ಅವಿಭಕ್ತ ಕುಟುಂದ ವ್ಯಕ್ತಿಗೆ ಕೊರೋನಾ ಸೋಂಕು; ಬರೋಬ್ಬರಿ 80 ಜನ ಹೋಮ್ ಕ್ವಾರಂಟೈನ್

P-12121, 36 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಇಡೀ ಅವಿಭಕ್ತ ಕುಟುಂಬವೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಪರಿಣಾಮ ಇಡೀ ಕುಟುಂಬದವರಿಗೆ ಆತಂಕ ಮಾನೆಮಾಡಿದ್ದು ಗ್ರಾಮಸ್ಥರಲ್ಲೂ ಭಯ ಮೂಡಿಸಿದೆ.

news18-kannada
Updated:June 29, 2020, 2:24 PM IST
ಅವಿಭಕ್ತ ಕುಟುಂದ ವ್ಯಕ್ತಿಗೆ ಕೊರೋನಾ ಸೋಂಕು; ಬರೋಬ್ಬರಿ 80 ಜನ ಹೋಮ್ ಕ್ವಾರಂಟೈನ್
ಸಾಂದರ್ಭಿಕ ಚಿತ್ರ.
  • Share this:
ಧಾರವಾಡ (ಜೂನ್ 29); ಜಿಲ್ಲೆಯ ಅವಿಭಕ್ತ ಕುಟುಂಬವೊಂದರ ಸದಸ್ಯನಿಗೆ ಮಾರಣಾಂತಿಕ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ‌ ಕುಟುಂಬದ ಬರೋಬ್ಬರಿ 80 ಸದಸ್ಯರನ್ನು ಇದೀಗ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸೋಂಕಿತ ವ್ಯಕ್ತಿಯ ಮನೆಯ ಸುತ್ತ 100 ಮೀಟರ್ ಸಿಲ್ ಡೌನ್ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಕುಟುಂಬದ 80 ಸದಸ್ಯರನ್ನು ನಿನ್ನೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

P-12121, 36 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಇಡೀ ಅವಿಭಕ್ತ ಕುಟುಂಬವೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಪರಿಣಾಮ ಇಡೀ ಕುಟುಂಬದವರಿಗೆ ಆತಂಕ ಮಾನೆಮಾಡಿದ್ದು ಗ್ರಾಮಸ್ಥರಲ್ಲೂ ಭಯ ಮೂಡಿಸಿದೆ.

ಇದನ್ನೂ ಓದಿ: Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ‌ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ? 

ಸೋಂಕಿತ ವ್ಯಕ್ತಿಗೆ ಮೊದಲು ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಬಳಿಕೆ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋದಾಗ ಗಂಟಲು ದ್ರವ ಪ್ರತಿಕ್ಷೆಗೆ ಕಳಿಸಿ ವರದಿ ಬಳಿಕ ಕೊರೋನಾ ಸೋಂಕು ದೃಢ ಪಟ್ಟಿದೆ. ಗ್ರಾಮಿಣ ಭಾಗಕ್ಕೂ ದಿನದಿಂದ ದಿನಕ್ಕೆ ಕೊರೋನಾ ಹರಡುತ್ತಿರುವುದು ಈ ಭಾಗದ ಜನ ಆತಂಕದಲ್ಲಿ ದಿನದೂಡುಂತಾಗಿದೆ.
First published: June 29, 2020, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading