HOME » NEWS » District » 80 YEAR OLDER WHO HAVE ACHIEVED HONEY FARMING AT KODAGU RSK HK

ವಾರ್ಷಿಕ 400 ಕೆಜಿ ಜೇನು ಉತ್ಪಾದನೆ ; 80ರ ಇಳಿ ವಯಸ್ಸಿನಲ್ಲಿಯೂ ಕೆಂಚಪ್ಪನ ಸಾಧನೆ

ಮಡಿಕೇರಿ ತಾಲೂಕಿನ ಬೆಟ್ಟತ್ತೂರಿ‌ನ ನಿವಾಸಿ 80 ವರ್ಷದ ಕೆಂಚಪ್ಪ ಜೇನುಕೃಷಿ‌ ಮಾಡುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಜೇನು ಸಾಕಾಣೆ ಮಾಡುತ್ತಾ ಬಿಡುವಿನ ವೇಳೆ ಯುವಕರನ್ನು ನಾಚಿಸುವಂತೆ ತೋಟದಲ್ಲಿ ಕೆಲಸ ಮಾಡುತ್ತಾರೆ.

news18-kannada
Updated:December 14, 2020, 8:01 AM IST
ವಾರ್ಷಿಕ 400 ಕೆಜಿ ಜೇನು ಉತ್ಪಾದನೆ ; 80ರ ಇಳಿ ವಯಸ್ಸಿನಲ್ಲಿಯೂ ಕೆಂಚಪ್ಪನ ಸಾಧನೆ
ಜೇನು ಕೃಷಿ ಮಾಡುತ್ತಿರುವ ಕೆಂಚಪ್ಪ
  • Share this:
ಕೊಡಗು(ಡಿಸೆಂಬರ್.14): ಕೊಡಗು ನೈಸರ್ಗಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲೆ. ಇಲ್ಲಿ ಅರಣ್ಯ ನೈಸರ್ಗಿಕವಾಗಿಯೇ ಹಲವು ಜಾತಿಯ ಮರ ಗಿಡಗಳಿಂದ ಕೂಡಿದೆ. ಹೂಗಳ ಮಕರಂದ ಹೇರಳವಾಗಿ ಸಿಗುವಂತಹ ಕೊಡಗಿನ ಹಲವೆಡೆ ಜೇನು ಸಾಕಾಣಿಕೆ ಪ್ರಾಮುಖ್ಯತೆ ಪಡೆದಿದೆ.  ಹೀಗಾಗಿಯೇ ಕಾಫಿ ತೋಟಗಳ ನಿರ್ವಹಣೆ ಜೊತೆ ಜೊತೆಗೆ ಜೇನು ಕೃಷಿಯನ್ನು ಉಪ ಕಸುಬನ್ನಾಗಿ ರೂಢಿಸಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬರು 80 ಇಳಿ ವಯಸ್ಸಿನಲ್ಲೂ ಜೇನು ಕೃಷಿ ಮಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಬೆಟ್ಟತ್ತೂರಿ‌ನ ನಿವಾಸಿ 80 ವರ್ಷದ ಕೆಂಚಪ್ಪ ಜೇನುಕೃಷಿ‌ ಮಾಡುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಜೇನು ಸಾಕಾಣೆ ಮಾಡುತ್ತಾ ಬಿಡುವಿನ ವೇಳೆ ಯುವಕರನ್ನು ನಾಚಿಸುವಂತೆ ತೋಟದಲ್ಲಿ ಕೆಲಸ ಮಾಡುತ್ತಾರೆ. ಚಿಕ್ಕಂದಿನಿಂದಲೂ ಜೇನು ಸಾಕಾಣೆ ಮಾಡುತ್ತಿರುವ ಶ್ರಮಜೀವಿ ಹಿಂದೆ 400 ಕೆ.ಜಿಯಷ್ಟು ಜೇನು ತೆಗೆಯುತ್ತಿದ್ದರಂತೆ. ಇತ್ತೀಚಿಗೆ ನೈಸರ್ಗಿಕ ಕಾಡನ್ನು ಕಡಿದು ಕಾಫಿಯನ್ನೇ ಪ್ರಧಾನ ಬೆಳೆಯನ್ನಾಗಿ ಮಾಡಿಕೊಂಡ ಪರಿಣಾಮ ‌ಜೇನು ಹುಳುಗಳಿಗೆ ಹೇರಳವಾಗಿ ಸಿಗುತ್ತಿದ್ದ ಮಕರಂದ ಇತ್ತೀಚೆಗೆ ಸಿಗುತ್ತಿಲ್ಲ.

ಇದೀಗ ಎಲ್ಲವೂ ಸೇರಿದಂತೆ ಕಲಬೆರಕೆ ಆಗುತ್ತಿದೆ.  ಪರಿಶುದ್ಧ ಕೆ.ಜಿ ಜೀನು ತುಪ್ಪಕ್ಕೆ ಒಂದು ಸಾವಿರವಾಗುತ್ತೆ.‌ ಇದೀಗ ಕಡಿಮೆ ಬೆಲೆಗೆ ಎಲ್ಲೆಂದರಲ್ಲಿ ಜೇನನ್ನು ಮಾರಾಟ ಮಾಡುತ್ತಾರೆ. ಹಳೆ ಸ್ನೇಹಿತರು ಮನೆಗೆ ಬಂದು ಜೇನುತುಪ್ಪ ತೆಗೆದುಕೊಂಡು ಹೋಗುತ್ತಾರೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಕೆಂಚಪ್ಪ.

ಇದನ್ನೂ ಓದಿ : ಬೆಂಗಳೂರಿಗೆ ತೆರಳಲು ಮೂರು ದಿನಗಳಿಂದ ಬಾಣಂತಿ ಪರದಾಟ ; ಮಾನವೀಯತೆ ಮೆರೆದ ಆಟೋ ಚಾಲಕರು

ತಂದೆಗೆ ಸುಮಾರು 84 ವರ್ಷ ವಯಸ್ಸಾಗಿದೆ. ಈ ಭಾಗದಲ್ಲಿ 80 ರ ದಶಕದಿಂದಲೇ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ‌. 2 ಎಕ್ಕರೆ ಕಾಫಿ ತೋಟದಲ್ಲಿ ಸುಮಾರು 25 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಕಾಫಿ ತೋಟದ ನಿರ್ವಹಣೆ ಜೊತೆಗೆ ಜೇನುಕೃಷಿ ಮಾಡುತ್ತಾರೆ. ವಾರ್ಷಿಕವಾಗಿ 35 ಸಾವಿರ ಲಾಭ ಗಳಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಏಣಿ ಬಳಸಿಕೊಂಡು ಕಾಳುಮೆಣಸು ಕೊಯ್ಯುವುದು, ತೋಟದಲ್ಲಿ ಅಗೆತ ಹಾಗೂ ಕಾಫಿ ಕೀಳುತ್ತಾರೆ. ತಂದೆಯ ಅನುಭವವನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಸಂತತ ವ್ಯಕ್ತಪಡಿಸುತ್ತಾರೆ ಅವರ ಮಗ ವಿಘ್ನೇಶ್.‌

ಒಟ್ಟಾರೆ ಜಿಲ್ಲೆಯಲ್ಲಿ ಜೇನು ಕೃಷಿಯಲ್ಲಿ ನಮಗಿಂತಲೂ ಅನುಭವಿಗಳಿದ್ದಾರೆ. ಆದರೆ, ಹಿಂದೆ ಉತ್ಪಾದಿಸುತ್ತಿದ್ದ ಜೇನುತುಪ್ಪದ ಪ್ರಮಾಣ ಹಾಗೂ ಗುಣಮಟ್ಟ ಪ್ರಸ್ತುತ ಎರಡೂ ಕಡಿಮೆಯಾಗಿದೆ‌. ಸುಮಾರು 25 ಹೂಗಳಿಂದ ಮಕರಂದವನ್ನು ಹೀರಿ ತಂದು ಇರಿಸುತ್ತಿದ್ದ ಪರಿಶುದ್ಧವಾದ ಜೇನುತುಪ್ಪ  ಆರೋಗ್ಯಕ್ಕೆ ಅತ್ಯುಪಯುಕ್ತ. ಆದರೆ, ಲಾಭದ ದುರಾಸೆಗೆ ಕಲಬೆರಕೆ ಜೇನು ಮಾರಾಟ ಮಾಡುತ್ತಿರುವುದು ವಿಪರ್ಯಾಸ.
Published by: G Hareeshkumar
First published: December 14, 2020, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories