ಕಲಬುರ್ಗಿ(ಜುಲೈ.17): ನಾನು ಇರುವುದೇ ಮಾರಿಕೊಳ್ಳುವುದಕ್ಕೆ. ನಾವು ಮಾರುವವರೇ ಇದ್ದೇವೆ, ತಿನ್ನುವವರೇ ಇದ್ದೇವೆ. ನಮಗೆ ಮಾರಿಕೊಂಡು ತಿನ್ನುವುದಕ್ಕೆ ಅಧಿಕಾರವಿದೆ. ನಮ್ಮ ಹಕ್ಕಿದೆ, ನೀವು ಕೇಳುವವರು ಯಾರು. ಹೀಗೆ ಆವಾಜ್ ಡೋಂಟ್ ಕೇರ್ ಎನ್ನುವ ರೀತಿಯಲ್ಲಿ ಮಾತನಾಡಿದರು ಅಂಗನವಾಡಿ ಕಾರ್ಯಕರ್ತೆ. ಕಲಬುರ್ಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯ ಸರೋಜಾ ರಾಣಾಪುರ ಎಂಬ ಮಹಿಳೆಯಿಂದ ಹೊರಬಂದ ಮಾತುಗಳು.
ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಸರ್ಕಾರ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮನೆ ಮನೆಗೆ ಹೋಗೆ ಕೊಟ್ಟು ಬರುವಂತೆಯೂ ಸರ್ಕಾರ ನಿರ್ದೇಶನ ನೀಡಿದೆ. ಆದರೆ ಈ ಅಂಗನವಾಡಿ ಕಾರ್ಯಕರ್ತೆ ಮಾತ್ರ ಆಹಾರ ಕೇಳಿದವರಿಗೆ ಬೆದರಿಕೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ. ಎಲ್ಲಿ ಹೇಳುತ್ತಿ ಹೇಳು, ದೂರು ಕೊಡುತ್ತೀರೋ ಕೊಡಿ. ಬೆಲ್ಲ, ಹೆಸರು, ಮೊಟ್ಟೆ ಸೇರಿ ಪೌಷ್ಠಿಕ ಆಹಾರ ಅಕ್ರಮ ಮಾರಾಟ ಮಾಡಿಕೊಳ್ಳುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥನಿಗೆ ಬೆದರಿಕೆ ಹಾಕಿಯೇ ಉತ್ತರ ನೀಡಿದ್ದಾಳೆ. ಬಂದ ಆಹಾರದಲ್ಲಿ ಒಂದಿಷ್ಟನ್ನು ಕೊಡುತ್ತೇವೆ. ಉಳಿದದ್ದನ್ನು ಮಾರಿಕೊಳ್ಳುತ್ತೇವೆ. ಎಲ್ಲವನ್ನೂ ನಿಮಗೆ ಕೊಟ್ಟರೆ ನಮಗೇನು ಉಳಿಯುತ್ತೆ ಎಂದು ಆಕೆ ಪ್ರಶ್ನಿಸಿದ್ದಾಳೆ.
ಪೌಷ್ಟಿಕ ಆಹಾರ ಕೊಡುವಂತೆ ಕೇಳಿ ಕೊಂಡವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾಳೆ. ಜಿಲ್ಲೆಯ ಶಾಸಕರೊಬ್ಬರ ಬೆಂಬಲದಿಂದ ಈ ರೀತಿ ವರ್ತಿಸುತ್ತಿದ್ದಾಳೆ ಎಂಬ ಆರೋಪವೂ ಕೇಳಿ ಬಂದಿದೆ. ಅಂಗನವಾಡಿ ಕಾರ್ಯಕರ್ತೆ ವರ್ತನೆಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಿಡಿಪಿಒ ಕಛೇರಿಗೆ ಸೈಯದ್ ಚಿಂಚೋಳಿ ಗ್ರಾಮದ ಜಗನ್ನಾಥ ಎಂಬುವರು ದೂರು ನೀಡಿದ್ದಾರೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ; ಮುಳುಗಡೆಯ ಭೀತಿಯಲ್ಲಿ ತಗ್ಗು ಪ್ರದೇಶಗಳು
ಅಂಗನವಾಡಿಗೆ ಬಂದ ಪೌಷ್ಟಿಕ ಆಹಾರ ಮತ್ತು ಆಹಾರ ಧನ್ಯ ಕಾಳ ಸಂತೆಯಲ್ಲಿ ಮಾರುತ್ತಿದ್ದಾರೆ ಎಂದು ದೂರಿರುವ ಗ್ರಾಮಸ್ಥರು, ಕಾಳ ಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ