ಆಹಾರ ಎಂಜಲು ಮಾಡಿದ ಪ್ರಕರಣ; ಹಾಸನದಲ್ಲಿ ಹೋಟೆಲ್ ಸೀಲ್‌ಡೌನ್ ಮಾಡಿ ತನಿಖೆ ಆರಂಭ

ಓರ್ವ ವ್ಯಕ್ತಿ ಹೋಟೆಲ್ ಒಳಗೆ ನಿಂತುಕೊಂಡು ಗ್ರಾಹಕರಿಗೆ ನೀಡಲು ಪಾತ್ರೆಯೊಳಗೆ ಸಂಗ್ರಹಿಸಿಟ್ಟಿರುವ ಆಹಾರವನ್ನು ಸ್ಟಿಕ್‍ನಿಂದ ಪದೇ ಪದೆ ತಿನ್ನುತ್ತಿದ್ದಾನೆ. ಇದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

news18-kannada
Updated:June 3, 2020, 7:45 AM IST
ಆಹಾರ ಎಂಜಲು ಮಾಡಿದ ಪ್ರಕರಣ; ಹಾಸನದಲ್ಲಿ ಹೋಟೆಲ್ ಸೀಲ್‌ಡೌನ್ ಮಾಡಿ ತನಿಖೆ ಆರಂಭ
ಸೀಲ್‌ಡೌನ್ ಮಾಡಲಾಗಿರುವ ಹೋಟೆಲ್‌.
  • Share this:
ಹಾಸನ ; ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಕುರಿತು ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ಸಂಬಂಧಪಟ್ಟ ಹೋಟೆಲ್‌ ಅನ್ನು ಸೀಲ್‍ಡೌನ್ ಮಾಡಿ ತನಿಖೆ ಆರಂಭಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ಅಲ್ಲದೆ ವೀಡಿಯೋ ವೈರಲ್ ಆಗಿದ್ದ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಏನಿದು ಪ್ರಕರಣ?:

ಓರ್ವ ವ್ಯಕ್ತಿ ಹೋಟೆಲ್ ಒಳಗೆ ನಿಂತುಕೊಂಡು ಗ್ರಾಹಕರಿಗೆ ನೀಡಲು ಪಾತ್ರೆಯೊಳಗೆ ಸಂಗ್ರಹಿಸಿಟ್ಟಿರುವ ಆಹಾರವನ್ನು ಸ್ಟಿಕ್‍ನಿಂದ ಪದೇ ಪದೆ ತಿನ್ನುತ್ತಿದ್ದಾನೆ. ಇದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನದ ದೊಡ್ಡ ಹೋಟೆಲ್‍ನಲ್ಲಿಯೇ ಈ ರೀತಿ ನಡೆದಿದ್ದು, ಹೋಟೆಲ್‍ಗಳಲ್ಲಿ ಈ ರೀತಿಯೂ ಮಾಡಲಾಗುತ್ತಿದೆ ಎಂದೂ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ಪೊಲೀಸರು ಹೋಟೆಲ್ ಪತ್ತೆಹಚ್ಚಿದ್ದು, ಹೋಟೆಲ್ ಮಾಲೀಕನಿಂದ ಮಾಹಿತಿ ಪಡೆಯುತ್ತಿದ್ದಾರೆ. ವಿಡಿಯೋದಲ್ಲಿ ಆಹಾರ ಎಂಜಲು ಮಾಡುತ್ತಿರುವ ವ್ಯಕ್ತಿ ಯಾರು? ಈ ವಿಡಿಯೋ ಯಾವಾಗ ಮಾಡಿದ್ದು ನಿಮಗೆ ಗೊತ್ತಾ? ಎಂಬೆಲ್ಲ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ

First published: June 3, 2020, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading