7 ತಿಂಗಳ ಮಗುವನ್ನು ಆಟೋದಲ್ಲಿ ಅನಾಥವಾಗಿ ಬಿಟ್ಟು ಹೋಗಿಬಿಟ್ರು, ಹೀಗೆ ಮಾಡೋಕೆ ಮನಸ್ಸಾದ್ರೂ ಹೇಗೆ ಬಂತು ?

ಆಟೋ ಸ್ಟಾಂಡ್ ನಲ್ಲಿ ಹಿಂಬದಿಯಿದ್ದ ಆಟೋದಲ್ಲಿನ ಬ್ಯಾಗ್ ನಲ್ಲಿ ಮಗು ಪತ್ತೆಯಾಗಿದೆ, ಮಗು ಕಂಡಾಕ್ಷಣ ಆಟೋ ಚಾಲಕರು ಪೋಲೀಸರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮಗುವನ್ನ ಪೋಷಕರೆ ಬಿಟ್ಟು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಜಿಲ್ಲಾ ಆಸ್ಪತ್ರೆ ಕೋಲಾರ

ಜಿಲ್ಲಾ ಆಸ್ಪತ್ರೆ ಕೋಲಾರ

  • Share this:
 ಆಟೋದಲ್ಲಿ 7 ತಿಂಗಳ ಹೆಣ್ಣು ಮಗು ಪತ್ತೆಯಾಗಿರುವ ಘಟನೆ  ಕೋಲಾರ ಎಸ್ ಎನ್ ಆರ್  ಜಿಲ್ಲಾಸ್ಪತ್ರೆ ಎದುರು ನಡೆದಿದೆ, ಇಲ್ಲಿನ  ಆಟೋ ಸ್ಟಾಂಡ್ ನಲ್ಲಿ ಹಿಂಬದಿಯಿದ್ದ ಆಟೋದಲ್ಲಿನ ಬ್ಯಾಗ್ ನಲ್ಲಿ ಮಗು ಪತ್ತೆಯಾಗಿದೆ, ಮಗು ಕಂಡಾಕ್ಷಣ ಆಟೋ ಚಾಲಕರು ಪೋಲೀಸರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮಗುವನ್ನ ಪೋಷಕರೆ ಬಿಟ್ಟು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಮಗುವಿನ ರಕ್ಷಣೆ ಮಾಡಿದ ಕೂಡಲೇ,  ಮಕ್ಕಳಾ ರಕ್ಷಣಾ ಘಟಕದಿಂದ ಮಗು ಪಾಲನೆ ಮಾಡಲಾಗುತ್ತಿದೆ, ನೆನ್ನೆ ಇಂದು ಸಂಜೆ ವೇಳೆಗೆ ಮಗುವನ್ನ ಬ್ಯಾಗ್ ನಲ್ಲಿ ತಂದು ಇಟ್ಟು ಹೋಗಿರುವ ಮಾಹಿತಿ ಇದ್ದು,  ಮಗುವಿನ ಪೋಷಕರಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದು,  ಕೋಲಾರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ ದೂರು‌ ದಾಖಲಾಗಿದೆ.

ಮಗುವಿನ ಪೋಷಕರ ಪತ್ತೆಗೆ ಮಕ್ಕಳ ಜಿಲ್ಲಾ ರಕ್ಷಣ ಘಟಕದಿಂದ ಹುಡುಕಾಟ

ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯ ಮುಂಭಾಗ ನಿಲ್ಲಿದ್ದ ಆಟೋದಲ್ಲಿದ್ದ ಬ್ಯಾಗ್‌ನಲ್ಲಿ ನವಜಾತ ಹೆಣ್ಣು ಶಿಶುವನ್ನು ಯಾರೋ ಅಪರಿಚಿರ ಪೋಷಕರು ಬಿಟ್ಟು ಹೋಗಿರುವ ಹಿನ್ನಲೆ,  ಮಗುವಿನ ಪೋಷಕರ ಪತ್ತೆಗಾಗಿ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಮಗುವನ್ನು ಮಕ್ಕಳ ಸಮಿತಿಯ ಆದೇಶದಂತೆ ಪಾಲನೆ, ಪೋಷಣೆ ಮತ್ತು ರಕ್ಷಣೆಯ ಹಿತದೃಷ್ಠಿಯಿಂದ ದತ್ತು ಸಂಸ್ಥೆಯಲ್ಲಿ ದಾಖಲಿಸಲಾಗಿದೆ.

ಹೆಣ್ಣು ಮಗುವಿನ ಚಹರೆ -  ವಯಸ್ಸು: 07 ತಿಂಗಳು, ಗುಂಡು ಮುಖ, ಗೋಧಿ ಮೈಬಣ್ಣ, ಎತ್ತರ 1 1/2 ಅಡಿ, ಮಾನಸಿಕ ಮತ್ತು ದೈಹಿಕ ಉತ್ತಮವಾಗಿದೆ.

ಮಗುವಿನ ಪೋಷಕರು ಇದ್ದಲ್ಲಿ ದೂರವಾಣಿ ಸಂಖ್ಯೆ 08152-220166, 9066345708, 9945268426 ಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 1ನೇ ಮಹಡಿ, ಜಿಲ್ಲಾ ನ್ಯಾಯಾಲಯ ಆವರಣ ಕೋಲಾರ,  ಕಛೇರಿ ವಿಳಾಸಕ್ಕೆ ದಾಖಲೆಗಳೊಂದಿಗೆ ಭೇಟಿ ನೀಡುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ತಾನು ಮಾಡದ ತಪ್ಪಿಗೆ ಅನಾಥವಾಗಿರುವ 7 ತಿಂಗಳ ಹಸುಗೂಸು ತಂದೆ ತಾಯಿಯಿಲ್ಲದೆ ಸದ್ಯಕ್ಕೆ ಒಬ್ಬೊಂಟಿಯಾಗಿದೆ, ಆದರೆ ಮಗುವನ್ನ ಆಟೋದಲ್ಲಿ ಪೋಷಕರೇ ಬಿಟ್ಟು ಹೋಗಿದ್ದಾರಾ, ಅಥವಾ ಯಾರಾದರು ಅಪರಿಚಿತರು ಬಿಟ್ಟು ಹೋಗಿದ್ದಾರಾ ಎನ್ನುವ ಬಗ್ಗೆಯು ಪೊಲೀಸರು ತನಿಖೆ ನಡೆಸುತ್ತಿದ್ದು, ಕೋಲಾರ ಜಿಲ್ಲಾಸ್ಪತ್ರೆ ಹಾಗು  ಜಿಲ್ಲಾಸ್ಪತ್ರೆ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿದ ಬಳಿಕ ಏನಾದರು ಸುಳಿವು ಸಿಗುವ ಸಾಧ್ಯತೆಯಿದೆ, ಮಗು ಆರೋಗ್ಯ ವಾಗಿದ್ದು ಮಗು ಸಿಕ್ಕಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ನೆಟ್ಟಿಗರು, ಮಗುವಿನ ಪೋಷಕರ ವಿರುದ್ದ ಕಿಡಿಕಾರುತ್ತಿದ್ದು, ಸಾಕಿ ಸಲುಹುವ ಯೋಚನೆಯನ್ನ ಬಿಟ್ಟು ಮಗುವನ್ನ ಬಿಟ್ಟು ಹೋಗಿದ್ದು ಸರಿಯಾದ ನಿರ್ಧಾರವಲ್ಲ ಎಂದು ಪೋಷಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: