ವೃತ್ತಿಯಲ್ಲಿ ಪ್ರಾಂಶುಪಾಲ ಪ್ರವೃತ್ತಿಯಲ್ಲಿ ರೈತ; ಬರಡು ಭೂಮಿಯನ್ನು ಬಂಗಾರವಾಗಿಸಿದ ಭಗೀರಥ ಈತ

35 ಅಡಿ ಆಳದ ಬಾವಿ ಇಂದು 110 ಬೈ 100 ಅಡಿ ಉದ್ದಗಲದ ಕೆರೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಇಲ್ಲಿನ ರೈತರ ಬೋರ್ವೆಲ್ ಗಳು ಕೂಡ ರಿಚಾರ್ಜ್ ಆಗಿ ಮೊದಲು 700 ರಿಂದ 800 ಅಡಿ ನೆಲ ಅಗೆದರು ಸಿಗದ ನೀರು ಈಗ ಕೇವಲ 250 ಅಡಿಗೆ ಸಿಗುತ್ತಿದೆ. ಹೀಗಾಗಿ ಕಮತೆ ಅವರ ಈ ಕಾರ್ಯವನ್ನು ಅಕ್ಕಪಕ್ಕದ ರೈತರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

ತಾನೇ ನಿರ್ಮಿಸಿದ ಕೆರೆಯಲ್ಲಿ ಸಣ್ಣಪ್ಪ ಕಮತೆ.

ತಾನೇ ನಿರ್ಮಿಸಿದ ಕೆರೆಯಲ್ಲಿ ಸಣ್ಣಪ್ಪ ಕಮತೆ.

  • Share this:
ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ರೈತನ ಕೃಷಿಗಾಥೆ. ಚಿಕ್ಕೋಡಿ ತಾಲೂಕು ಮೊದಲೇ ಬೌಗೋಳಿಕವಾಗಿ ಸಾಕಷ್ಚು ಎರಿಳಿತಗಳಿಂದ ಕೂಡಿರುವ ಪ್ರದೇಶ. ಒಂದು ಕಡೆ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದರೆ ಇನ್ನೋಂದು ಕಡೆ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಕುಡಿಯಲು ಸಹ  ನೀರು ಸಿಗದೆ ಇರುವ ಪರಿಸ್ಥಿತಿ ಉಂಟಾಗಿರುತ್ತೆ. ಇಂತಹ ಎರಿಳಿತ ಮಧ್ಯೆ ರೈತರು ಇಲ್ಲಿ ಕೃಷಿ ಮಾಡುವುದು ದುಸ್ಥರ. ಆದರೆ, ಇಂತಹ ಊರಲ್ಲೊಬ್ಬ ವ್ಯಕ್ತಿ ಬರಡು ಭೂಮಿಯಲ್ಲಿ ನೀರುಕ್ಕಿಸಿ ಯಶೋಗಾಧೆ ಬರೆದಿದ್ದಾನೆ.

ಇವರ ಹೆಸರು ಸಣ್ಣಪ್ಪ ಕಮತೆ. ತಮ್ಮ ಪೂರ್ವಜರಿಂದ ಪಡೆದುಕೊಂಡಿದ್ದು ಕೇವಲ 12 ಎಕರೆ ಬರಡು ಭೂಮಿ. ಮಳೆಯಾದರೆ ಮಾತ್ರ ನೀರು ನೀರಿದ್ದರೆ ಮಾತ್ರ ಅಲ್ಲಿ ಬೆಳೆ ಎಂಬಂತೆ ಆಗಿ ಹೋಗಿತ್ತು ಇವರ ಪರಿಸ್ಥಿತಿ. ಹೀಗಾಗಿ ಇಂಜಿನಿಯರಿಂಗ್ ಓದಿ ಪಿಹೆಚ್‌ಡಿ ಪದವಿ ಪಡೆದು ಕಾಲೇಜು ಪ್ರಿನ್ಸಿಪಾಲರಾಗಿದ್ದ ಸನ್ನಪ್ಪ ಕಮತೆ ಕಳೆದ 3 ವರ್ಷಗಳ ಹಿಂದೆ ತಮ್ಮ ಒಲವನ್ನ ಕೃಷಿಕಡೆಗೆ ತೋರಿಸಿದರು. ಅಲ್ಲಿಂದ ಅವರ ಬಾಳಷ್ಟೆ ಅಲ್ಲ ಸನ್ನಪ್ಪ ಕಮತೆ ಅಕ್ಕ ಪಕ್ಕದಲ್ಲಿರುವ 100 ಎಕರೆ ಪ್ರದೇಶಗಳ ಹತ್ತಾರು ರೈತರ ಬಾಳು ಕೂಡ ಬಂಗಾರವಾಗಿದೆ.

ಮೊದಲು ಅವರು ಪಾಲಕರು ಗುಡ್ಡ ಪ್ರದೇಶದ ಗದ್ದೆಯಲ್ಲಿ ಯಾವ ಬೆಳೆಯನ್ನು ಬೆಳೆಯಲಾಗದ ಸ್ಥಿತಿಯನ್ನು ನೋಡಿ ಬೇಸತ್ತಿದ್ದ ಸನ್ನಪ್ಪ ಕಮತೆ ತಾವೇ ಕೃಷಿ ಮಾಡಲು ಪ್ರಾರಂಭ ಮಾಡಿದ್ದರು. ಹೀಗೆ ಮುಂದಾದಾಗ ಅವರಿಗೆ ಮೊದಲು ಹೊಳೆದ ಉಪಾಯವೇ ಬಾವಿ ತೋಡುವುದು. ತಮ್ಮ ಗದ್ದೆಯ ಅಂಚಿನಲ್ಲಿ ಇಳಿಜಾರು ಪ್ರದೇಶದಲ್ಲಿ ಒಂದು ಬಾವಿಯನ್ನು ತೆಗೆಯಲು ಪ್ರಾರಂಭ ಮಾಡಿದ್ದರು. ಸನ್ನಪ್ಪನವರ ಕಾರ್ಯ ಕ್ಷಮತೆಯ ಫಲಕ್ಕೆ  ಕಲ್ಲು ಕ್ವಾರಿಯ ಮಧ್ಯದಲ್ಲಿ ಕೊರೆದ ಬಾವಿಯಲ್ಲಿ ನೀರು ಜಿನುಗಲು ಪ್ರಾರಂಭವಾಯಿತು.

35 ಅಡಿ ಆಳದ ಬಾವಿ ಇಂದು 110 ಬೈ 100 ಅಡಿ ಉದ್ದಗಲದ ಕೆರೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಇಲ್ಲಿನ ರೈತರ ಬೋರ್ವೆಲ್ ಗಳು ಕೂಡ ರಿಚಾರ್ಜ್ ಆಗಿ ಮೊದಲು 700 ರಿಂದ 800 ಅಡಿ ನೆಲ ಅಗೆದರು ಸಿಗದ ನೀರು ಈಗ ಕೇವಲ 250 ಅಡಿಗೆ ಸಿಗುತ್ತಿದೆ. ಹೀಗಾಗಿ ಕಮತೆ ಅವರ ಈ ಕಾರ್ಯವನ್ನು ಅಕ್ಕಪಕ್ಕದ ರೈತರು ಸಹ ಮೆಚ್ಚುತ್ತಾರೆ ಮತ್ತು ಅವರಿಗೂ ಸನ್ನಪ್ಪ ಕಮತೆ ಆಧಾರ ಸ್ತಂಬವಾಗಿ ನಿಂತಿದ್ದಾರೆ.

ಬಾವಿ ಕೊರೆಸಿದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ನೀರಿನ ಮೂಲವನ್ನು ಹುಡುಕಿಕೊಂಡ ಸನ್ನಪ್ಪ ಕಮತೆಯವರು ಡ್ರೀಪ್  ಇರಿಗೇಷನ್ ಮಾಡುವುದರ ಮೂಲಕ ನೀರು ಫೋಲಾಗಿ ಹೋಗುವುದನ್ನು ತಡೆದಿದ್ದಾರೆ. ಅಲ್ಲದೆ, ಒಂದು ವೇಳೆ ನೀರು ಪೋಲಾದರು ಸಹ ಆ ನೀರು ಮತ್ತೆ ಬಾವಿಗೆ ಬಂದು ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಟ್ಟದ ಮೇಲೆ ಹೆಚ್ಚುವರಿಯಾಗಿ ಬಿದ್ದ ನೀರು ಮತ್ತೆ ಬಾವಿಗೆ ಸೇರುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ :ಫರ್ಮಾಸ್ಯುಟಿಕಲ್ ವಿತರಕಿಗೆ ಲೈಂಗಿಕ ಕಿರುಕುಳ ಆರೋಪ: ಹುಬ್ಬಳ್ಳಿ- ಧಾರವಾಡ ಪಾಲಿಕೆ ವೈದ್ಯಾಧಿಕಾರಿ ಮೇಲೆ ಹಲ್ಲೆ

ಇನ್ನು ಈ ಕೆರೆಯಿಂದಾಗಿ ಆ ಪ್ರದೇಶ ಸುತ್ತಲು ಇರುವ ಬೋರ್‌‌ವೆಲ್‌ ಗಳೂ ರಿಜಾರ್ಜ್‌ ಆಗಿವೆ. ಮಳೆಗಾಲದಲ್ಲಿ ಸುತ್ತಲು ಬಿದ್ದ ಮಳೆ ನೀರು ಈ ಕೆರೆಗೆ ಬಂದು ಸಂಗ್ರಹವಾಗುತ್ತದೆ ಈಡಿ ಬೇಸಿಗೆಯಲ್ಲಿ ಇದೆ ನೀರು ಮತ್ತೆ ಇದೆ ಗದ್ದೆಗೆ ಉಪಯೋಗ ಆಗುತ್ತದೆ. ಒಟ್ಟಿನಲ್ಲಿ ನೌಕರಿ ಸಿಕ್ಕರೆ ಸಾಕು ಕೃಷಿ ಉಸಾಬರನೆ ಬೇಡಾ ಎನ್ನುವವ ಕಾಲದಲ್ಲಿ ಸಣ್ಣಪ್ಪಾ ಅವರು ನೌಕರಿ ಜೋತೆ ಕೃಷಿ ಮಾಡಿ ಹತ್ತಾರಯ ರೈತರಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ.
First published: