ಕೇಂದ್ರ ಸರ್ಕಾರವು ಜುಲೈನಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ಭತ್ಯೆ ಪರಿಹಾರ (ಡಿಆರ್) ವನ್ನು ಹೆಚ್ಚಿಸಿತ್ತು. ಡಿಎಯನ್ನು ಶೇ 17 ರಿಂದ 28 ಕ್ಕೆ ಹೆಚ್ಚಿಸಲಾಗಿತ್ತು. ಈ ಕ್ರಮದಿಂದ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದು, ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದಾಗಿನಿಂದ, ಭಾರತದಾದ್ಯಂತ ಕೆಲವು ರಾಜ್ಯಗಳು ಕೂಡ ಡಿಎ ಹೆಚ್ಚಿಸುವುದಾಗಿ ಹೇಳಿಕೆ ನೀಡಿವೆ.
ಡಿಎ ಮತ್ತು ಡಿಆರ್‌ನ ಹೊಸ ದರಗಳು ಜುಲೈ 2021 ರಿಂದ ಜಾರಿಗೆ ಬಂದಿದ್ದು, ಕೇಂದ್ರ ಬೊಕ್ಕಸದ ಮೇಲೆ ವಾರ್ಷಿಕ ರೂ 34,401 ಕೋಟಿ ಹೊರೆ ಬೀಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ಅವಧಿಗೆ ಸರ್ಕಾರವು ಯಾವುದೇ ಭತ್ಯೆಯ ಬಾಕಿ ಪಾವತಿಸುವುದಿಲ್ಲ ಎಂದು ಹೇಳಿದೆ.
ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವನ್ನು ಘೋಷಿಸಿದ ರಾಜ್ಯಗಳು ಮತ್ತು ಹೆಚ್ಚಿಸಿರುವ ಶೇಕಡವಾರು ಅಂಶ ಇಲ್ಲಿದೆ.
1) ಉತ್ತರ ಪ್ರದೇಶ
ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಕೇಂದ್ರದ ಆದೇಶದ ಪ್ರಕಾರ ತುಟ್ಟಿ ಭತ್ಯೆಯನ್ನು ಶೇಕಡಾ 28 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿತು. ಈ ಬದಲಾವಣೆಯು ಸುಮಾರು 16 ಲಕ್ಷ ಸರ್ಕಾರಿ ನೌಕರರು ಮತ್ತು 12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ದೊರೆಯುತ್ತದೆ ಎಂದು ವರದಿ ಹೇಳಿದೆ.
2) ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ಭತ್ಯೆಯ ಭತ್ಯೆಯನ್ನು ಶೇಕಡಾ 17 ರಷ್ಟು ಹೆಚ್ಚಿಸಿತು ಮತ್ತು ಒಟ್ಟು ಶೇಕಡಾ 28ರಷ್ಟು ಕೈಗೆ ಸಿಗುತ್ತದೆ. ಈ ಬದಲಾವಣೆಯನ್ನು ಜುಲೈ 1, 2021 ರಿಂದ ಜಾರಿಗೆ ತರಲಾಯಿತು.
3) ಜಾರ್ಖಂಡ್
ಜಾರ್ಖಂಡ್ ರಾಜ್ಯ ಸರ್ಕಾರವು ತನ್ನ ಪಿಂಚಣಿದಾರರು ಮತ್ತು ಸರ್ಕಾರಿ ಉದ್ಯೋಗಿಗಳಿಗಾಗಿ ಇರುವ ಭತ್ಯೆಯನ್ನು ಶೇ .17 ರಷ್ಟು ಹೆಚ್ಚಿಸಿದೆ. ಜುಲೈ 1 ರಿಂದ ಜಾರಿಗೆ ಬರುವಂತೆ, ಡಿಎ ಮೂಲ ವೇತನದ ಮೇಲೆ ಶೇ 28 ರಷ್ಟಿದೆ.
4) ಹರಿಯಾಣ
ಹರಿಯಾಣ ಸರ್ಕಾರವು ಜುಲೈ 1, 2021 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿತು. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇತ್ತೀಚೆಗೆ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 17 ಪ್ರತಿಶತದಷ್ಟು ಹೆಚ್ಚಿಸುವುದಾಗಿ ಘೋಷಿಸಿದರು, ಇದು ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರಂದು ಉದ್ಭವಿಸುವ ಹೆಚ್ಚುವರಿ ಕಂತುಗಳನ್ನು ಒಳಗೊಂಡಿದೆ.
5) ಕರ್ನಾಟಕ
ಕರ್ನಾಟಕದ ರಾಜ್ಯ ಸರ್ಕಾರವು ಹೆಚ್ಚುವರಿ ಕಂತುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದು ಜನವರಿ 2020 ರಿಂದ ಜೂನ್ 2021 ರವರೆಗೆ ಇರುವ 11.25 ಶೇಕಡದಿಂದ 21.5 ಶೇಕಡಾಕ್ಕೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವ ಮೊದಲೇ ರಾಜ್ಯ ಸರ್ಕಾರ ಇದನ್ನು ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: Ravi Kumar Dahiya: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಕುಸ್ತಿಪಟು ರವಿಕುಮಾರ್ ದಹಿಯಾ
6) ರಾಜಸ್ಥಾನ
ರಾಜಸ್ಥಾನ ಸರ್ಕಾರವು ಸರ್ಕಾರಿ ನೌಕರರು ತಮ್ಮ ಭತ್ಯೆಯಲ್ಲಿ ಶೇಕಡಾ 17 ರಷ್ಟು ಹೆಚ್ಚಳವನ್ನು ಕಾಣಲಿದ್ದಾರೆ ಎಂದು ಘೋಷಿಸಿತು. ಇದು ಡಿಎ ಶೇಕಡಾ 28 ರ ಗಡಿ ದಾಟುತ್ತದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ