HOME » NEWS » District » 73 CASES FILLED WHO BREAK HOME QUARANTINE RULES IN RAICHURU RH

ರಾಯಚೂರಿನಲ್ಲಿ ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘನೆ ಸಂಬಂಧ 73 ಪ್ರಕರಣ ದಾಖಲು

ರಾಯಚೂರು ಜಿಲ್ಲೆಯಲ್ಲಿ ಈಗ 9233 ಜನರು ಹೋಂ‌ ಕ್ವಾರಂಟೈನ್​ನಲ್ಲಿದ್ದಾರೆ. ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘಿಸಿದವರ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು, ಈವರೆಗೂ 73 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಮೇಲೆ ವಿಚಾರಣೆ ನಡೆದು 2 ವರ್ಷ ಶಿಕ್ಷೆ ನೀಡಬಹುದಾಗಿದೆ.

news18-kannada
Updated:August 13, 2020, 7:15 AM IST
ರಾಯಚೂರಿನಲ್ಲಿ ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘನೆ ಸಂಬಂಧ 73 ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
  • Share this:
ರಾಯಚೂರು: ಸರಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಕೊರೋನಾ ಕೊಂಡಿಯನ್ನು ಮೊಟಕುಗೊಳಿಸಲು ಆಗುತ್ತಿಲ್ಲ. ಲಾಕ್​ಡೌನ್ ಮುಗಿದ ನಂತರ ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು, ಮಾಸ್ಕ್ ಧರಿಸಲು ಉದಾಸೀನತೆಯೂ ಪ್ರಮುಖ ಕಾರಣವಾಗಿದೆ. 

ಈ ಮಧ್ಯೆ ಸೋಂಕಿತರು, ಸೋಂಕಿತರ ಸಂಪರ್ಕದಲ್ಲಿದ್ದವರು ಬೇರೆಯವರೊಂದಿಗೆ ಸಂಪರ್ಕದಿಂದ ದೂರವಿರಬೇಕು. ಅದಕ್ಕಾಗಿ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಹೋಂ ಕ್ವಾರಂಟೈನ್​ನಲ್ಲಿ ಇದ್ದವರು ಹೊರಬರಬಾರದು ಎಂದು ಸರಕಾರ ಸೂಚಿಸಿ ನಿಯಮಾವಳಿಯನ್ನು ರೂಪಿಸಿದೆ. ಆದರೆ ಅದು ಸಹ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ.  ಇದರಿಂದಾಗಿ ಈಗ ಸೋಂಕು ಅಧಿಕಗೊಳ್ಳಲು ಕಾರಣವಾಗಿದೆ. ಈ ಮೊದಲು ಕೇಂದ್ರ ಹಾಗೂ ರಾಜ್ಯ ಗೃಹ ಇಲಾಖೆಯು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ, ಅವರ ಮೇಲೆ ಒಂದು ವರ್ಷ ಜೈಲು, ಇಲ್ಲವೇ ದಂಡ, ಜೈಲು ಹಾಗೂ ದಂಡವನ್ನು ವಿಧಿಸಲಾಗುತ್ತಿದೆ. ಆದರೂ ಜನರು ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಹೋಂ ಕ್ವಾರಂಟೈನ್ ಬಗ್ಗೆ  ಮತ್ತೊಂದು ಮಾರ್ಗಸೂಚಿ ಬಿಡುಗಡೆ ಮಾಡಿದ್ದು ನಿಯಮ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸೂಚಿಸಿದೆ.

ರಾಯಚೂರು ಜಿಲ್ಲೆಯಲ್ಲಿ ಮೇ 17 ರವರೆಗೆ ಒಂದೂ ಕೊರೋನಾ ಪಾಸಿಟಿವ್ ಪ್ರಕರಣವಿರಲಿಲ್ಲ. ಆದರೆ ಮೇ 17ರ ನಂತರ ಇಂದಿನವರೆಗೂ 4354 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೊದಲು ಹೊರರಾಜ್ಯದಿಂದ ಬಂದವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಈಗ ಹೊರರಾಜ್ಯದಿಂದ ಬಂದವರ ಸಂಖ್ಯೆ ಕಡಿಮೆಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದವರ ಸಂಖ್ಯೆ ಅಧಿಕವಾಗಿದೆ.

ಇದನ್ನು ಓದಿ: DJ Halli Violence – ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ನಿರ್ಧಾರ; ಗಲಭೆಕೋರರಿಂದ ನಷ್ಟಭರಿಸುವ ಕ್ರಮ ಇಲ್ಲ

ರಾಯಚೂರು ಜಿಲ್ಲೆಯಲ್ಲಿ ಈಗ 9233 ಜನರು ಹೋಂ‌ ಕ್ವಾರಂಟೈನ್​ನಲ್ಲಿದ್ದಾರೆ. ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘಿಸಿದವರ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದು, ಈವರೆಗೂ 73 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಮೇಲೆ ವಿಚಾರಣೆ ನಡೆದು 2 ವರ್ಷ ಶಿಕ್ಷೆ ನೀಡಬಹುದಾಗಿದೆ. ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು ಇಲ್ಲವೇ ಶಿಕ್ಷೆ ಅನುಭವಿಸಿ ಎಂದು ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ಜನರ ಸ್ಪಂದನೆ ಹೇಗಿರುತ್ತೆ ಎಂಬುವದನ್ನು ಕಾದು ನೋಡಬೇಕು.
Published by: HR Ramesh
First published: August 13, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories