ದಾವಣಗೆರೆ; ರಾಜ್ಯದ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದ್ರೂ, ಈವರೆಗೂ ಅವರ ಬೇಡಿಕೆ ಈಡೇರಿಲ್ಲ. ಆದ್ರೆ ಯಾವುದೇ ಬೇಡಿಕೆ ಸಲ್ಲಿಸಿದ ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲು ನೀಡಿದ್ದಾರೆ. ಈ ಬಗ್ಗೆ ಇಂದು ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಿಷಯ ಪ್ರಸ್ತಾಪಕ್ಕೆ ಬಂದು ಆಕ್ರೋಶ ಭುಗಿಲೆದ್ದಿತ್ತು. ಶೇ. 7.5ರಷ್ಟು ಮೀಸಲಾತಿ ನೀಡಬೇಕು ತಪ್ಪಿದ್ದರೆ ಮುಂದಿನ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜದವರು ಬುದ್ಧಿ ಕಲಿಸುತ್ತಾರೆ ಎಂದು ಶ್ರೀಗಳು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ರು. ಪ್ರಸ್ತುತ ಮೀಸಲನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಎಂಬುದು ವಾಲ್ಮೀಕಿ ಜನಾಂಗ ಹಲವು ವರ್ಷಗಳ ಬೇಡಿಕೆ. ಈ ಬೇಡಿಕೆಗೆ ಎಲ್ಲ ಸರ್ಕಾರಗಳು ಭರವಸೆ ನೀಡಿದವೇ ಹೊರತು ಯಾವುದೇ ಅಧಿಕೃತ ಘೋಷಣೆ ಹೊರಡಿಸಲಿಲ್ಲ.
ಈ ಹಿನ್ನೆಲೆ ಇಂದು, ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀಮಠದ ಆವರಣದಲ್ಲಿ ವಾಲ್ಮೀಕಿ ಸಮಾಜದ ರಾಜ್ಯಮಟ್ಟದ ಸಭೆ ನಡೆಯಿತು. ರಾಜ್ಯದ 15 ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಬಹುತೇಕ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಮೀಸಲಾತಿ ಹೆಚ್ಚಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆ ರಾಜೀನಾಮೆ ನೀಡುವುದು ಸೂಕ್ತ ಎಂದು ಹಲವರು ಅಭಿಪ್ರಾಯ ತಿಳಿಸಿದ್ರು. ಅದಕ್ಕೆ ಎಲ್ಲ ಶಾಸಕರು ಶ್ರೀಗಳು ಹೇಳಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದ್ರು. ಆದ್ರೆ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಇದಕ್ಕೆ ವಿರೋಧಿಸಿದ್ರು. ರಾಜೀನಾಮೆ ನೀಡುವುದರಿಂದ ಮೀಸಲಾತಿ ಜಾರಿಯಾಗಲ್ಲ.
ಅಧಿಕಾರದಲ್ಲಿದ್ದೇ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದ್ರು. ಜತೆಗೆ ಶೇ. 3ರಷ್ಟಿರುವ ಜನರಿಗೆ ಸರ್ಕಾರ ಶೇ. 10 ರಷ್ಟು ಮೀಸಲಾತಿ ನೀಡಿದ್ದು ಎಲ್ಲಿಂದ ಎಂಬುದರ ಬಗ್ಗ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ್ರೆ, ವಾಲ್ಮೀಕಿ ಜನಾಂಗ ಬೇಡಿಕೆ ಶೇ. 7.5ರಷ್ಟಕ್ಕೆ ಮೀಸಲು ಹೆಚ್ಚಳ ಮಾಡಿಸುವುದಾಗಿ ಭರವಸೆ ನೀಡಿದ್ದೆ. ಈಗಲೂ ಆ ಮಾತಿಗೆ ಬದ್ದನಾಗಿದ್ದೇನೆ. ಪಕ್ಷಭೇದ ಮರೆತು ಎಲ್ಲ ಶಾಸಕರು ಒಗ್ಗಟ್ಟಾಗಿ ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗೋಣ. ಸಿಎಂ ಯಡಿಯೂರಪ್ಪ ಮೀಸಲಾತಿ ಹೆಚ್ಚಳ ಮಾಡ್ತಾರೆ ಎಂಬ ಭರವಸೆ ನನಗಿದೆ ಎಂದು ಶ್ರೀರಾಮುಲು ಹೇಳಿದ್ದರು.
ಇದನ್ನೂ ಓದಿ : ಡ್ರಗ್ಸ್ ಕೇಸ್‌ನಲ್ಲಿ ಬಂಧಿತರ ರಕ್ಷಣೆಗೆ ಕೆಲವು ಸಚಿವರೇ ಮುಂದಾಗಿದ್ದಾರೆ; ಸಿದ್ದರಾಮಯ್ಯ ಆರೋಪ
ಮೀಸಲು ಹೆಚ್ಚಳ ಈ ಬೇಡಿಕೆ ಹಿನ್ನೆಲೆ, ಸಿದ್ದರಾಮಯ್ಯ ಸಿಎಂ ಆಗಿದ್ದ ಆವಧಿಯಲ್ಲಿ ರಾಜನಹಳ್ಳಿ ಶ್ರೀಮಠದಿಂದ ರಾಜಧಾನಿವರೆಗೆ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ಬದಲ್ಲಿ ಪಾದಯಾತ್ರೆ ನಡೆದಿತ್ತು. ಈ ಬಗ್ಗೆ ಶ್ರೀಗಳ ನೆನಪಿಸಿದ್ರು. ನಾವು ಮನವಿ ಸಲ್ಲಿಸಿದ್ರೂ, ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆದ್ರೆ, ಮೇಲ್ವರ್ಗದವರಿಗೆ ಶೇ. 10 ರಷ್ಟು ಮೀಸಲಾತಿ ನೀಡಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.ಸಿಎಂಎ ಯಡಿಯೂರಪ್ಪ ವಿಷಯದಲ್ಲಿ ನಾನು ಸಾಫ್ಟ್ ಅಗಿದ್ದೇನೆ ಎಂದು ಕಾಂಗ್ರೆಸ್-ಜೆಡಿಎಸ್ ಮುಖಂಡರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಶ್ರೀರಾಮುಲು ನೇತೃತ್ವದಲ್ಲಿ ಇದೇ ತಿಂಗಳ 21ರಂದು ನಿಯೋಗ ಸಿಎಂ ಭೇಟಿ ಮಾಡಲಿದೆ. ಅವರು ಸ್ಪಂದಿಸಿದ್ರೆ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ