HOME » NEWS » District » A 18 YEARS OLD BOY DIED IN RIVER WATER FLOW IN KAGINA RIVER DUE TO HEAVY RAIN IN KALABURGI DISTRICT HK

ಕಾಗಿಣಾ ನದಿಗೆ ಈಜಲು ಹೋಗಿದ್ದ ಯುವಕ ಸಾವು ; ಸುಳಿಗೆ ಸಿಲುಕಿ ಜಲ ಸಮಾಧಿ

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ವಾಡಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೀನುಗಾರರ ಸಹಾಯದಿಂದ ಶವ ಹುಡುಕುವ ಕೆಲಸ ಮಾಡಿದ್ದಾರೆ. ಹಲವು ಗಂಟೆಗಳ ಹುಡುಕಾಟದ ನಂತರ ಮೀನುಗಾರರು ಯುವಕನ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ

news18-kannada
Updated:August 6, 2020, 11:53 AM IST
ಕಾಗಿಣಾ ನದಿಗೆ ಈಜಲು ಹೋಗಿದ್ದ ಯುವಕ ಸಾವು ; ಸುಳಿಗೆ ಸಿಲುಕಿ ಜಲ ಸಮಾಧಿ
ಕಾಗಿಣಾ ನದಿಯಲ್ಲಿ ಶವ ಹುಡುಕುತ್ತಿರುವ ಮೀನುಗಾರರು
  • Share this:
ಕಲಬುರ್ಗಿ(ಆಗಸ್ಟ್​. 06): ಕೊರೋನಾ ಸೋಂಕಿನ ಕಾರಣದಿಂದಾಗಿ ದೇಶದ ಬಹುತೇಕ ಕಡೆ ಶಾಲಾ-ಕಾಲೇಜುಗಳಿಗೆ ರಜೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ರಜೆಯಿದೆ ಎಂದು ನಿತ್ಯ ನದಿಗೆ ಈಜಲು ಹೋಗುತ್ತಿದ್ದ ಯುವಕನೋರ್ವ, ಅಚಾನಕ್ಕಾಗಿ ಸುಳಿಗೆ ಸಿಲುಕಿ ಜಲಸಮಾಧಿಯಾದ ಘಟನೆ ಕಲಬುರ್ಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ನಡೆದಿದೆ. 

ಮೃತ ದುರ್ದೈವಿಯನ್ನು ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಸಂಪತ್ ಸಂಕ(18) ಎಂದು ಗುರುತಿಸಲಾಗಿದೆ. ತನ್ನ ಗೆಳೆಯರೊಂದಿಗೆ ಈಜಲು ಕಾಗಿಣಾ ನದಿಗೆ ಹೋಗಿದ್ದ ಯುವಕ. ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರಿಗೆ ಧುಮುಕ್ಕಿದ್ದ ಯುವಕ, ದುರದೃಷ್ಟವಶಾತ್ ಸುಳಿಗೆ ಸಿಲುಕಿ ಹೊರಬರಲಾಗದೆ ಸಾವನ್ನಪ್ಪಿದ್ದಾನೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಈಜು ಬರುತ್ತಿದ್ದರು ನೀರಿನ ರಭಸದಲ್ಲಿ ಸುಳಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ.

ಮೃತ ಯುವಕ


ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ವಾಡಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೀನುಗಾರರ ಸಹಾಯದಿಂದ ಶವ ಹುಡುಕುವ ಕೆಲಸ ಮಾಡಿದ್ದಾರೆ. ಹಲವು ಗಂಟೆಗಳ ಹುಡುಕಾಟದ ನಂತರ ಮೀನುಗಾರರು ಯುವಕನ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಕರಾವಳಿಯಲ್ಲಿ ಮುಂದುವರಿದ ಭಾರಿ ಮಳೆ : ಕಡಲಿನ ಅಬ್ಬರ ಹೆಚ್ಚಳ, ಆತಂಕದಲ್ಲಿ ಜನ

ಯುವಕನ ಸಾವಿನ ಸುದ್ದಿ ಹಿನ್ನೆಲೆಯಲ್ಲಿ ಮೃತನ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟುವಂತೆ ಮಾಡಿತ್ತು. ವಯಸ್ಸಿಗೆ ಬಂದ ಮಗ ನಡು ನೀರಲ್ಲೇ ಕೈ ಬಿಟ್ಟು ಹೋದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಡುರಸ್ತೆಯಲ್ಲೆ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿಕೊಂಡ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಾಯಕೋಡ್ ಗ್ರಾಮದಲ್ಲಿ ನಡೆದಿದೆ. 10 ರಿಂದ 15 ಅಡಿ ಉದ್ದದ ಎರಡು ಹಾವುಗಳು, ಸುಮಾರು 1 ಗಂಟೆಗಳ ಕಾಲ ಸರಸ ಸಲ್ಲಾಪದಲ್ಲಿ ನಿರತವಾಗಿದ್ದವು. ನಾಲ್ಕೈದು ಅಡಿ ಎತ್ತರಕ್ಕೆ ಜಿಗಿದು ಸರಸದಲ್ಲಿ ನಿರತವಾದ ಹಾವುಗಳು. ಹಾವುಗಳ ಸಲ್ಲಾಪ ವಿಕ್ಷೀಸಲು ಮುಗಿಬಿದ್ದ ಜನ. ನೂರಾರು ಜನ ಜಮಾಯಿಸಿದ್ದರೂ ಡೋಂಟ್ ಕೇರ್ ಎನ್ನದ ಹಾವುಗಳು, ತಮ್ಮ ಪಾಡಿಗೆ ತಾವು ಸರಸದಲ್ಲಿ ತೊಡಗಿಕೊಂಡಿದ್ದವು.
Published by: G Hareeshkumar
First published: August 6, 2020, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories