HOME » NEWS » District » 7 MONTHS PREGNANT NURSE HAVE CORONAVIRUS INFECTED IN CHIKKAMAGALURU RH

ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೂ ಕೊರೋನಾ ಪಾಸಿಟಿವ್; ಆಕೆಯ ಪತಿಗೂ ಸೋಂಕು

ಒಂದು ವಾರದಿಂದ ಬಳ್ಳಾವರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದವರಿಗೆ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಅಲ್ಲದೇ ತುಂಬಾ ಗಂಭೀರ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಸ್ವಾಬ್ ಟೆಸ್ಟ್ ಮಾಡಿಸುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

news18-kannada
Updated:July 31, 2020, 3:32 PM IST
ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೂ ಕೊರೋನಾ ಪಾಸಿಟಿವ್; ಆಕೆಯ ಪತಿಗೂ ಸೋಂಕು
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು: ಆಕೆ ಏಳು ತಿಂಗಳ ಗರ್ಭೀಣಿ. ಸಾಮಾನ್ಯವಾಗಿ ಗರ್ಭಿಣಿಯರು ಹೊರಗೆ ಕಾಲಿಡದ ಕಾಲ ಇದು. ಕೊರೋನಾ ರಣಕೇಕೆ ಹಾಕುತ್ತಿರುವ ಇಂತಹ ಸಮಯದಲ್ಲಿ ಹೊರಗೆ ಬರೋದು ಕೂಡ ಸೂಕ್ತವಲ್ಲ. ಆದರೆ ಕೊರೋನಾ ವಾರಿಯರ್ ಆಗಿ ಕರ್ತವ್ಯ ಮಾಡುತ್ತಿದ್ದ ಆ ಗರ್ಭಿಣಿ ಮಾತ್ರ ಮನೆಯಿಂದ ಹೊರಗೆ ಬರಲೇಬೇಕಾಗಿತ್ತು. ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದೆ ಆಕೆಗೆ ಶಾಪವಾಗಿದೆ. ಕ್ರೂರಿ ಕೊರೋನಾ ನರ್ಸ್ ಗೂ ತಗುಲಿದ್ದು, ಇದೀಗ ಅನೇಕರಿಗೆ ಕೊರೋನಾ ಕಂಟಕ ಎದುರಾಗಿದೆ.

ಸದ್ಯ ಕೊರೋನಾ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಈ ಮಹಾಮಾರಿಯಿಂದ ಯಾರಿಗೂ ಕೂಡ ನೆಮ್ಮದಿಯಿಲ್ಲದಂತಾಗಿದೆ. ಜನರು ಮನೆಯಿಂದ ಹೊರಗೆ ಬರೋಕೆ ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ಆದರೆ ಎಲ್ಲರೂ ಮನೆಯಲ್ಲಿದ್ದರೆ, ವೈದ್ಯಕೀಯ ಸಿಬ್ಬಂದಿ ಮಾತ್ರ ಹೊರಗೆ ಬರಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಗರ್ಭಿಣಿಯಾಗಿದ್ದರೂ ಅನಿವಾರ್ಯವಾಗಿ ಕರ್ತವ್ಯ ಮಾಡಲೇಬೇಕಾಗಿತ್ತು, ತಲೆಕೆಡಿಸಿಕೊಳ್ಳದೇ ಕೆಲಸ ಮಾಡಲು ಬಂದ ನರ್ಸ್​ಗೆ ಇದೀಗ ಕೊರೋನಾ ಸೋಂಕು ತಗುಲಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಬಳ್ಳಾವರದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಗೆ ಸಂಕಷ್ಟ ಎದುರಾಗಿದೆ. ಏಳು ತಿಂಗಳ ಗರ್ಭೀಣಿಯಾಗಿದ್ದರೂ ರಜೆ ಪಡೆದುಕೊಳ್ಳದಂತಹ ಸ್ಥಿತಿ ನರ್ಸ್ ಗೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಕೊರೋನಾ ವಾರಿಯರ್ ಆಗಿ ನರ್ಸ್ ಕರ್ತವ್ಯ ಮಾಡುತ್ತಿದ್ದರು. ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದೇ ಇದೀಗ ಕಂಟಕವಾಗಿ ಪರಿಣಮಿಸಿದ್ದು, ಸ್ವತಃ ನರ್ಸ್ ಗೂ ಕೂಡ ಶಾಕ್ ಆಗಿದೆ.

ಕೇವಲ ನರ್ಸ್ ಗೆ ಮಾತ್ರವಲ್ಲ, ಆಕೆಯ ಪತಿಗೂ ಕೊರೋನಾ ವಕ್ಕರಿಸಿದೆ. ಕೊರೋನಾ ಸಂಕಷ್ಟ ಸಮಯದಲ್ಲಿ ಹತ್ತಾರು ಜನರಿಗೆ ಚಿಕಿತ್ಸೆ ನೀಡಿದ ಜನರಿಗೆ ಇದೀಗ ಆತಂಕ ಎದುರಾಗಿದ್ದು, ಬಳ್ಳಾವರದ ಸುತ್ತಮುತ್ತಲಿನ ಜನರಿಗೆ ಕೊರೊನಾ ಆತಂಕ ಎದುರಾಗಿದೆ.

ಬಳ್ಳಾವರದ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಹತ್ತಾರು ಜನರು ಚೆಕ್ ಅಪ್ ಗಾಗಿ ಬರುತ್ತಿದ್ದರು. ಆದರೆ ಇದೀಗ ಕೊರೋನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದ ನರ್ಸ್ ಗೂ ಕೊರೋನಾ ಬಂದಿರೋದು ಜನರ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಒಂದು ವಾರದಿಂದ ಬಳ್ಳಾವರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದವರಿಗೆ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಅಲ್ಲದೇ ತುಂಬಾ ಗಂಭೀರ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಸ್ವಾಬ್ ಟೆಸ್ಟ್ ಮಾಡಿಸುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: Kamal Pant: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ; ನೂತನ ಕಮಿಷನರ್ ಆಗಿ ಕಮಲ್ ಪಂಥ್ ನೇಮಕ

ಒಟ್ಟಿನಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಹಳ್ಳಿ ಹಳ್ಳಿಗೂ ವ್ಯಾಪಿಸಿರುವುದರಿಂದ ಗ್ರಾಮೀಣ ಭಾಗದ ಜನರು ಕೂಡ ಆತಂಕ ಪಡುವಂತಾಗಿದೆ.
Published by: HR Ramesh
First published: July 31, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories