ಒಂದೇ ಗ್ರಾಮದಲ್ಲಿ 72 ಮಂದಿ ಕೊರೋನಾ ಸೋಂಕಿತರು : ಆತಂಕದಲ್ಲಿ ಗ್ರಾಮದ ಜನರು

ಜಿಲ್ಲಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಸಿಡಿಪಿಒ ನೇತ್ರತ್ವದಲ್ಲಿ ತಂಡ‌ ರಚಿಸಿ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಮನೆ ಮನೆಗೆ ನೀಡಲು ಸೂಚಿಸಿದ್ದಾರೆ.

news18-kannada
Updated:August 2, 2020, 8:15 AM IST
ಒಂದೇ ಗ್ರಾಮದಲ್ಲಿ 72 ಮಂದಿ ಕೊರೋನಾ ಸೋಂಕಿತರು : ಆತಂಕದಲ್ಲಿ ಗ್ರಾಮದ ಜನರು
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಆಗಸ್ಟ್.02): ರಾಯಚೂರು ತಾಲೂಕಿನ ತಲೆಮಾರಿ ಗ್ರಾಮ ಈಗ ಜಿಲ್ಲೆಯಲ್ಲಿ ಕೊರೋನಾ ಹಾಟ್ ಸ್ಪಾಟ್ ಆಗಿದೆ. ಮೊನ್ನೆ ಒಂದೇ ದಿನ 38 ಮಂದಿಗೆ ಪಾಸಿಟಿವ್​ ಬಂದಿತ್ತು, ನಿನ್ನೆ ಮತ್ತೆ ಇಬ್ಬರಿಗೆ  ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಗ್ರಾಮದ ಒಟ್ಟು ಸೋಂಕಿತರ ಸಂಖ್ಯೆ 72ಕ್ಕೆ ಏರಿದೆ. ಈ ಗ್ರಾಮದಲ್ಲಿ 1080 ಮನೆಗಳಿದ್ದು ಇಡೀ ಗ್ರಾಮದಲ್ಲಿ ಭೀತಿ ಆವರಿಸಿದೆ.

ರಾಯಚೂರು ತಾಲೂಕಿನ ತಲಮಾರಿ ಗ್ರಾಮದಲ್ಲಿ ಅಂದಾಜು 5 ಸಾವಿರ ಜನಸಂಖ್ಯೆ ಇದೆ. ಇದರಲ್ಲಿ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಉಳಿದವರು ಮನೆಯಿಂದ ಹೊರಗಡೆ ಬರುತ್ತಿಲ್ಲ. ಶದರಾವಣ ಮಾಸದ ಹಬ್ಬಗಳನ್ನು ಆಚರಿಸುತ್ತಿಲ್ಲ. ನಾಗರ ಪಂಚಮಿಯನ್ನ ಮನೆಯಲ್ಲೇ ಆಚರಿಸಿಕೊಂಡಿರುವ ಜನ ವರಮಹಾಲಕ್ಷ್ಮಿ ಪೂಜೆಯನ್ನೂ ಮನೆಯಲ್ಲೇ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಜನತೆ ಯಾವಾಗ ಕೊರೋನಾ ನಮಗೂ ಬರುತ್ತೊ ಎಂಬ ಆತಂಕದಲ್ಲಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗೆ ಗ್ರಾಮದಲ್ಲಿ ನಡೆದ ಮದುವೆಗಳಲ್ಲಿ ಹೆಚ್ಚು ಜನ ಸೇರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.

ಮದುವೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಜನ ಎಗ್ಗಿಲ್ಲದೇ ಸೇರಿದ್ದರಿಂದ ಇಡೀ ಊರಿನ ತುಂಬಾ ಕೊರೋನಾ ಹಬ್ಬಿದೆ. ಗ್ರಾಮದಲ್ಲಿ ನಡೆದ ಐದು ಮದುವೆಗಳಲ್ಲಿ ಕೆಲ ಮದುವೆಗಳಿಗೆ ಅನುಮತಿಯನ್ನೇ ಪಡೆದಿಲ್ಲ. ಅಲ್ಲದೇ ನೂರಾರು ಜನರನ್ನ ಮದುವೆಗಳಿಗೆ ಸೇರಿಸಲಾಗಿದೆ. ಸದ್ಯ ಗ್ರಾಮದಲ್ಲಿ ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಮಧ್ಯೆ ಜಿಲ್ಲಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಸಿಡಿಪಿಒ ನೇತ್ರತ್ವದಲ್ಲಿ ತಂಡ‌ ರಚಿಸಿ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಮನೆ ಮನೆಗೆ ನೀಡಲು ಸೂಚಿಸಿದ್ದಾರೆ.

ಇದನ್ನೂ ಓದಿ :  ಒಂದೇ ಕುಟುಂಬದ 11 ಜನ ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲಿದ್ದೆ ಹಿಮ್ಮೆಟ್ಟಿಸಿದರು ಕೊರೋನಾ ಸೋಂಕು

ಈ ಗ್ರಾಮಸ್ಥರು ರಾಯಚೂರಿಗೆ ಬರುವುದು, ರಾಯಚೂರು ಹಾಗು ಸುತ್ತಲಿನ ಗ್ರಾಮಸ್ಥರು ತಿರುಗಾಡಿದ್ದರಿಂದ ಸೋಂಕು ಇನ್ನಷ್ಟು ಹರಡುವ ಭೀತಿ ಇದೆ. ಇಡೀ ಗ್ರಾಮದ ಜನರ ಗಂಟಲ ದ್ರವ ಪರೀಕ್ಷೆ ಮಾಡಬೇಕಾಗಿದೆ, ಪುಟ್ಟ ಗ್ರಾಮದಲ್ಲಿ ಮದುವೆಯಿಂದಾಗಿ ಈಗ ಸೀಲ್ ಡೌನ್ ಆಗಿದೆ. ಸೋಂಕಿತರನ್ನು ರಾಯಚೂರಿನ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಗಿದೆ, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ನಿನ್ನೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು 109 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2381ಕ್ಕೆ ಏರಿಕೆಯಾಗಿದೆ, ನಿನ್ನೆ ಒಂದೇ ದಿನ 67 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈಗ ಜಿಲ್ಲೆಯಲ್ಲಿ 885 ಸಕ್ರಿಯ ಪ್ರಕರಣಗಳಿವೆ. ಕೋವಿಡ್ ಆಸ್ಪತ್ರೆಯಲ್ಲಿ 109 ಜನರಿದ್ದರೆ, ಕೋವಿಡ್ ಕೇರ್ ಸೆಂಟರ್ ನಲ್ಲಿ 778 ಜನರಿದ್ದಾರೆ.
Published by: G Hareeshkumar
First published: August 2, 2020, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading