗೆ ಯಾರೊಬ್ಬರೂ ಮಾತನಾಡಲು ಸಿದ್ದರಿಲ್ಲ ಎಂದು ಕುಮಾರ್ ಎನ್ನುವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲಬುರ್ಗಿಯ ಕುಖ್ಯಾತ ರೌಡಿ ಶೀಟರ್ ಕೆಂಚ್ಯಾಶಾಣ್ಯ ಹಡಗಿಲ್ ಚಾಮರಾಜನಗರಕ್ಕೆ ಗಡಿಪಾರು

ಒಟ್ಟಿನಲ್ಲಿ ಬಡ್ಡಿ ವ್ಯವಹಾರ ಮಾಡುವ ರೌಡಿಶೀಟರ್​  ಮನೆಯಲ್ಲಿ, ಜನರು ಗೃಹ ಬಂಧನದಲ್ಲಿ ಇದ್ದರೂ, ನೆರೆಹೊರೆಯ ಜನರು ಈ ಬಗ್ಗೆ ತಿಳಿದಿದ್ದರೂ ಮೂಕ ಪ್ರೇಕ್ಷಕರಾಗಿದ್ದಾರೆ, ಯಾರೂ ತಿಳಿಸಿಲ್ಲ. ನಮ್ಮಲ್ಲಿ ಪೊಲೀಸ್ ವ್ಯವಸ್ಥೆ ಇಷ್ಟು ಸದೃಢವಾಗಿದ್ದರೂ, ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಮುಲಾಜಿಲ್ಲದೆ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಪೊಲೀಸರ ದಾಳಿ ವೇಳೆ ಮಾರಕಾಸ್ತ್ರಗಳು ಸಿಕ್ಕಿದ್ದು, ಈತ ಏನೆಲ್ಲಾ ಮಾಡ್ತಿದ್ದ ಎಷ್ಟೆಲ್ಲಾ ವ್ಯವಹಾರ ಇಟ್ಟುಕೊಂಡಿದ್ದ ಅನ್ನೋದು ಹೆಚ್ಚಿನ ತನಿಖೆಯಿಂದಷ್ಟೆ  ಹೊರಬೀಳಬೇಕಿದೆ.
Published by:Soumya KN
First published: