ಕಾಫಿನಾಡಲ್ಲಿ ಭೀಕರ ಕೊಲೆ: 30 ವರ್ಷ ಮಗನನ್ನು ಗುಂಡಿಕ್ಕಿ ಕೊಂದ 72 ವರ್ಷದ ತಂದೆ!

 ಪುತ್ರ ಕಿರಣ್ ಇಡೀ ಮನೆಯ ಕೆಲಸ ಮಾಡಿಕೊಂಡು ಜೊತೆಗೆ ತೋಟದ ಕೆಲಸ ಮಾಡಿಕೊಂಡು ಅಪ್ಪನನ್ನ ನಿಭಾಯಿಸಿಕೊಂಡು ಹೋಗ್ತಿದ್ದ. ಇಷ್ಟೆಲ್ಲಾ ಕೆಲಸ ಮಾಡಿದ್ರೂ ಮಗನ ಮೇಲೆ ಮನಬಂದಂತೆ ರೇಗೋದು, ಅವಾಚ್ಯ ಶಬ್ಧಗಳಿಂದ ಬೈಯೋದನ್ನ ತಂದೆ ಮಾಡುತ್ತಿದ್ದರಂತೆ.

ಕೊಲೆಯಾದ ಕಿರಣ್​

ಕೊಲೆಯಾದ ಕಿರಣ್​

  • Share this:
ಚಿಕ್ಕಮಗಳೂರು : 72 ವರ್ಷದ ತಂದೆಯೇ 30 ವರ್ಷದ ಮಗನನ್ನ ಗುಂಡಿಕ್ಕಿ ಕೊಲೆಗೈದಿರುವ ಘಟನೆ  ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ನಡೆದಿದೆ.  30 ವರ್ಷದ ಕಿರಣ್ ಮೃತ ದುರ್ದೈವಿ. ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಕುಟುಂಬದಲ್ಲಿ ಆಗಾಗ್ಗೆ ಸಣ್ಣ-ಪುಟ್ಟ ಗಲಾಟೆಗಳು ನಡೆಯುತ್ತಿದ್ದವು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

ಆರೋಪಿ ಲಕ್ಷ್ಮಣಗೌಡಗೆ ಕಳೆದ 8 ವರ್ಷಗಳ ಹಿಂದೆ ಅಪಘಾತವಾಗಿತ್ತಂತೆ.  ಅಂದಿನಿಂದಲೂ ಮಾನಸಿಕವಾಗಿ ಕುಗ್ಗಿದ್ದರಂತೆ.  ಆಗಾಗ ಮಗನ ಜೊತೆ ಜಗಳವಾಡುತ್ತಿದ್ದರಂತೆ. ಕಿರಣ್ ತಾಯಿ ಕ್ಯಾನ್ಸರ್ ಪೇಶೆಂಟ್ ಆಗಿರೋದ್ರಿಂದ ಮಗಳ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ರು. ಹೀಗಾಗಿ ಪುತ್ರ ಕಿರಣ್ ಇಡೀ ಮನೆಯ ಕೆಲಸ ಮಾಡಿಕೊಂಡು ಜೊತೆಗೆ ತೋಟದ ಕೆಲಸ ಮಾಡಿಕೊಂಡು ಅಪ್ಪನನ್ನ ನಿಭಾಯಿಸಿಕೊಂಡು ಹೋಗ್ತಿದ್ದ. ಇಷ್ಟೆಲ್ಲಾ ಕೆಲಸ ಮಾಡಿದ್ರೂ ಮಗನ ಮೇಲೆ ಮನಬಂದಂತೆ ರೇಗೋದು, ಅವಾಚ್ಯ ಶಬ್ಧಗಳಿಂದ ಬೈಯೋದನ್ನ ತಂದೆ ಮಾಡುತ್ತಿದ್ದರಂತೆ. ನಿನ್ನೆ ಕೂಡ ತೋಟದ ಕೆಲಸ ಮುಗಿಸಿಕೊಂಡು ಹೋಟೆಲ್​​ನಿಂದಲೇ ಊಟ  ಪಾರ್ಸೆಲ್  ತಂದು ಮನೆಗೆ ಎಂಟ್ರಿಯಾಗೋ ಹೊತ್ತಿನಲ್ಲಿ ಪರವಾನಿಗೆ ಪಡೆದುಕೊಂಡ ಕೋವಿಯಿಂದ ಶೂಟ್ ಮಾಡಿ ಮಗನ ಕೊಲೆ ಮಾಡಲಾಗಿದೆ.

ಊರಿನಲ್ಲಿ ಗುಂಡಿನ ಶಬ್ಧ ಕೇಳುತ್ತಲೇ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಓಡಿ ಹೋಗಿ ನೋಡಿದ್ರೆ ಅಷ್ಟೊತ್ತಿಗಾಗಲೇ ಕಿರಣ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಸ್ಥಳಕ್ಕೆ ದೌಡಾಯಿಸಿದ ಗೋಣಿಬೀಡು ಪೊಲೀಸರು ಆರೋಪಿ ಲಕ್ಷ್ಮಣ್ಗೌಡನನ್ನ ಬಂಧಿಸಿದ್ದಾರೆ.

ಕಿರಣ್​​ ತೋಟ ಗದ್ದೆ ಅಂತಾ ಕೆಲಸ ಮಾಡಿಕೊಂಡು, ಬೆವರು ಸುರಿಸಿ ಬದುಕು ಕಟ್ಟಿಕೊಂಡಿದ್ದ. ಅಕ್ಕನ ಮದುವೆ ಕೂಡ ಆಗಿದ್ದರಿಂದ, ತಾಯಿಯ ಆರೋಗ್ಯ ಕೂಡ ಹದೆಗೆಟ್ಟಿದ್ದರಿಂದ ಅಪ್ಪನ ಸೇವೆ ಮಾಡಿಕೊಂಡು ಜೀವನ ಮಾಡ್ತಿದ್ದ. ಹೀಗಿದ್ರೂ ಪಾಪಿ ಅಪ್ಪ ಮಗನನ್ನೇ ಗುಂಡು ಹಾರಿಸಿ ಬಲಿ ತೆಗೆದುಕೊಂಡಿರುವುದು ನಿಜಕ್ಕೂ ದುರಂತವೇ ಸರಿ. ಮಗನನ್ನ ಕೊಲೆ ಮಾಡಿ ಪೊಲೀಸರ ಬಳಿ ನಾನೇ ಕೊಲೆ ಮಾಡಿದ್ದು, ನನಗೆ ಬೈದಾ ಅದಕ್ಕೆ ಕೊಲೆ ಮಾಡಿದ್ದೀನಿ ಅಂತಾ ಆರೋಪಿ ಒಪ್ಪಿಕೊಂಡಿದ್ದಾನೆ. ಅಪ್ಪನ ಸಿಟ್ಟಿಗೆ ಮಗನೇ ಬಲಿಯಾಗಿರೋದು ನಿಜಕ್ಕೂ ದುರುಂತವೇ ಸರಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: