Belagavi: ಯುವಕನ ಮೇಲೆಯೇ ಅತ್ಯಾಚಾರ ಎಸಗಿದ ವಿಕೃತ ಕಾಮಿ; ಬೆಳಗಾವಿಯಲ್ಲೊಂದು ವಿಲಕ್ಷಣ ಘಟನೆ

ಜೀವ ಭಯದಿಂದ ಹೆದರಿದ್ದ ಯುವಕ  ಮೂರು ದಿನಗಳವರೆಗೂ ಯಾರಿಗೂ ತನ್ನ ಮೇಲಾದ ಅತ್ಯಾಚಾರದ ಕುರಿತು ಹೇಳಿರಲಿಲ್ಲ. ಬಳಿಕ ತನ್ನ ಮನೆಯವರ ಬಳಿ ತನ್ನ ಮೇಲಾದ ಅತ್ಯಾಚಾರದ ಕುರಿತು ನೀಡುತ್ತಿದ್ದಂತೆ, ಅಕ್ಟೋಬರ್ 8ರಂದು ಅಥಣಿ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣದ ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಒಂಟಿ ಮಹಿಳೆ ಮೇಲೆ ಅತ್ಯಾಚಾರ(Rape on single woman), ಯುವತಿ ಮೇಲೆ ಅತ್ಯಾಚಾರ (Rape on girl) ಎಂಬ ಸುದ್ದಿಗಳನ್ನ ನೀವು ಕೇಳಿರಬಹುದು, ಓದಿರಬಹುದು. ಆದ್ರೆ ಇಲ್ಲೊಬ್ಬ ವಿಕೃತಕಾಮಿ ಯಾವ ಮಟ್ಟಕ್ಕೆ ಇಳಿದಿದ್ದಾನೆ ಅಂದ್ರೆ, ನೀವು ಈ ಸುದ್ದಿಯನ್ನ ಓದಿದ್ರೆ ಒಂದು ಕ್ಷಣ ದಂಗಾಗಿ ಹೋಗುತ್ತಿರಿ. ಲಿಫ್ಟ್ ಕೋಡ್ತಿನಿ ಅಂತ ಹೇಳಿ ಯುವಕನ ಮೇಲೆಯೇ ಅತ್ಯಾಚಾರವೆಸಗಿ ಜೀವ ಬೆದರಿಕೆಯನ್ನು ಹಾಕಿದ್ದಾನೆ.

ಹೌದು ಒಂತಹ ವಿಲಕ್ಷಣ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ. ಇದೆ ತಿಂಗಳ 5 ನೇ ತಾರೀಖಿನಂದು 24 ವರ್ಷದ ಯುವಕನೋರ್ವ ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾದು ಕುಳಿತ್ತಿದ್ದ ಅತ್ತ ಕಡೆಯಿಂದ ಬಂದ ಬೈಕ್ ಸವಾರೊಬ್ಬ ಲಿಪ್ಟ ಕೊಡುವುದಾಗಿ ಹೇಳಿ ಮಾರ್ಗ ಮದ್ಯೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ವೇಸಗಿದ್ದಾನೆ ಎಂದು ಸದ್ಯ ಅತ್ಯಾಚಾರಕ್ಕೆ ಒಳಗಾದ ಯುವಕ ಅಥಣಿ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿದ್ದಾನೆ.

ಇನ್ನು ಘಟನೆಯ ವಿವರವನ್ನ ನೋಡುವುದಾದರೆ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ 24 ವರ್ಷದ ಯುವಕ ಅಥಣಿಯ ಹೋಟೆಲ್‌ ಒಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ನಿತ್ಯವೂ ಪಕ್ಕದ ಊರಿನಿಂದ ಅಥಣಿ ಪಟ್ಟಣಕ್ಕೆ ಬಂದು ಸಂಜೆ ವಾಪಸ್ ಆಗುತ್ತಿದ್ದ, ಅಕ್ಟೋಬರ್ 5 ರಂದು ಸಹ ತಾನ್ನ ಕೆಲಸ ಮುಗಿಸಿ ಬಸ್ ಗಾಗಿ ಕಾದು ಕುಳಿತ್ತಿದ್ದ.

ಅದೆ ತಾಲೂಕಿನ ಸಂಕೋನಟ್ಟಿ ಗ್ರಾಮದ ಆರೋಪಿ ರಾಜು ಆಚಾರಟ್ಟಿ ಎಂಬಾತ ಸಂತ್ರಸ್ತ ಯುವಕನನ್ನ, ತಾನು ನಿಮ್ಮೂರ ಕಡೆಗೆ ಹೊರಟಿದ್ದೀನಿ. ನಿಮ್ಮ ಅಕ್ಕ ನಿನ್ನ ಕರೆದುಕೊಂಡು ಬರುವಂತೆ ನನಗೆ ಹೇಳಿದ್ದಾಳೆ. ಬಾ ದ್ವಿಚಕ್ರ ವಾಹನದ ಮೇಲೆ ನಿನ್ನನ್ನ ಬಿಡುತ್ತೇನೆ ಎಂದು ಹೇಳಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಆದ್ರೆ ಯುವಕನನ್ನು ನೇರವಾಗಿ ಅವರ ಮನೆಗೆ ಬಿಡದೆ ರಸ್ತೆ ಮಾರ್ಗದಲ್ಲೇ ನಿರ್ಜನ ಪ್ರದೇಶದತ್ತ ಕರೆದುಕೊಂಡು ಹೋಗಿರುವ ಕಾಮುಕ, ಆರೋಪಿ ರಾಜು ಯುವಕನ ಜೊತೆ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಇಲ್ಲಿ ನಡೆದ ಘಟನೆ ಕುರಿತು ಯಾರಿಗಾದರೂ ಹೇಳಿದರೆ ನಿನ್ನನ್ನ ಜೀವಂತವಾಗಿ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿದ್ದ.

ಇದನ್ನೂ ಓದಿ:Child Rape| ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಬಂಧನ

ಇನ್ನು ಜೀವ ಭಯದಿಂದ ಹೆದರಿದ್ದ ಯುವಕ  ಮೂರು ದಿನಗಳವರೆಗೂ ಯಾರಿಗೂ ತನ್ನ ಮೇಲಾದ ಅತ್ಯಾಚಾರದ ಕುರಿತು ಹೇಳಿರಲಿಲ್ಲ. ಬಳಿಕ ತನ್ನ ಮನೆಯವರ ಬಳಿ ತನ್ನ ಮೇಲಾದ ಅತ್ಯಾಚಾರದ ಕುರಿತು ನೀಡುತ್ತಿದ್ದಂತೆ, ಅಕ್ಟೋಬರ್ 8ರಂದು ಅಥಣಿ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣದ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ  ಅಥಣಿ ಪೊಲೀಸರು ಆರೋಪಿ ರಾಜುನನ್ನ ಬಂಧಿಸಿ, ತನಿಖೆಯನ್ನು ನಡೆಸಿದ್ದಾರೆ.

ಒಟ್ಟಿನಲ್ಲಿ ವೃದ್ಧೆ, ಮಹಿಳೆ, ಮಕ್ಕಳು, ಹಸುಗೂಸನ್ನೂ ಬಿಡದ ಕಾಮುಕಕರು ಯುವಕರ ಮೇಲೂ ಅತ್ಯಾಚಾರವೆಸಗುತ್ತಿದ್ದಾರೆ. ಲಿಫ್ಟ್​ ಸಿಗುತ್ತೆ ಅಂತಾ ಕಂಡಕಂಡವರ ಜತೆ ಹೋಗುವ ಮುನ್ನಎಲ್ಲರೂ ಎಚ್ಚರಕೆ ವಹಿಸಬೇಕು.
Published by:Latha CG
First published: