ದಾವಣಗೆರೆಯಲ್ಲಿ ಕೊರೋನಾ ಸೊಂಕಿನಿಂದ 74 ಜನರು ಗುಣಮುಖ; ಕಾನ್ಸ್‌ಟೇಬಲ್ ಸೇರಿದಂತೆ 15 ಜನ ಇಂದು ಬಿಡುಗಡೆ

ಕಳೆದ ತಿಂಗಳಿನ ವರೆಗೆ ದಾವಣಗೆರೆ ಗ್ರೀನ್‌ ಜೋನ್‌ನಲ್ಲಿ ಗುರುತಿಸಿಕೊಂಡಿತ್ತು. ಆದರೆ, ಏಕಾಏಕಿ ಜಿ‌ಲ್ಲೆಯಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡದ್ದು ಮತ್ತು ಈ ಸಂಖ್ಯೆ ಏರಿಕೆಯಾದದ್ದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.

news18-kannada
Updated:May 29, 2020, 12:01 AM IST
ದಾವಣಗೆರೆಯಲ್ಲಿ ಕೊರೋನಾ ಸೊಂಕಿನಿಂದ 74 ಜನರು ಗುಣಮುಖ; ಕಾನ್ಸ್‌ಟೇಬಲ್ ಸೇರಿದಂತೆ 15 ಜನ ಇಂದು ಬಿಡುಗಡೆ
ಕೊರೋನಾದಿಂದ ಗುಣಮುಖರಾದವರನ್ನು ಬೀಳ್ಕೊಡುತ್ತಿರುವುದು.
  • Share this:
ದಾವಣಗೆರೆ (ಮೇ 28); ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುಣಮುಖರಾಗುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಈವರೆಗೆ ಸೋಂಕಿತರ ಪೈಕಿ 74 ಜನ ಬಿಡುಗಡೆಯಾಗಿದ್ದು, ಇಂದು ಸಹ ಓರ್ವ ಪೊಲೀಸ್‌ ಕಾನ್ಸ್‌ಟೆಬಲ್‌ ಸೇರಿದಂತೆ 15 ಜನರನ್ನು ಗುಣಪಡಿಸಿ ಮನೆಗೆ ಕಳುಹಿಸಲಾಗಿದೆ.

ಐಜಿಪಿ ರವಿ.ಎಸ್, ಎಸ್‍ಪಿ ಹನುಮಂತರಾಯ, ಎಎಸ್‍ಪಿ ರಾಜೀವ್, ಎಡಿಸಿ ಪೂಜಾರ್‌, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಪುಷ್ಪ ಎರಚಿ, ಚಪ್ಪಾಳಿ ತಟ್ಟುವ ಮೂಲಕ ಎಲ್ಲರಿಗೂ ಬೀಳ್ಕೊಡುಗೆ ನೀಡಿದ್ದು ವಿಶೇಷ.

ಕಳೆದ ತಿಂಗಳಿನ ವರೆಗೆ ದಾವಣಗೆರೆ ಗ್ರೀನ್‌ ಜೋನ್‌ನಲ್ಲಿ ಗುರುತಿಸಿಕೊಂಡಿತ್ತು. ಆದರೆ, ಏಕಾಏಕಿ ಜಿ‌ಲ್ಲೆಯಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡದ್ದು ಮತ್ತು ಈ ಸಂಖ್ಯೆ ಏರಿಕೆಯಾದದ್ದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.

ಹೀಗಾಗಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲಿಸಿದ್ದ ಜಿಲ್ಲಾಡಳಿತ ಸೋಂಕಿತರನ್ನು ಕ್ವಾರಂಟೈನ್ ಮಾಡಿ ಉತ್ತಮ ಚಿಕಿತ್ಸೆ ನೀಡಲು ಮುಂದಾಗಿತ್ತು. ಪರಿಣಾಮ ಇಂದು ದಾವಣಗೆರೆಯಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಅಧಿಕವಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದ್ದು, ಜಿಲ್ಲಾಡಳಿತ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?
First published: May 29, 2020, 12:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading